ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ : ೨೯ ಪೊಲೀಸರ ಸಾವು, ೧೨೦ ಜನರಿಗೆ ಗಾಯ

ಪೇಶಾವರ (ಪಾಕಿಸ್ತಾನ) – ಇಲ್ಲಿಯ ಪೊಲೀಸ್ ಲೈನ್ಸ್ ನಲ್ಲಿನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಸ್ಫೋಟದಲ್ಲಿ ೨೯ ಪೊಲೀಸರು ಹತರಾದರು, ಹಾಗೂ ೧೨೦ ಜನರು ಗಾಯಗೊಂಡರು. ಗಾಯಗೊಂಡವರಲ್ಲಿ ೯೦ ಜನರ ಆರೋಗ್ಯ ಚಿಂತಾ ಜನಕವಾಗಿದೆ. ಸ್ಪೋಟದಿಂದ ಮಸೀದಿಯ ದೊಡ್ಡ ಭಾಗ ಕುಸಿದಿದೆ. ಸ್ಪೋಟದ ಸಮಯ ಮಸೀದಿಯಲ್ಲಿ ೫೫೦ ಜನರು ಉಪಸ್ಥಿತರಿದ್ದರು. ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ. ಇಲ್ಲಿಯ ಜನರು, ಈ ಸ್ಪೋಟ ಬಹಳ ಶಕ್ತಿಶಾಲಿಯಾಗಿತ್ತು ಮತ್ತು ಅದರ ಧ್ವನಿ ಎರಡು ಕಿಲೋಮೀಟರ್ ವರೆಗೆ ಕೇಳಿಸಿದೆ ಎಂದು ಹೇಳಿದರು. ಒಬ್ಬ ಪ್ರತ್ಯಕ್ಷದರ್ಶಿಯು, ಆತ್ಮಾಹುತಿ ದಾಳಿ ಮಾಡಿದ ಭಯೋತ್ಪಾದಕ ಮಧ್ಯದ ಸಾಲಿನಲ್ಲಿ ನಿಂತಿದ್ದನು. ಅವನಿಗೆ ಇಲ್ಲಿ ಪ್ರವೇಶ ಮಾಡುವುದಕ್ಕೆ ‘ಗೇಟ್ ಫಾಸ್’ ತೋರಿಸ ಬೇಕಾಗುತ್ತದೆ. ಅವನು ಪೊಲೀಸ್ ಲೈನ್ಸ್ ನಲ್ಲಿ ಹೇಗೆ ಬಂದನು ಇದು ತಿಳಿದು ಬಂದಿಲ್ಲ ಎಂದು ಹೇಳಿದರು.