ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ಇವರನ್ನು ಬಂಧಿಸಲಾಗಿದೆ. ಬಂಧನದ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ‘ನನ್ನ ಬಂಧನದ ಹಿಂದೆ ಶಹಬಾಜ್ ಶರೀಫ್ ಇವರ ಸರಕಾರದ ಕೈವಾಡವಿದೆ, ಎಂದು ಆರೋಪ ಮಾಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರು ಅವರ ಬಂಧನ ಖಂಡಿಸಿದ್ದಾರೆ. ಇಮ್ರಾನ್ ಖಾನ್ ಇವರ ಸರಕಾರದಲ್ಲಿ ರಶೀದ್ ಗೃಹಸಚಿವರಾಗಿದ್ದರು. ಈ ಹಿಂದೆ ಅವರ ಸರಕಾರದಲ್ಲಿನ ಓರ್ವ ಸಚಿವ ಫವಾದ ಚೌದರಿ ಇವರನ್ನು ಬಂಧಿಸಿದ್ದಾರೆ.
#Pakistan Former Interior Minister #SheikhRashidAhmed arrested https://t.co/tMbP2NoYKI
— Republic (@republic) February 2, 2023
ಭಾರತದ ಜೊತೆ ಪರಮಾಣು ಯುದ್ಧ ಮಾಡುವ ಬೆದರಿಯೊಡ್ಡದ್ದ !
ಶೇಖ ರಶೀದ್ ಇವರು ಸಚಿವರಾಗಿದ್ದಾಗ ಭಾರತದ ಜೊತೆ ಪರಮಾಣು ಯುದ್ಧ ನಡೆಸುವ ಬೆದರಿಕೆ ನೀಡಿದ್ದರು. ಅವರು, ಪಾಕಿಸ್ತಾನದ ಬಳಿ ೧೨೫ ಗ್ರಾಮದಿಂದ ೨೫೦ ಗ್ರಾಂ ತೂಕದ ಪರಮಾಣು ಬಾಂಬ್ ಇದೆ, ‘ಈ ಪರಮಾಣು ಬಾಂಬ್ ಇಸ್ಲಾಂ ನಂಬುವವರಿಗೆ ಹಾನಿ ಮಾಡುವುದಿಲ್ಲ’, ಎಂದು ದಾವೆ ಕೂಡ ಮಾಡಿದ್ದರು. (ಭಾರತದ ಜೊತೆ ಒಂದು ಸಾವಿರ ವರ್ಷ ಯುದ್ಧ ಮಾಡುವ ಅಹಂಕಾರ ಪಡುವ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಜುಲ್ಫಿಕಾರ್ ಅಲಿ ಭುಟ್ಟೋ ಇವರಿಗೆ ಪಾಕಿಸ್ತಾನವೇ ಗಲ್ಲು ಶಿಕ್ಷೆ ವಿಧಿಸಿತು. ಇದನ್ನು ನೋಡುತ್ತಿದ್ದರೆ ಅವರು ಅವರ ಕರ್ಮದಿಂದ ಸಾಯುತ್ತಿದ್ದಾರೆ. ಅವರು ಭಾರತದ ಏನೂ ಕೆಡಕು ಮಾಡಲು ಸಾಧ್ಯವಿಲ್ಲ ! – ಸಂಪಾದಕರು)