‘ನಮಾಜ್ ಮಾಡಿ ಮತ್ತು ಭಯೋತ್ಪಾದಕರಾಗಿರಿ’, ಇದೇ ಇಸ್ಲಾಂನ ಅರ್ಥ ! – ಯೋಗಋಷಿ ರಾಮದೇವಬಾಬಾ

ಚರ್ಚ್‌ನಲ್ಲಿ ಮೇಣದ ಬತ್ತಿ ಹಚ್ಚಿದರೆ ಎಲ್ಲ ಪಾಪಗಳು ನಿವಾರಣೆಯಾಗುತ್ತವೆ !

ಬಾಡಮೇರ (ರಾಜಸ್ತಾನ) – ಇಸ್ಲಾಂನ ಅರ್ಥ ಕೇವಲ ನಮಾಜ್ ಮಾಡುವುದಾಗಿದೆ. ಇಸ್ಲಾಂನಲ್ಲಿ ೫ ಸಲ ನಮಾಜ್ ಮಾಡಿದರೆ ಏನು ಬೇಕಾದರೂ ಮಾಡಬಹುದು; ಹಿಂದೂ ಹುಡುಗಿಯರನ್ನು ಅಪಹರಿಸಿರಿ ಅಥವಾ ಭಯೋತ್ಪಾದಕರಾಗಿ ಮನಬಂದಂತೆ ವರ್ತಿಸಿರಿ. ಕ್ರೈಸ್ತ ಧರ್ಮದಲ್ಲಿಯೂ ಹೀಗೆಯೇ ಇದೆ. ಚರ್ಚ್‌ನಲ್ಲಿ ಮೇಣದಬತ್ತಿ ಹಚ್ಚಿದರೆ, ಎಲ್ಲ ಪಾಪಗಳು ನಿವಾರಣೆಯಾಗುವವು, ಎಂದು ಯೋಗಋಷಿ ರಾಮದೇವಬಾಬಾ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಹೇಳಿದರು. ಆದರೆ ‘ಕುರಾನ್ ಮತ್ತು ಬೈಬಲ್‌ನಲ್ಲಿ ಹೀಗೆ ಏನೂ ಕಲಿಸುವುದಿಲ್ಲ’, ಎಂದು ಕೂಡ ಅವರು ಸ್ಪಷ್ಟಪಡಿಸಿದರು. ಇಲ್ಲಿನ ಪನೋಣಿಯಾದಲ್ಲಿನ ಧರ್ಮಪುರಿ ಮಹಾರಾಜ ಮಂದಿರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತಾನಾಡುತ್ತಿದ್ದರು. ಈ ಸಂದರ್ಭದಲ್ಲಿ ಆಚಾರ್ಯ ಸ್ವಾಮೀ ಅವಧೇಶಾನಂದ ಗಿರಿ ಉಪಸ್ಥಿತರಿದ್ದರು.

ಯೋಗಋಷಿ ರಾಮದೇವಬಾಬಾ ಇವರು ಮಂಡಿಸಿದ ಅಂಶಗಳು

೧. ೫ ಸಲ ನಮಾಜ್ ಮಾಡಿದರೆ ‘ಜನ್ನತ’ (ಸ್ವರ್ಗ) ಲಭಿಸುತ್ತದೆ. ಜನ್ನತನಲ್ಲಿ ಸರಾಯಿ ಮತ್ತು ಅಪ್ಸರೆಯರು ಸಿಗುತ್ತಿದ್ದರೆ, ಇಂತಹ ‘ಜನ್ನತ’ ‘ಜಹನ್ನುಮ್’ಗಿಂತ (ನರಕಕ್ಕಿಂತ) ಕೆಟ್ಟದಿರಬಹುದು. ಎಲ್ಲ ಜಾತಿಯ ಜನರನ್ನು ಇಸ್ಲಾಂಗೆ ಮತಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ.

೨. ಕೆಲವರು ಸಂಪೂರ್ಣ ಜಗತ್ತನ್ನು ಇಸ್ಲಾಂಮಯ ಮಾಡುವ ಬಗ್ಗೆ ಮಾತನಾಡುತ್ತಾರೆ, ಕೆಲವರು ಜಗತ್ತನ್ನು ಕ್ರೈಸ್ತಮಯ ಮಾಡುವ ಬಗ್ಗೆ ಮಾತನಾಡುತ್ತಾರೆ. ಕೆಲವರು ಮೀಸೆ ತೆಗೆದು ಗೋಲ್‌ಟೊಪ್ಪಿ ಹಾಕುತ್ತಾರೆ. ಇದು ಮೂರ್ಖತನವಾಗಿದೆ. ಜನರು ಇದೇ ವಿಚಾರದಲ್ಲಿದ್ದು ಸಂಪೂರ್ಣ ಜಗತ್ತನ್ನು ಇಸ್ಲಾಂಮಯಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

೩. ಮುಸಲ್ಮಾನರು ಹಾಗೂ ಕ್ರೈಸ್ತರಲ್ಲಿ ಯಾವುದೇ ಧೋರಣೆಯಿಲ್ಲ; ಆದರೂ ಅವರು ಜಗತ್ತಿನಲ್ಲಿ ಅವರ ಧರ್ಮದ ಪ್ರಭಾವವನ್ನು ನಿರ್ಮಾಣ ಮಾಡುವ ಬಗ್ಗೆ ಮಾತನಾಡುತ್ತಾರೆ.

೪. ಹಿಂದೂ ಧರ್ಮ ಏನು ಹೇಳುತ್ತದೆ, ಬೆಳಿಗ್ಗೆ ಬ್ರಹ್ಮಮುಹೂರ್ತದಲ್ಲಿ ಏಳಿರಿ. ಯೋಗಾಸನ ಮಾಡಿರಿ. ಈಶ್ವರನ ಅಥವಾ ತಮ್ಮ ಆರಾಧ್ಯದೇವರ ಧ್ಯಾನ ಮಾಡಿರಿ. ದಿನವಿಡೀ ಒಳ್ಳೆಯ ಕರ್ಮ ಮಾಡಿರಿ. ಧರ್ಮಾಚರಣೆ ಮಾಡಿರಿ, ಜೀವಗಳ ಸೇವೆ ಮಾಡಿರಿ. ಇದೇ ಸನಾತನ ಧರ್ಮವಾಗಿದೆ ಎಂದು ಹೇಳಿದರು.