‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಝವಿ ಬರೆಲವಿ ಇವರಿಂದ ಸರಕಾರದ ಬಳಿ ಆಗ್ರಹ
(ಮೌಲಾನ ಎಂದರೆ ಇಸ್ಲಾಮಿನ ಅಭ್ಯಾಸಕ)
ಲಕ್ಷ್ಮಣಪುರಿ (ಉತ್ತರಪ್ರದೇಶ) – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಮುಸಲ್ಮಾನರನ್ನು ಮತಾಂತರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ದ್ವೇಷ ಹಬ್ಬಿಸುತ್ತಿದ್ದಾರೆ. ಭಾರತ ಸರಕಾರ ಮತಾಂತರ ವಿರೋಧಿ ಕಠಿಣ ಕಾನೂನು ಜಾರಿ ಮಾಡಬೇಕು ಮತ್ತು ಇಸ್ಲಾಂಅನ್ನು ಅವಮಾನಿಸುವ ಇಂತಹ ಬಾಬಾಗಳ ವಿರುದ್ಧ ಕಾನೂನರೀತ್ಯ ಕ್ರಮ ಕೈಗೊಂಡು ಅವರನ್ನು ತಡೆಯಬೇಕು, ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಝವಿ ಬರೆಲವಿ ಇವರು ಒತ್ತಾಯಿಸಿದರು.
ಧೀರೇಂದ್ರ ಶಾಸ್ತ್ರಿ ಅವರ ದರ್ಬಾರನಲ್ಲಿ ಓರ್ವ ಮುಸ್ಲಿಂ ಮಹಿಳೆ ಹಿಂದೂ ಧರ್ಮದಲ್ಲಿ ಪುನರ್ ಪ್ರವೇಶ ಮಾಡಿದರು. ಇದರ ಬಗ್ಗೆ ಬರೆಲವಿ ಇವರು ಛತ್ತೀಸ್ ಗಡ್ ಸರಕಾರದ ಬಳಿ ಧೀರೇಂದ್ರ ಶಾಸ್ತ್ರಿ ಇವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ‘ಯಾವುದಾದರೂ ಮುಸಲ್ಮಾನ ಧರ್ಮಗುರು ಬೇರೆಯವರನ್ನು ಮತಾಂತರಿಸಿದಾಗ ಛತ್ತಿಸ್ ಗಢ ಸರಕಾರ ಅವರಿಗೆ ೨೪ ಗಂಟೆಯಲ್ಲಿ ಜೈಲಿಗೆ ಕಳಿಸುತ್ತಾರೆ, ಎಂದು ಹೇಳುತ್ತಾ, ಛತ್ತೀಸ್ ಗಢ ಸರಕಾರವು ಧೀರೇಂದ್ರ ಶಾಸ್ತ್ರಿ ಇವರ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಆಗ ನಾವು ನ್ಯಾಯಾಲಯದ ಬಾಗಿಲು ತಟ್ಟುವೆವು, ಎಂಬ ಎಚ್ಚರಿಕೆ ಕೂಡ ನೀಡಿದರು.
‘इस्लाम को बदनाम कर रहे हैं धीरेन्द्र शास्त्री’: मुस्लिमों की घर वापसी कराने से नाराज मौलाना शहाबुद्दीन बोले- भारत हिंदू राष्ट्र कभी नहीं बन सकता#BageshwarDham #DhirendraShastri #HinduRashtra #GharWapsi https://t.co/mUkJk9NaTy
— ऑपइंडिया (@OpIndia_in) January 28, 2023
ಮೌಲಾನಾ ಶಹಬುದ್ದೀನ್ ಬರೆಲವಿ ಮಾತು ಮುಂದುವರಿಸಿ, ಬಾಗೇಶ್ವರ ಧಾಮನ ಸಂಚಾಲಕ ಬಾಬಾ ಧೀರೇಂದ್ರ ಕೃಷ್ಣ ಶಾಸ್ತ್ರಿ ಯಾವ ಪದ್ಧತಿಯನ್ನು ಅವಲಂಬಿಸಿದ್ದಾರೆ, ಅದರಿಂದ ಭಾರತದಲ್ಲಿ ದ್ವೇಷ ಹಬ್ಬುತ್ತಿದೆ. ಅವರು ಇಲ್ಲಿಯವರೆಗೆ ೩೨೮ ಜನರನ್ನು ಮತಾಂತರಗೊಳಿಸಿದ್ದಾರೆ. ಅವರು ಇಸ್ಲಾಂನ ವಿರುದ್ಧ ದ್ವೇಷ ಹಬ್ಬಿಸುತ್ತಿದ್ದಾರೆ. ‘ನಾನು ಟೋಪಿ ಹಾಕಿರುವವರನ್ನು ಸನಾತನ ಧರ್ಮದವರನ್ನಾಗಿ ಮಾಡುವೆ.’ ಎಂದು ಸ್ವತಃ ಅವರೇ ಹೇಳಿದ್ದಾರೆ. ಪ್ರಸಾರ ಮಾಧ್ಯಮಗಳಲ್ಲಿ ಈ ರೀತಿಯ ಹೇಳಿಕೆ ನೀಡುವುದು, ಇದು ಇಸ್ಲಾಂನ ಅವಮಾನವಾಗಿದೆ. ಈ ವಿಷಯದ ಬಗ್ಗೆ ಮುಸಲ್ಮಾನರ ಆಕ್ಷೇಪವಿದೆ.
ಸಂಪಾದಕೀಯ ನಿಲುವು
|
ಭಾರತ ಎಂದೂ ಕೂಡ ಹಿಂದೂ ಅಥವಾ ಇಸ್ಲಾಮಿ ರಾಷ್ಟ್ರ ಆಗಲು ಸಾಧ್ಯವಿಲ್ಲ !
ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವಾಗ ಮೌಲಾನ ಶಹಬುದ್ದೀನ್ ಬರೆಲವಿ ಇವರು, ಕೆಲವರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದರ ಬಗ್ಗೆ ಮಾತನಾಡುತ್ತಾರೆ. ಭಾರತ ಕಾನೂನು ಮತ್ತು ಸಂವಿಧಾನದ ಪ್ರಕಾರ ನಡೆಯುವ ದೇಶವಾಗಿದೆ. ಇಲ್ಲಿಯ ನಾಗರೀಕರು ಸಂವಿಧಾನದ ಪಾಲನೆ ಮಾಡುತ್ತಾರೆ. ಆದ್ದರಿಂದ ಈ ದೇಶ ಎಂದೂ ಕೂಡ ಹಿಂದೂ ರಾಷ್ಟ್ರ ಅಥವಾ ಇಸ್ಲಾಮಿ ರಾಷ್ಟ್ರ ಆಗಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಕನಸು ಕಾಣುವುದು ನಿಲ್ಲಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದುಗಳು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಲು ಪ್ರಾರಂಭಿಸಿದ ನಂತರ ಮೌಲಾನ ಇವರಿಗೆ ಈಗ ಮಾತು ಬರುತ್ತಿದೆ. ಇಲ್ಲಿಯವರೆಗೆ ಜಿಹಾದಿ ಜನರು ಭಾರತವನ್ನು ಇಸ್ಲಾಮಿ ದೇಶ ಮಾಡುವುದರ ಬಗ್ಗೆ ಮಾತನಾಡುತ್ತಿದ್ದರು, ಅಲ್ಲಿಯವರೆಗೆ ಮೌಲಾನ ಮೌನವಾಗಿದ್ದರು ಇದನ್ನು ತಿಳಿದುಕೊಳ್ಳಿ ! |