ಮುಸಲ್ಮಾನರಿಂದ ಮಸೀದಿಯ ಬಳಿ ಹಿಂದೂ ಯುವಕನ ಹತ್ಯೆ

ಗೋಪಾಲಗಂಜ (ಬಿಹಾರ)ನ ಘಟನೆ !

ಕ್ರಿಕೆಟ್ ಆಟದಿಂದುಂಟಾದ ವಿವಾದ !

ಮುಸಲ್ಮಾನರ ಪ್ರದೇಶದಿಂದ ಶವ ಕೊಂಡೊಯ್ಯುವಾಗಲೂ ಹಿಂದೂಗಳ ಮೇಲೆ ದಾಳಿ

ಗೋಪಾಲಗಂಜ (ಬಿಹಾರ) – ಇಲ್ಲಿಯ ಬಸಡಿಲಾ ಗ್ರಾಮದಲ್ಲಿ ಜನವರಿ ೨೭ ರಂದು ಮುಸಲ್ಮಾನರಿಂದ ತರಕಾರಿ ಕೊಳ್ಳಲು ಹೋಗಿದ್ದ ಅಂಕಿತ ಕುಮಾರ ಎಂಬ ಯುವಕನನ್ನು ಮಸೀದಿಯ ಹತ್ತಿರ ಹತ್ಯೆ ಮಾಡಿದ್ದೂ ಅವನ ಸ್ನೇಹಿತರು, ರಿಯೋಮ, ಚಂದನ ಕುಮಾರ ಮತ್ತು ಶಿವಂ ಕುಮಾರ ಗಾಯಗೊಂಡಿದ್ದಾರೆ. ಅಂಕಿತ ಕುಮಾರ್ ಇವನ ಶವವನ್ನು ಆರೋಪಿಯ ಗ್ರಾಮದಿಂದ ಕೊಂಡೊಯ್ಯುವಾಗಲೂ ಕೂಡ ಹಿಂದುಗಳ ಮೇಲೆ ಮುಸಲ್ಮಾನರು ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಲಾಟಿ ಚಾರ್ಜ್ ಮಾಡುತ್ತಾ ಗಾಳಿಯಲ್ಲಿ ಗುಂಡು ಹಾರಿಸಿದರು. ಅಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತು ಮಾಡಿದ್ದು ಈಗ ಬಿಗುವಿನ ವಾತಾವರಣ ಇದೆ. ಕ್ರಿಕೆಟ್ ಆಟದಿಂದ ಉಂಟಾದ ವಿವಾದಲ್ಲಿ ಹತ್ಯೆ ಮಾಡಿದ್ದಾರೆ. ವಿಶೇಷವೆಂದರೆ ಈ ವಿವಾದ ಪಂಚಾಯತಿಯಿಂದ ಪರಿಹರಿಸಿದ್ದರು.

೧. ಅಂಕಿತನ ಹತ್ಯೆಯ ಪ್ರಕರಣದಲ್ಲಿ ಶಹದತ್ ಮಿಯಾ, ಸಮಶೇರ್ ಮಿಯಾ, ಸೋನು ಮಿಯಾ, ಆರಿಫ ಮಿಯಾ, ಮುನ್ನಾ ಮಿಯಾ, ಆದಿಲ ಅಲಿ, ಸುಭಾನ್ ಅಹಮದ್, ಅಹಮದ್ ಅಲಿ ಮತ್ತು ದಿಲಶಾದ ಅಲಿ ಇವರ ಮೇಲೆ ದೂರು ದಾಖಲಿಸಿದೆ ಹಾಗೂ ಕೆಲವು ಮಹಿಳೆಯರ ಸಹಿತ ೩೦ ರಿಂದ ೩೫ ಜನರು ಇದರಲ್ಲಿ ಸಹಭಾಗಿ ಆಗಿರುವುದು ಹೇಳುತ್ತಿದ್ದಾರೆ.

೨. ಅಂಕಿತ ಅವರ ತಂದೆ ಮೋಹನ್ ಪ್ರಸಾದ ಇವರು, ಅಂಕಿತ ಮತ್ತು ಅವನ ಸ್ನೇಹಿತರು ಮಸೀದಿ ಹತ್ತಿರದಿಂದ ಹೋಗುವಾಗ ಕೆಲವು ಮುಸಲ್ಮಾನರು ಅವರನ್ನು ಸುತ್ತುವರೆದು ಅಂಕಿತ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಾಗೂ ಒಂದು ಮನೆಗೆ ಕೊಂಡೊಯ್ದು ಕತ್ತು ಹಿಸಿಕಿ ಅವನ ಹತ್ಯೆ ಮಾಡಿದ್ದಾರೆ ಎಂದು ಹೇಳಿದರು.

೩. ಬಿಹಾರ ಪೊಲೀಸರು ಈ ಘಟನೆಯ ಬಗ್ಗೆ ಟ್ವೀಟ್ ಮಾಡುತ್ತಾ. ಬಡಸಿಲಾ ಗ್ರಾಮದಲ್ಲಿ ಕ್ರಿಕೆಟ ಆಟದಿಂದ ವಿವಾದ ನಿರ್ಮಾಣವಾಗಿ ನಡೆದ ಹೊಡೆದಾಟದಲ್ಲಿ ಅಂಕಿತ ಕುಮಾರ ಗಾಯಗೊಂಡನು. ಚಿಕಿತ್ಸೆಯ ಸಮಯದಲ್ಲಿ ಅವನು ಸಾವನ್ನಪ್ಪಿದನು. ಈ ಪ್ರಕರಣದಲ್ಲಿ ೬ ಜನರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

* ಬಿಹಾರನಲ್ಲಿ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳದ ಹಿಂದೂ ದ್ವೇಷಿ ಮೈತ್ರಿ ಸರಕಾರ ಇರುವುದರಿಂದ ಹಿಂದುಗಳ ಪರಿಸ್ಥಿತಿ ಪಾಕಿಸ್ತಾನದಲ್ಲಿನ ಹಾಗೆ ಆಗಿದೆ. ಹಿಂದುತ್ವನಿಷ್ಠರಿಗೆ ಅಧಿಕಾರ ನೀಡಲು ಅಲ್ಲಿಯ ಜನರು ಸಂಘಟಿತರಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !

* ‘ದೇಶದಲ್ಲಿ ಮುಸ್ಲಿಮರು ಅಸುರಕ್ಷಿತವಾಗಿದ್ದಾರೆ’, ಎಂದು ಕೂಗಾಡುವವರುರು ಇಂತಹ ಘಟನೆಯ ಬಗ್ಗೆ ಯಾವಾಗಲೂ ಮೌನವಾಗಿರುತ್ತಾರೆ !