ಇಸ್ಲಾಂನಲ್ಲಿ ತ್ರಿವರ್ಣ ಧ್ವಜ ಹಾರಿಸುವುದಿಲ್ಲವೆಂದು ಹೇಳುತ್ತಾ ಮದರಸಾಗಳ ಮೇಲೆ ಗಣರಾಜ್ಯೋತ್ಸವ ದಿನದಂದು ಇಸ್ಲಾಮೀ ಬಾವುಟ ಹಾರಾಟ !

ಬಾರಾಬಂಕಿ (ಉತ್ತರಪ್ರದೇಶ) – ಇಲ್ಲಿಯ ರಾಮಪುರದ ಮದರಸಾದಲ್ಲಿ ಗಣರಾಜ್ಯೋತ್ಸವ ದಿನದಂದು ಇಸ್ಲಾಮಿ ಧ್ವಜ ಹಾರಿಸಲಾಯಿತು. ಗ್ರಾಮಸ್ಥರು ಈ ಮಾಹಿತಿ ಪೊಲೀಸರಿಗೆ ನೀಡಿದಾಗ ಪೊಲೀಸರು ಈ ಧ್ವಜವನ್ನು ಕೆಳಗೆ ಇಳಿಸಿದರು. ಈ ಪ್ರಕರಣದಲ್ಲಿ ಹಾಪೀಜ ಮಹಮ್ಮದ ಸೋಹರಾಬ ಮತ್ತು ಮಹಮ್ಮದ ತರಬೇಜ ನಿಜಾಮುದ್ದೀನ ರಿಜ್ವಾನ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ‘ಅಶ್ರಫುಲ್ ಉಲೂಮ ಇಮಾ ಇಮದಾದಿಯಾ ಸಾಕಿನ’, ಎಂದು ಮದರಸಾದ ಹೆಸರಾಗಿದೆ. ಮದರಸಾ ಮೌಲ್ವಿ, ನಮ್ಮ ಧರ್ಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. (ಯಾವ ದೇಶದಲ್ಲಿ ಮಾಲ್ವಿಯವರ ಧರ್ಮಾನುಸಾರ ಬಾವುಟ ಹಾರಿಸಲಾಗುತ್ತದೆಯೋ ಆ ದೇಶಕ್ಕೆ ಹೊರಟು ಹೋಗಬೇಕು ಎಂದು ಈಗ ಹೇಳುವ ಸಮಯ ಬಂದಿದೆ.)

ಸಂಪಾದಕೀಯ ನಿಲುವು

  • ಒಂದು ಕಡೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಎಲ್ಲ ಸೌಲಭ್ಯವನ್ನು ಬಾಚಿಕೊಳ್ಳುವ, ತನಗನುಕೂಲವಾಗುವಂತೆ ಸಂವಿಧಾನವನ್ನು ಉಪಯೋಗಿಸಿಕೊಳ್ಳುವ ಮತ್ತು ಅದೇ ಸಂವಿಧಾನವು ಧ್ವಜ ಹಾರಿಸಲು ಹೇಳಿದಾಗ ಮಾತ್ರ ಧರ್ಮದ ಹೆಸರಿನಲ್ಲಿ ಅದನ್ನು ಹಾರಿಸಲು ನಿರಾಕರಿಸುವುದು, ಇಂತಹ ಜನರನ್ನು ಈಗ ದೇಶದಿಂದ ಹೊರಗಟ್ಟುವ ಆವಶ್ಯಕತೆಯಿದೆ !
  • ದೇಶದಲ್ಲಿನ ಮದರಸಾಗಳನ್ನು ಈಗ ಶಾಶ್ವತವಾಗಿ ನಿಷೇಧಿಸುವ ಸಮಯ ಬಂದಿದೆ. ಇದನ್ನು ಸರಕಾರವು ಗಮನದಲ್ಲಿಟ್ಟುಕೊಳ್ಳಬೇಕು !