‘ನಾನು ನನ್ನ ಚುನಾವಣಾಕ್ಷೇತ್ರದಲ್ಲಿನ 3 ಪ್ರಾಚೀನ ದೇವಸ್ಥಾನಗಳನ್ನು ಕೆಡವಿದ್ದೇ !’ – (ಅಂತೆ) – ದ್ರಮುಕ ನಾಯಕ ಟಿ.ಆರ್. ಬಾಲು

ತಮಿಳುನಾಡಿನ ದ್ರಮುಕ ನಾಯಕ ಟಿ.ಆರ್. ಬಾಲುರವರ ಹಿಂದೂದ್ವೇಷ !

(ದ್ರಮುಕ ಎಂದರೆ ದ್ರವಿಡ ಮುನ್ನೇತ್ರ ಕಳಘ – ದ್ರವಿಡ ಪ್ರಗತಿ ಸಂಘ)

ದ್ರಮುಕ ನಾಯಕ ಟಿ.ಆರ್. ಬಾಲು

ಚೆನ್ನೈ (ತಮಿಳುನಾಡು) – ನನ್ನ ಮತದಾನಕ್ಷೇತ್ರದ ಜಿ.ಎಸ್.ಟಿ. ಮಾರ್ಗದಲ್ಲಿರುವ 100 ವರ್ಷಗಳಷ್ಟು ಪ್ರಾಚೀನವಾದ ಶ್ರೀ ಸರಸ್ವತಿ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಸ್ಥಾನ ಮತ್ತು ಶ್ರೀ ಪಾರ್ವತಿ ದೇವಸ್ಥಾನಗಳನ್ನು ನಾನೇ ಕೆಡವಿದೆನು, ನನಗೆ ಮತಗಳು ಸಿಗುವುದಿಲ್ಲ; ಎಂದೂ ನನಗೆ ತಿಳಿದಿತ್ತು, ಮತಗಳು ಹೇಗೆ ಸಿಗುತ್ತವೆ ಎನ್ನುವ ಮಾಹಿತಿಯನ್ನು ಮಾಜಿ ಕೇಂದ್ರ ಮಂತ್ರಿ ಮತ್ತು ದ್ರವಿಡ ಮುನ್ನೇತ್ರ ಕಳಘಂ ಪಕ್ಷದ ಟಿ. ಆರ್. ಬಾಲು ಇವರು ಮಧುರೈನಲ್ಲಿ ಒಂದು ಸಭೆಯಲ್ಲಿ ಮಾತನಾಡಿದ ವಿಡಿಯೋವನ್ನು ಭಾಜಪವು ಪ್ರಸಾರ ಮಾಡಿದೆ. ಭಾಜಪ ಪ್ರದೇಶಾಧ್ಯಕ್ಷ ಅಣ್ಣಾಮಲೈ ಇವರು ಈ ವಿಡಿಯೋ ಟ್ವೀಟ ಮಾಡಿದ್ದಾರೆ. ಸೇತುಸಮುದ್ರಮ್ ಯೋಜನೆಗೆ ಬೆಂಬಲ ಸೂಚಿಸುವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

1. ಈ ವಿಡಿಯೋದಲ್ಲಿ ಬಾಲು ಮಸೀದಿಯ ಉಲ್ಲೇಖವನ್ನು ಮಾಡಿದ್ದಾರೆ. ಹಾಗೆಯೇ ದೇವಸ್ಥಾನವನ್ನು ಕೆಡವಿದ್ದರಿಂದ ನೊಂದ ಜನರಿಗೆ ಇದಕ್ಕಿಂತ ದೊಡ್ಡ ದೇವಸ್ಥಾನವನ್ನು ನಿರ್ಮಾಣ ಮಾಡಿಕೊಡುವ ಆಶ್ವಾಸನೆ ನೀಡಿದ್ದೆ ಮತ್ತು ಅದೇ ರೀತಿ ದೇವಸ್ಥಾನವನ್ನೂ ನಿರ್ಮಿಸಿದ್ದೇನೆ ಎಂದೂ ಬಾಲು ಹೇಳಿದ್ದಾರೆ.

2. ಎರಡು ದಿನಗಳ ಹಿಂದೆ ಬಾಲು ಇವರು ಪಕ್ಷದ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರನ್ನು ಮುಟ್ಟುವವರ ಕೈಯನ್ನು ತುಂಢರಿಸುವ ಬೆದರಿಕೆಯನ್ನು ಕೂಡ ಹಾಕಿದ್ದರು.

ಸಂಪಾದಕೀಯ ನಿಲುವು

  • ದೇವಸ್ಥಾನಗಳನ್ನು ಕೆಡವಿರುವ ವಿಷಯವನ್ನು ಅಭಿಮಾನದಿಂದ ಹೇಳುವ ಇಂದಿನ ಗಝನಿಗೆ ಅವರ ಸ್ಥಾನವನ್ನು ತೋರಿಸಲು ತಮಿಳುನಾಡಿನ ಹಿಂದೂಗಳು ಸಂಘಟಿತರಾಗುವ ಆವಶ್ಯಕತೆಯಿದೆ !
  • ನಾಸ್ತಿಕತಾವಾದಿ ದ್ರಮುಕ ಮುಖಂಡರು ಎಂದಾದರೂ ಇತರ ಧರ್ಮದವರ ಅನಧಿಕೃತ ಧಾರ್ಮಿಕ ಸ್ಥಳಗಳನ್ನು ಕೆಡಹುವ ಧೈರ್ಯವನ್ನು ತೋರಿಸುವುದಿಲ್ಲ; ಕಾರಣ ಅದರ ಪರಿಣಾಮ ಅವರಿಗೆ ತಿಳಿದಿದೆ !