ಪಿ.ಎಫ್.ಐ. ಗಾಗಿ ಹಿಂದುತ್ವನಿಷ್ಠರ ಬೇಹುಗಾರಿಕೆ ಮಾಡುವ ಯುವತಿಯ ಬಂಧನ

ಇಂದೂರ ನ್ಯಾಯಾಲಯದಲ್ಲಿನ ಘಟನೆ !

(ಎಡದಲ್ಲಿ ಸೋನು ಮನ್ಸೂರಿ)

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ನ್ಯಾಯಾಲಯದಲ್ಲಿ ವಿಡಿಯೋ ಮಾಡುತ್ತಿದ್ದ ಓರ್ವ ೨೩ ವರ್ಷದ ಯುವತಿಯನ್ನು ಬಂಧಿಸಿದ್ದಾರೆ. ಆಕೆಯ ಹೆಸರು ಸೋನು ಮನ್ಸೂರಿ ಆಗಿದ್ದು ಆಕೆ ನ್ಯಾಯವಾದಿಯಂತೆ ಉಡುಪು ಧರಿಸಿ ಬಂದಿದ್ದಳು. ‘ಪಠಾಣ’ ಚಲನಚಿತ್ರದ ವಿರೋಧದಲ್ಲಿ ತಥಾ ಕಥಿತ ಆಕ್ಷೇಪಾರ್ಹ ಘೋಷಣೆಗಳನ್ನು ನೀಡಿದ ಹಿಂದುತ್ವನಿಷ್ಠರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆ ಸಮಯದಲ್ಲಿ ಸೋನು ನ್ಯಾಯಾಲಯದ ಹೊರಗೆ ಅದರ ಚಿತ್ರೀಕರಣ ಮಾಡುತ್ತಿದ್ದಳು. ಸೋನು ಸಹಿತ ನ್ಯಾಯವಾದಿ ನೂರುಜಹಾ ಮೇಲೆಯೂ ದೂರು ದಾಖಲಿಸಲಾಗಿದೆ. ಸೋನು ನೂರುಜಹಾ ಜೊತೆಗೆ ನ್ಯಾಯಾಲಯಕ್ಕೆ ಬಂದಿದ್ದಳು. ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ. ನ್ಯಾಯಾಲಯದ ವಿಚಾರಣೆಯ ವಿಡಿಯೋ ತಯಾರಿಸಿ ಅದನ್ನು ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಕಾರ್ಯಕರ್ತರಿಗೆ ಕಳುಹಿಸುವುದಿತ್ತು.

(ಸೌಜನ್ಯ : Republic TV)

ಪೊಲೀಸರು ಸೋನುನನ್ನು ವಶಕ್ಕೆ ಪಡೆದಾಗ ಆಕೆಯ ಬಳಿ ೧ ಲಕ್ಷ ೧೬ ಸಾವಿರ ರೂಪಾಯಿ ನಗದು ದೊರೆಯಿತು. ಹಾಗೂ ಆಕೆಯ ಸಂಚಾರವಾಣಿಯಲ್ಲಿ ಕೆಲವು ಆಕ್ಷೇಪಾರ್ಹ ವಿಡಿಯೋಗಳು ಕೂಡ ಕಂಡು ಬಂದಿದೆ. ಆಕೆಯ ವಿಚಾರಣೆ ನಡೆಸಿದಾಗ ಪಿ.ಎಫ್.ಐ. ಗಾಗಿ ಕೆಲಸ ಮಾಡುತ್ತಿರುವುದು ಒಪ್ಪಿಕೊಂಡಿದ್ದಾಳೆ.

ಸಂಪಾದಕರ ನಿಲುವು

ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !