ದುಬೈ – ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಮತ್ತು ಸೈನ್ಯದಳದ ಪ್ರಮುಖ ಪರವೇಝ ಮುಷರ್ರಫ್ ನಿಧನರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ಮುಷರ್ರಫ್ ಕಳೆದ ೮ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಪರವೇಝ ಮುಷರ್ರಫ್ ಇವರ ಕುಟುಂಬ ವಿಭಜನೆಯ ಮೊದಲು ದೆಹಲಿಯಲ್ಲಿ ವಾಸವಾಗಿದ್ದರು. ಅವರ ಅಜ್ಜ ತೆರಿಗೆ ಅಧಿಕಾರಿಯಾಗಿದ್ದರು. ಅವರ ತಂದೆ ಕೂಡ ಬ್ರಿಟಿಷ್ ಸರಕಾರದಲ್ಲಿ ದೊಡ್ಡ ಅಧಿಕಾರಿಯಾಗಿದ್ದರು. ಮುಷರ್ರಫ್ ಇವರ ತಾಯಿ ಬೇಗಮ ಜರೀನಾ ಇವರು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದರು. ಹಳೆಯ ದೆಹಲಿಯಲ್ಲಿ ಮುಷರ್ರಫ್ ಕುಟುಂಬದ ದೊಡ್ಡ ಬಂಗಲೇ ಇತ್ತು. ಮುಷರ್ರಫ್ ಹುಟ್ಟಿದ ನಂತರ ೪ ವರ್ಷ ಅಲ್ಲೇ ವಾಸವಾಗಿದ್ದರು. ನಂತರ ವಿಭಜನೆಯದಿಂದ ಅವರ ಕುಟುಂಬ ಪಾಕಿಸ್ತಾನಕ್ಕೆ ಸ್ಥಳಾಂತರವಾದರು.
ಪಾಕಿಸ್ತಾನದ ಮಾಜಿ ಅಧ್ಯಕ್ಷ 79 ವರ್ಷದ ಪರ್ವೇಜ್ ಮುಷರಫ್ ನಿಧನ https://t.co/Tbb95N7r46 via @KannadaPrabha #Pakistan #PervezMusharraf #PassedAway #Death #Dubai
— kannadaprabha (@KannadaPrabha) February 5, 2023
ಮಹಾವಿದ್ಯಾಲಯದ ಶಿಕ್ಷಣ ಪೂರ್ಣವಾದ ನಂತರ ೨೧ ನೇ ವಯಸ್ಸಿಗೆ ಪರವೇಝ ಮುಷರ್ರಫ್ ಪಾಕಿಸ್ತಾನಿ ಸೈನ್ಯದಲ್ಲಿ ಕಿರಿಯ ಅಧಿಕಾರಿಯಾಗಿ ನೇಮಕಗೊಂಡರು. ಅವರು ೧೯೬೫ ಮತ್ತು ೧೯೭೧ ರಲ್ಲಿ ಭಾರತದ ಜೊತೆ ನಡೆದ ಯುದ್ಧದಲ್ಲಿ ಭಾಗವಹಿಸಿದ್ದರು. ಅವರು ೧೯೯೮ ರಲ್ಲಿ ಪರವೇಝ ಮುಷರ್ರಫ್ ಸೈನ್ಯದಳದ ಪ್ರಮುಖರಾದರು. ೧೯೯೯ ರಲ್ಲಿ ಜನರಲ್ ಮುಷರ್ರಫ್ ಇವರು ಅಂದಿನ ಪ್ರಧಾನ ಮಂತ್ರಿ ನವಾಜ್ ಶರೀಫರನ್ನು ಪದಚ್ಯುತಗೊಳಿಸಿ ಪಾಕಿಸ್ತಾನದ ಸರ್ವಾಧಿಕಾರಿಯಾದರು. ಅಧಿಕಾರ ಕೈಗೆ ತೆಗೆದುಕೊಳ್ಳುತ್ತಲೇ ನವಾಝ ಶರೀಫ್ ಇವರು ಕುಟುಂಬ ಸಹಿತ ಪಾಕಿಸ್ತಾನ ಬಿಡಬೇಕಾಯಿತು. ಮುಷರ್ರಫ್ ಇವರು ಭಾರತದ ಕಾರ್ಗಿಲ್ ಮೇಲೆ ನಿಯಂತ್ರಣ ಪಡೆಯುವುದಕ್ಕೆ ೧೯೯೯ ರಲ್ಲಿ ದಾಳಿ ನಡೆಸಿದ್ದರು. ಮತ್ತು ಆ ಯುದ್ಧದಲ್ಲಿ ಪಾಕಿಸ್ತಾನ ಸೋಲುಂಡಿತು