ಪಾಕಿಸ್ತಾನದಲ್ಲಿ ಪೆಟ್ರೋಲ ಮತ್ತು ಡಿಸೇಲ ಬೆಲೆ 35 ರೂಪಾಯಿಗಳಷ್ಟು ತುಟ್ಟಿ !

ಹಣದುಬ್ಬರದಿಂದ ದಿವಾಳಿಯ ಹೊಸ್ತಿಲಿನಲ್ಲಿರುವ ಪಾಕಿಸ್ತಾನದಲ್ಲಿ ಹಾಹಾಕಾರ !

ಇಸ್ಲಾಮಾಬಾದ (ಪಾಕಿಸ್ತಾನ) – ಬೆಲೆಯೇರಿಕೆಯಿಂದ ಪಾಕಿಸ್ತಾನಿ ಜನತೆ ತತ್ತರಿಸಿರುವಾಗಲೇ ಈಗ ಹಣದುಬ್ಬರದಿಂದ ಬಳಲುತ್ತಿರುವ ಈ ಜಿಹಾದಿ ದೇಶದಲ್ಲಿ ಈಗ ಪೆಟ್ರೋಲ ಮತ್ತು ಡಿಸೇಲ್ ಗಳ ಬೆಲೆ ಗಗನಕ್ಕೇರಿದೆ. ಎರಡೂ ಇಂಧನಗಳ ಬೆಲೆ 35 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಈ ವಿಷಯವನ್ನು ದೇಶದ ಹಣಕಾಸು ಸಚಿವ ಇಶಾಕ್ ದಾರ್ ಇವರು ಜನವರಿ 29 ರಂದು ಬೆಳಿಗ್ಗೆ ಘೋಷಿಸಿದರು. ಇದರಿಂದ ಈಗ ಜನತೆಗೆ ‘ಕಾರು ಮತ್ತು ಬೈಕ್ ಹಾಗೂ ಸ್ಕೂಟಿಗಳನ್ನು ಚಲಾಯಿಸ ಬೇಕೋ ? ಬೇಡವೋ ? ಎನ್ನುವ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಭಾರತದ ತುಲನೆಯಲ್ಲಿ ಈ ದರ ಎರಡೂವರೆಗಳಷ್ಟು ಪಟ್ಟು ಅಧಿಕವಿದೆ.

ಪಾಕಿಸ್ತಾನದಲ್ಲಿ ಹೆಚ್ಚಳವಾಗಿರುವ ಇಂಧನ ಪಾಕಿಸ್ತಾನಿ ರೂಪಾಯಿಗಳಲ್ಲಿ ಪ್ರತಿ ಲೀಟರ ದರ ಕೆಳಗಿನಂತಿದೆ :

ಪೆಟ್ರೋಲ : 249.80 ರೂಪಾಯಿ
ಹೈ-ಸ್ಪೀಡ್ ಡಿಸೇಲ್ : 262.80 ರೂಪಾಯಿ
ಸಾಮಾನ್ಯ ಡಿಸೇಲ್ : 187 ರೂಪಾಯಿ

ಸಂಪಾದಕರ ನಿಲುವು

ಆರ್ಥಿಕ ಗಣಿತವು ಇಂಧನದ ಮೌಲ್ಯವನ್ನು ಅವಲಂಬಿಸಿರುವುದರಿಂದ ಈಗ ಪಾಕಿಸ್ತಾನ ತಾನು ದಿವಾಳಿಯಾಗಿದ್ದೇನೆಂದು ಬೇಗನೆ ಘೋಷಿಸದಿದ್ದರೆ ಆಶ್ಚರ್ಯಪಡಬೇಕಾಗುವುದು !