ಪಾಕಿಸ್ತಾನದ ರಕ್ಷಣೆ, ವಿಕಾಸ ಮತ್ತು ಸಮೃದ್ಧಿ ಇದು ಅಲ್ಲಾನ ಜವಾಬ್ದಾರಿ ! – ಪಾಕಿಸ್ತಾನದ ಹಣಕಾಸು ಸಚಿವ ಇಶಕ ದಾರ್

ಪಾಕಿಸ್ತಾನದ ಹಣಕಾಸು ಸಚಿವ ಇಶಕ ದಾರ್

ಇಸ್ಲಾಮಾಬಾದ (ಪಾಕಿಸ್ತಾನ) – ಅಲ್ಲಾನೇ ಪಾಕಿಸ್ತಾನವನ್ನು ಜಗತ್ತಿನಲ್ಲಿ ಅನಾಧಿಕಾಲದ ವರೆಗೆ ಅಸ್ತಿತ್ವದಲ್ಲಿ ಉಳಿಯಲು ನಿರ್ಮಿಸಿದ್ದಾನೆ. ಇಸ್ಲಾಂ ಹೆಸರಿನಲ್ಲಿ ನಿರ್ಮಾಣಗೊಂಡ ಜಗತ್ತಿನಾದ್ಯಂತ ಏಕೈಕ ದೇಶವಾಗಿದೆ. ಇಸ್ಲಾಂನ ಹೆಸರಿನಲ್ಲಿ ಸೌದಿ ಅರೇಬಿಯಾದ ನಿರ್ಮಾಣ ಆಗಿಲ್ಲ. ಆದ್ದರಿಂದ ಅಲ್ಲಹನೆ ಇದರ ನಿರ್ಮಾಣ ಮಾಡಿದ್ದಾನೆ ಅಂದರೆ ಪಾಕಿಸ್ತಾನದ ರಕ್ಷಣೆ, ವಿಕಾಸ ಮತ್ತು ಸಮೃದ್ಧಿ ಇದು ಕೂಡ ಅಲ್ಲನದೆ ಜವಾಬ್ದಾರಿಯಾಗಿದೆ ಎಂದು ಪಾಕಿಸ್ತಾನದ ಕೇಂದ್ರ ಹಣಕಾಸು ಸಚಿವ ಇಶಕ್ ದಾರ ಇವರು ಹೇಳಿದರು.

ಇಶಕ ದಾರ ಇವರು, ಹಿಂದಿನ ಸರಕಾರವು ಮಾಡಿರುವ ತಪ್ಪು ಪಾಕಿಸ್ತಾನಕ್ಕೆ ಸಹಿಸಿಕೊಳ್ಳಬೇಕಾಗುತ್ತಿದೆ. ೨೦೧೩ ರಿಂದ ೨೦೧೭ ರ ವರೆಗಿನ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಇವರ ಕಾರ್ಯಕಾಲದಲ್ಲಿ ಪಾಕಿಸ್ತಾನದ ಹಣಕಾಸು ವ್ಯವಸ್ಥೆ ಸುದೃಢವಾಗಿತ್ತು. ಪಾಕಿಸ್ತಾನದ ‘ಶೇರ್ ಮಾರುಕಟ್ಟೆ’ ದಕ್ಷಿಣ ಏಷ್ಯಾದಲ್ಲೇ ಉತ್ತಮವಾಗಿತ್ತು. ನವಾಝ ಶರೀಫ್ ಇವರ ಕಾಲದಲ್ಲಿ ಅದು ಜಗತ್ತಿನ ೫ ಸ್ಥಾನದಲ್ಲಿತ್ತು. ಆದರೆ ನಂತರದ ಕಾಲದಲ್ಲಿ ಇದರ ವಿಕಾಸ ನೇಲಕಚ್ಚಿತು ಎಂದು ಹೇಳಿದರು.