ಪಾಕಿಸ್ತಾನದಲ್ಲಿ ೩೦ ಲಕ್ಷ ರೂಪಾಯಿಯ ೫ ಸಾವಿರ ಕೋಳಿಗಳು ಕಳವು !

ಇಸ್ಲಾಮಾಬಾದ – ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆದ್ದರಿಂದ ಬದುಕಲು ನಾಗರೀಕರಿಗೆ ಅನೇಕ ಸಂಕಷ್ಟಗಳು ಎದುರಿಸಬೇಕಾಗುತ್ತಿದೆ. ರಾವಾಲಪಿಂಡಿ ನಗರದಲ್ಲಿ ಕೆಲವು ದುಷ್ಕರ್ಮಿಗಳಿಂದ ಕುಕ್ಕುಟ ಪಾಲನ ಕೇಂದ್ರದಲ್ಲಿನ ೫ ಸಾವಿರ ಕೋಳಿಗಳನ್ನು ಕಳವು ಮಾಡಿದ್ದಾರೆ. ಈ ಕೋಳಿಗಳ ಬೆಲೆ ೩೦ ಲಕ್ಷ ರೂಪಾಯಿ ಇರುವುದೆಂದು ಹೇಳಿದ್ದಾರೆ. ಸುಮಾರು ೧೨ ಜನರು ಈ ಕೆಂದ್ರಕ್ಕೆ ನುಗ್ಗಿ ಕೋಳಿಗಳು ಕಳವು ಮಾಡಿದ್ದಾರೆ.

ಸಂಪಾದಕೀಯ ನಿಲುವು

ಇಂದು ಬದುಕಲು ಕೋಳಿಗಳನ್ನು ಕಳವು ಮಾಡಿರುವವರು ನಾಳೆ ಒಬ್ಬೊಬ್ಬರ ಜೀವ ತೆಗೆಯುವರು. ಪಾಕಿಸ್ತಾನದಲ್ಲಿ ಮುಂಬರುವ ಕಾಲದಲ್ಲಿ ಗೃಹ ಯುದ್ಧ ಆರಂಭವಾದರೆ ಆಶ್ಚರ್ಯವೇನು ಇಲ್ಲ !