‘ಹಿಂದೂ ರಾಷ್ಟ್ರ’ದ ಕುರಿತು ಹೇಳಿಕೆ ನೀಡಿದ್ದರಿಂದ ಸುರೇಶ್ ಚವ್ಹಾಣಕೆ ವಿರುದ್ಧ ಅರ್ಜಿ ದಾಖಲು

ನವದೆಹಲಿ – ನನ್ನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಗಿದೆ. ‘ಸುದರ್ಶನ ಟಿವಿ’ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ ತೆಗೆದುಕೊಂಡಿದ್ದರಿಂದ ಈ ಮೊಕದ್ದಮೆ ದಾಖಲಾಗಿದೆ ಎಂದು ‘ಸುದರ್ಶನ ಟಿವಿ’ವಾಹಿನಿ ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ ಇವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಅರ್ಜಿಯಲ್ಲಿ ಶ್ರೀ ಚವ್ಹಾಣಕೆಯವರ ಮೇಲೆ ದೂರು ದಾಖಲಿಸುವಂತೆ ಮನವಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ‘ಹಿಂದೂ ರಾಷ್ಟ್ರ’ದ ಪ್ರತಿಜ್ಞೆ ತೆಗೆದುಕೊಳ್ಳುವುದು ಅಪರಾಧ ವೇ ? ಎಂದು ಪ್ರಶ್ನಿಸಿದ್ದರು.