ಟಿಪ್ಪಣಿ : ಇಮಾಮ(ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಮುಖ್ಯಸ್ಥ)
೧. ಮಸೀದಿಗಳಲ್ಲಿನ ಇಮಾಮರಿಗೆ ವೇತನ ನೀಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಂವಿಧಾನವಿರೋಧಿ ?
ದೆಹಲಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀ. ಸುಭಾಷ ಅಗರವಾಲ ಇವರು ‘ಇಲ್ಲಿಯವರೆಗೆ ವಿವಿಧ ಇಮಾಮರಿಗೆ ಎಷ್ಟು ವೇತನವನ್ನು ನೀಡಲಾಗಿದೆ ?’, ಎಂದು ದೆಹಲಿ ವಕ್ಫ್ ಬೋರ್ಡ್’ಗೆ ಮಾಹಿತಿಯನ್ನು ಕೇಳಿದ್ದರು; ಆದರೆ ಅನೇಕ ದಿನಗಳಾದರೂ ಅವರಿಗೆ ಈ ಮಾಹಿತಿ ಸಿಗಲಿಲ್ಲ. ಆದುದರಿಂದ ಕೇಂದ್ರದ ಮಾಹಿತಿ ಆಯೋಗದ ಆಯುಕ್ತರಾದ ಶ್ರೀ. ಉದಯ ಮಾಹೂರಕರ ಇವರು ‘ಶ್ರೀ. ಅಗರವಾಲ ಇವರಿಗೆ ಬೇಕಾಗಿರುವ ಮಾಹಿತಿಯನ್ನು ಕೂಡಲೇ ಕೊಡಬೇಕು’, ಎಂದು ‘ದೆಹಲಿ ವಕ್ಫ್ ಬೋರ್ಡ್’ಗೆ ಆದೇಶ ನೀಡಿದರು. ಹಾಗೆಯೇ ‘ಈ ಮಾಹಿತಿಯನ್ನು ನೀಡಲು ವಿಳಂಬವಾಗಿದ್ದರಿಂದ ಅವರಿಗೆ ಆಗಿರುವ ತೊಂದರೆಗಳಿಗಾಗಿ ‘ದೆಹಲಿ ವಕ್ಫ್ ಬೋರ್ಡ್’ ನಷ್ಟಪರಿಹಾರ ಭರಿಸಬೇಕು ಎಂದೂ ಹೇಳಿದರು.
ಶ್ರೀ. ಉದಯ ಮಾಹೂರಕರ ಇವರು ಮುಂದಿನಂತೆ ಹೇಳಿದ್ದಾರೆ, ‘೧೯೯೩ ರಲ್ಲಿ ‘ಅಖಿಲ ಭಾರತೀಯ ಇಮಾಮ ಸಂಘ’ದ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಲಾಗಿತ್ತು. ‘ಅದರಲ್ಲಿ ಮಸೀದಿಗಳಲ್ಲಿ ೫ ಸಲ ಅಜಾನ ಕೂಗುವವರಿಗೆ (ಇಮಾಮರಿಗೆ) ರಾಜ್ಯ ವಕ್ಫ್ ಬೋರ್ಡನಿಂದ ವೇತನ ಸಿಗಬೇಕು’, ಎಂದು ಕೋರಲಾಗಿತ್ತು. ತದನಂತರ ಸರ್ವೋಚ್ಚ ನ್ಯಾಯಾಲಯವು ‘ಅಖಿಲ ಭಾರತೀಯ ಇಮಾಮ ಸಂಘ’ದ ಪರವಾಗಿ ತೀರ್ಪು ನೀಡಿತು. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಯೋಗ್ಯವಾಗಿದ್ದು ತಪ್ಪುದಾರಿಗೆಳೆಯುತ್ತದೆ. ಈ ತೀರ್ಪಿನಿಂದ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಎದುರಾಗಿದ್ದು, ಅದೀಗ ರಾಜಕೀಯ ವಿವಾದದ ವಿಷಯವಾಗಿದೆ.
೨. ರಾಜಕೀಯ ಪಕ್ಷಗಳಂತೆ ಮುಸಲ್ಮಾನರನ್ನುಓಲೈಸುವ ಸರ್ವೋಚ್ಚ ನ್ಯಾಯಾಲಯದ ತೀರ್ಪು !
ಶ್ರೀ. ಮಾಹೂರಕರ ಇವರು ಮಾತನಾಡುತ್ತಾ, ‘ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ತೆರಿಗೆದಾರರ ಸಾಂವಿಧಾನಿಕ ಅಧಿಕಾರದ ಭಂಗವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ಸಂವಿಧಾನದ ಕಲಂ ೨೭ ಅನ್ನು ಉಲ್ಲೇಖಿಸಿದ್ದಾರೆ. ತೆರಿಗೆದಾರರು ಬೆವರು ಸುರಿಸಿ ಸರಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಾರೆ. ಅವರ ತೆರಿಗೆಯಿಂದ ಸಿಗುವ ಹಣವನ್ನು ಒಂದು ವಿಶಿಷ್ಟ ಪಂಥದವರನ್ನು ಸಂತೋಷಪಡಿಸಲು ಮಸೀದಿಯ ಸೇವೆಗಾಗಿರುವ ಇಮಾಮರಿಗೆ ವೇತನ ನೀಡುವುದು ಅನಧಿಕೃತವಾಗಿದೆ. ಹಾಗೆಯೇ ಇಂತಹ ನಿರ್ಣಯ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿಯಾಗಿದೆ. ಯಾವಾಗಲೂ ಮುಸಲ್ಮಾನರನ್ನು ಸಂತೋಷಪಡಿಸುವ ಪ್ರವೃತ್ತಿಯಿಂದಾಗಿಯೇ ೧೯೪೭ ರಲ್ಲಿ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ನಿರ್ಮಿಸಲಾಯಿತು. ಈ ರೀತಿಯ ತೀರ್ಪು ಮತ್ತೊಮ್ಮೆ ವಿಭಜನೆಯ ಅಪಾಯವನ್ನು ಸೃಷ್ಟಿಸುವುದು.
ಶ್ರೀ. ಮಾಹೂರಕರರು ಇಷ್ಟಕ್ಕೆ ನಿಲ್ಲದೇ, ಅವರು ಈ ತೀರ್ಪಿನ ಪ್ರತಿಯನ್ನು ಕೇಂದ್ರೀಯ ಕಾನೂನು ಸಚಿವರಿಗೆ ಕಳುಹಿಸಲು ಸೂಚನೆಯನ್ನು ನೀಡಿದರು. ಅವರು ”ದೇಶದಲ್ಲಿ ಪ್ರತಿಯೊಂದು ಧರ್ಮಕ್ಕೆ ಸಮಾನ ನಡವಳಿಕೆ ಸಿಗುವಂತೆ ನೋಡಬೇಕು. ಇಲ್ಲದಿದ್ದರೆ ದೇಶದ ಐಕ್ಯತೆ ಮತ್ತು ಅಖಂಡತೆಗೆ ಧಕ್ಕೆಯಾಗಬಹುದು. ಹಾಗೆಯೇ ಸಂವಿಧಾನದ ೨೫ ರಿಂದ ೨೮ ಈ ಕಲಂಗಳ ‘ಲೆಟರ ಎಂಡ್ ಸ್ಪಿರಿಟ’ಗಳನ್ನು (ಕಾನೂನಿನ ಉದ್ದೇಶವನ್ನು ಅರಿತುಕೊಂಡು) ಉಪಯೋಗಿಸಬೇಕು. ವಿಶೇಷವಾಗಿ ಕಲಂ ೨೭ರಂತೆ ತೆರಿಗೆದಾರರ ಹಣವನ್ನು ಇಮಾಮರ (ಅಜಾನ ಕೂಗುವವರ) ವೇತನಕ್ಕಾಗಿ ವ್ಯಯಿಸಬಾರದು, ಎನ್ನುವ ಮಾಹಿತಿ ಕಾಣಿಸುತ್ತದೆ. ಈ ಮಾಹಿತಿಯಿಂದ, ದೆಹಲಿ ಸರಕಾರ ಇಮಾಮರ ವೇತನಕ್ಕಾಗಿ ಪ್ರತಿವರ್ಷ ೬೨ ಕೋಟಿ ರೂಪಾಯಿ ಖರ್ಚು ಮಾಡುತ್ತದೆ ಎಂಬುದು ತಿಳಿದು ಬಂದಿದೆ. ದೆಹಲಿ ವಕ್ಫ್‌ಬೋರ್ಡನ ಸ್ವಂತ ಉತ್ಪನ್ನ ಪ್ರತಿ ತಿಂಗಳು ಕೇವಲ ೩೦ ಲಕ್ಷ ರೂಪಾಯಿಗಳಾಗಿದೆ. ಮಸೀದಿಗಳ ಸೇವೆಗಾಗಿ ಪ್ರತಿಯೊಬ್ಬ ಇಮಾಮನಿಗೆ ಸಾಧಾರಣ ೧೬ ರಿಂದ ೧೮ ಸಾವಿರ ರೂಪಾಯಿ ವೇತನವನ್ನು ನೀಡಲಾಗುತ್ತದೆ, ಎನ್ನುವ ಆಶ್ಚರ್ಯದ ವರದಿ ಬಂದಿದೆ. ಶ್ರೀ. ಮಾಹೂರಕರ ಇವರು ಮುಂದೆ ಮಾತನಾಡುತ್ತಾ, ಸರಕಾರವು ಸ್ವಾಧೀನ ಪಡಿಸಿಕೊಂಡಿರುವ ದೇವಸ್ಥಾನಗಳಿಂದ ಕೋಟಿಗಟ್ಟಲೆ ರೂಪಾಯಿಗಳನ್ನು ಪಡೆಯುತ್ತದೆ, ಆದರೆ ಅಲ್ಲಿನ ಅರ್ಚಕರಿಗೆ ಪ್ರತಿ ತಿಂಗಳು ೧-೨ ಸಾವಿರ ರೂಪಾಯಿಗಳು ಮಾತ್ರ ಸಿಗುತ್ತದೆ.
ಇಂದಿನವರೆಗೆ ಆಂಗ್ಲರು ಅಥವಾ ಸ್ವಾತಂತ್ರ್ಯದ ಬಳಿಕ ಬಂದಿರುವ ಕೇಂದ್ರ ಸರಕಾರಗಳು ಯಾವುದೇ ಮಸೀದಿ ಅಥವಾ ಚರ್ಚನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. ಹೀಗಿರುವಾಗ ೧೯೯೩ ರಲ್ಲಿ ‘ಆಲ್ ಇಂಡಿಯಾ ಇಮಾಮ ಆರ್ಗನೈಸೇಶನ’ವು ಕೇಂದ್ರ ಸರಕಾರ ಮತ್ತು ಇತರರ ವಿರುದ್ಧ ನೇರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದೆ. ಅದರಲ್ಲಿ ವಿವಿಧ ಮಸೀದಿಗಳಲ್ಲಿ ಸೇವೆಯನ್ನು ಮಾಡುವ, ಅಜಾನ ಕೂಗುವ / ಮೌಲವಿಗಳಿಗೆ ವೇತನ ನೀಡುವ ಬೇಡಿಕೆಯನ್ನು ಮಾಡಿದೆ.
‘ಮಸೀದಿಗಳಲ್ಲಿ ಸೇವೆಯನ್ನು ಮಾಡುವವರಿಗೆ ಧರ್ಮದ ಬಗ್ಗೆ ನಿಷ್ಠೆ ಇರುವುದರಿಂದ ಅವರು ಹಣ ಪಡೆಯದೇ ಸೇವೆಯನ್ನು ಮಾಡುತ್ತಾರೆ’ ಎಂದು ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ಹೇಳಿವೆ. ಮುಸಲ್ಮಾನ ಧರ್ಮದವರಲ್ಲಿ ಮಸೀದಿಯಲ್ಲಿ ಮಾಡಿರುವ ಸೇವೆಯ ಬಗ್ಗೆ ವೇತನ ನೀಡುವ ಸಂಕಲ್ಪನೆ ೧೯೯೩ ಕ್ಕಿಂತ ಮೊದಲು ಇರಲಿಲ್ಲ. ಹಾಗೆಯೇ ವಕ್ಫ್ ಕಾನೂನುಗಳಲ್ಲಿ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಅಥವಾ ಕೇಂದ್ರೀಯ ಅಥವಾ ರಾಜ್ಯಮಟ್ಟದ ವಕ್ಫ್ ಬೋರ್ಡ್ ವೇತನ ನೀಡಬೇಕೆನ್ನುವ ಯಾವುದೇ ಕಾನೂನು ಅಥವಾ ಯಾವುದೇ ಆಧಾರವಿಲ್ಲ. ಆದುದರಿಂದ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಬೇಕು’, ಎಂದು ಪ್ರತಿವಾದಿಸಿದರೂ ಸರ್ವೋಚ್ಚ ನ್ಯಾಯಾಲಯಕ್ಕೆ ಅವರ ಬಗ್ಗೆ ಪ್ರೀತಿ ಉಕ್ಕಿಬಂದಿತು ಮತ್ತು ಅದು ಈ ತೀರ್ಪನ್ನು ನೀಡಿತು. ಈ ತೀರ್ಪು ಹಿಂದೂ ಧರ್ಮೀಯರು ಮತ್ತು ಮುಸಲ್ಮಾನರಲ್ಲಿ ಭೇದಭಾವ ಮೂಡಿಸುವಂತಹದ್ದಾಗಿದೆ. ಈ ರೀತಿ ರಾಜಕೀಯ ಪಕ್ಷಗಳು ಮಾಡುತ್ತವೆ, ಅದೇ ರೀತಿ ಇದು ಮುಸಲ್ಮಾನರನ್ನು ಓಲೈಸುವ ತೀರ್ಪಾಗಿದೆ.
೩. ಮುಸಲ್ಮಾನರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಸರ್ವೋಚ್ಚ ನ್ಯಾಯಾಲಯದ ಮತ್ತು ವಿವಿಧ ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನುಕೇಂದ್ರ ಸರಕಾರ ರದ್ದುಗೊಳಿಸುವುದು ಆವಶ್ಯಕ !
೧೩ ಮೇ ೧೯೯೩ ರಂದು ಸರ್ವೋಚ್ಚ ನ್ಯಾಯಾಲಯದ ಸದಸ್ಯಪೀಠವು ನೀಡಿರುವ ತೀರ್ಪಿಗನುಸಾರ ಕೇಂದ್ರ ಸರಕಾರ ಮತ್ತು ಕೇಂದ್ರೀಯ ವಕ್ಫ್ ಬೋರ್ಡ್ ಮಸೀದಿಗಳಲ್ಲಿ ಸೇವೆಯನ್ನು ಮಾಡುವ ಇಮಾಮರಿಗೆ ಎಷ್ಟು ವೇತನ ನೀಡಬೇಕು ? ಎಂಬುದರ ಬಗ್ಗೆ ೬ ತಿಂಗಳಲ್ಲಿ ಯೋಜನೆಯನ್ನು ಮಾಡಬೇಕು ಎಂದು ತಿಳಿಸಿದೆ. ಮುಸಲ್ಮಾನ ಧರ್ಮದವರೊಂದಿಗೆ (ಪಂಥದವರೊಂದಿಗೆ) ಈ ರೀತಿ ವಿಶೇಷವಾಗಿ ನಡೆದುಕೊಳ್ಳುವ ಸರ್ವೋಚ್ಚ ನ್ಯಾಯಾಲಯ ಅಥವಾ ವಿವಿಧ ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಕೇಂದ್ರ ಸರಕಾರವು ಕಾನೂನು ರಚಿಸಿ ರದ್ದುಗೊಳಿಸಬೇಕು. ಈ ಕೆಲಸವನ್ನು ಹಿಂದೂಗಳ ಮತಗಳಿಂದ ಆರಿಸಿ ಬಂದಿರುವ ಹಿಂದುತ್ವನಿಷ್ಠ ಸರಕಾರವು ಶೀಘ್ರವಾಗಿ ಮಾಡಬೇಕು ಎಂದು ಬಹುಸಂಖ್ಯಾತ ಭಾರತೀಯರಿಗೆ ಅನಿಸುತ್ತದೆ.’
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೬.೧.೨೦೨೩)