ದೇವಸ್ಥಾನಗಳನ್ನು ಧಾರ್ಮಿಕ ಜನರಿಗೆ ವಹಿಸಬಾರದೇಕೆ ? – ಸರ್ವೋಚ್ಚ ನ್ಯಾಯಾಲಯ

ಮಂದಿರಗಳ ಸರಕಾರೀಕರಣದ ಕುರಿತು ಆಂಧ್ರಪ್ರದೇಶ ಸರಕಾರಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ರಾಜ್ಯ ಸರಕಾರದ ಅರ್ಜಿ ರದ್ದು

ನವದೆಹಲಿ – ಆಂಧ್ರಪ್ರದೇಶದ ಕರ್ನೂಲ ತಾಲೂಕಿನ ಅಹೋಬಿಲಮ್ ದೇವಸ್ಥಾನವನ್ನು ಸರಕಾರೀಕರಣಗೊಳಿಸಲು ಆಂಧ್ರಪ್ರದೇಶ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಈ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಲಯವು ‘ದೇವಸ್ಥಾನಗಳು ಧಾರ್ಮಿಕ ಜನರಿಗೆ ಒಪ್ಪಿಸಬಾರದೇಕೆ ?’ ಎಂದು ಸ್ಪಷ್ಟವಾಗಿ ಕೇಳಿದೆ. ತಮಿಳುನಾಡಿನ ಶ್ರೀ ಅಹೋಬಿಲಮ್ ಮಠವು ಪ್ರಾಚೀನ ಕಾಲದಿಂದಲೂ ಈ ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.

1. ಸರ್ವೋಚ್ಚ ನ್ಯಾಯಾಲಯವು, ದೇವಸ್ಥಾನಕ್ಕೆ ಕಾನೂನಿನ ಅನುಗುಣವಾಗಿ ಕಾರ್ಯಕಾರಿ ಅಧಿಕಾರಿಯನ್ನು ನೇಮಿಸುವ ಯಾವುದೇ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಧಾರ್ಮಿಕ ಜನರೇ ದೇವಸ್ಥಾನಗಳ ಉಸ್ತುವಾರಿಗಳನ್ನು ನೋಡಿಕೊಳ್ಳಲು ಅವಕಾಶ ಕೊಡಬೇಕು. ಸಂವಿಧಾನದ `ಕಲಂ 136’ (ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ತೀರ್ಪನ್ನು ಪ್ರಶ್ನಿಸಲು ನೀಡುವ ವಿಶೇಷ ಅನುಮತಿ) ಅಡಿಯಲ್ಲಿ ದಾಖಲಿಸಿರುವ ದೂರುಗಳ ಮೇಲೆ ಕಾನೂನಿನನ್ವಯ ವ್ಯವಸ್ಥೆ ಮಾಡುವ ಆವಶ್ಯಕತೆಯಿದೆಯೆಂದು ನಮಗೆ ಅನಿಸುವುದಿಲ್ಲ.

2. ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಅಕ್ಟೋಬರ 13, 2022 ರಲ್ಲಿ ನೀಡಿದ ತೀರ್ಪಿನಲ್ಲಿ, ‘ಅಹೋಬಿಲಮ್ ದೇವಸ್ಥಾನಕ್ಕೆ ಕಾರ್ಯಕಾರಿ ಅಧಿಕಾರಿಯನ್ನು ನೇಮಿಸುವ ರಾಜ್ಯ ಸರಕಾರದ ನಿರ್ಣಯವನ್ನು ಭಾರತೀಯ ರಾಜ್ಯ ಸಂವಿಧಾನದ ‘ಕಲಂ 26 ಡಿ’ ಯ ಉಲ್ಲಂಘನೆಯಾಗಿದೆ. ಸರಕಾರಕ್ಕೆ ಅಧಿಕಾರಿಯನ್ನು ನೇಮಿಸುವ ಅಧಿಕಾರವೇ ಇಲ್ಲ. ಈ ದೇವಸ್ಥಾನ ಅಹೋಬಿಲಮ್ ಮಠದ ಅವಿಭಾಜ್ಯ ಅಂಗವಾಗಿದೆ. ಹಿಂದೂ ಧರ್ಮದ ಪ್ರಸಾರಕ್ಕಾಗಿ ಮತ್ತು ಆಧ್ಯಾತ್ಮಿಕ ಸೇವೆ ನೀಡಲು ಸ್ಥಾಪಿಸಲಾಗಿದೆ’, ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ದೇಶಾದ್ಯಂತ ದೇವ್ಸಥಾನಗಳ ಸರಕಾರೀಕರಣವನ್ನು ರದ್ದುಗೊಳಿಸಲು ಈಗ ಸರ್ವೋಚ್ಚ ನ್ಯಾಯಾಲಯವೇ ಮುಂದಾಳತ್ವ ವಹಿಸಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಿದೆ !