ಜೆರುಸಲೇಮ್ (ಇಸ್ರಾಯಿಲ್) – ಇಲ್ಲಿಯ ನೆವೆ ಯಾಕೋಹ್ಯಾಂನ ಪ್ರಾರ್ಥನಾಸ್ಥಳದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದೂ, 10 ಜನರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಪ್ಯಾಲೆಸ್ತೇನಿ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಆಕ್ರಮಣದ ಘಟನೆಯ ಬಳಿಕ ಇಸ್ರೈಲ ಪ್ರಧಾನಮಂತ್ರಿ ಬೆಂಜಾಮಿನ ನೆತಾನ್ಯಾಹೂ ಇವರು ಘಟನಾಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜನೇವರಿ 26 ರಂದು ಪ್ಯಾಲೆಸ್ತೇನಿಯಾ ವೆಸ್ಟ ಬ್ಯಾಂಕ ಮೇಲೆ ಇಸ್ರೈಲ ನಡೆಸಿದ ದಾಳಿಯ ಬಳಿಕ ಈ ಆಕ್ರಮಣ ನಡೆದಿದೆ. ಇಸ್ರೈಲ ಆಕ್ರಮಣದಲ್ಲಿ 9 ಜನರು ಮೃತಪಟ್ಟಿದ್ದೂ, 16 ಜನರು ಗಾಯಗೊಂಡಿದ್ದರು.
At least 8 killed, 10 injured in Jerusalem terror attack
Read @ANI Story | https://t.co/75egWOS1b5#Jerusalem #TerrorAttack #Israel pic.twitter.com/PzvrZ4vgcy
— ANI Digital (@ani_digital) January 27, 2023
೧. ಈ ದಾಳಿ ಜನವರಿ 26 ರಂದು ರಾತ್ರಿ 8.15 ಗಂಟೆಗೆ ನಡೆದಿದೆಯೆಂದು ಓರ್ವ ಪೊಲೀಸ ಅಧಿಕಾರಿ ಹೇಳಿದರು. 21 ವರ್ಷದ ಭಯೋತ್ಪಾದಕ ಅಲ್ಕಾಮ್ ಖಾಯರಿ ಪ್ರಾರ್ಥನಾಸ್ಥಳದ ಹತ್ತಿರ ಬಂದು, ಪ್ರಾರ್ಥನೆ ಮುಗಿಯುವುದನ್ನೇ ಕಾಯುತ್ತಿದ್ದನು. ಜನರು ಹೊರಗೆ ಬರುತ್ತಲೇ ಅವರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದನು. ತದನಂತರ ಅವನು ಕಾರಿನಲ್ಲಿ ಪರಾರಿಯಾದನು. 15 ನಿಮಿಷಗಳಲ್ಲಿಯೇ ಪೊಲೀಸರು ಅವನ ವಾಹನವನ್ನು ನಿಲ್ಲಿಸಿದರು. ಬಳಿಕ ಭಯೋತ್ಪಾದಕನು ಓಡಿ ಹೋಗಲು ಪ್ರಯತ್ನಿಸಿ, ಪೊಲೀಸರ ಮೇಲೆ ಗುಂಡು ಹಾರಿಸಿದನು. ಪೊಲೀಸರು ಪ್ರತ್ಯುತ್ತರ ನೀಡುತ್ತ ನಡೆಸಿದ ಗುಂಡು ಹಾರಾಟದಲ್ಲಿ ಭಯೋತ್ಪಾದಕ ಹತ್ಯೆಗೊಂಡನು.
೨. ಇಸ್ರೈಲ ಸರಕಾರದಲ್ಲಿ ಸಹಭಾಗಿಯಾಗಿರುವ ಇತರ ಪಕ್ಷಗಳು ಸೈನ್ಯದ ಸಹಾಯದಿಂದ ವೆಸ್ಟ ಬ್ಯಾಂಕ ಸ್ಥಳದಿಂದ ಪ್ಯಾಲೆಸ್ತೇನಿ ವಸತಿಯನ್ನು ತೆರವುಗೊಳಿಸ ಬೇಕೆಂದು ಅವರ ಆಗ್ರಹವಾಗಿದೆ. ಈ ಕಾರಣದಿಂದಾಗಿ ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಳವಾಗಿದೆ.