ನಕಲಿ ದಾಖಲೆಗಳ ಮೂಲಕ ಸರಕಾರಿ ಅನುದಾನ ಪಡೆಯುವ ೬೦೯ ಮದರಸಾಗಳ ವಿರುದ್ಧ ದೂರ ದಾಖಲು!

ಬಿಹಾರದ ಎಲ್ಲಾ ೨ ಸಾವಿರ ೪೫೯ ಮದರಸಾಗಳ ವಿಚಾರಣೆ ನಡೆಯಲಿದೆ !

ಪಾಟಲಿಪುತ್ರ (ಬಿಹಾರ) – ಉತ್ತರ ಪ್ರದೇಶ ಮತ್ತು ಆಸ್ಸಾಂ ಈ ರಾಜ್ಯಗಳ ನಂತರ ಈಗ ಬಿಹಾರದಲ್ಲಿ ಕೂಡ ಮದರಸಾಗಳ ವಿಚಾರಣೆ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಪಾಟ್ನಾ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ರಾಜ್ಯದಲ್ಲಿ ಒಟ್ಟು ೨ ಸಾವಿರ ೪೫೯ ಮದರಸಾಗಳಿದ್ದು ಈ ಎಲ್ಲದರದು ವಿಚಾರಣೆ ನಡೆಯಲಿದೆ. ವಿಚಾರಣೆ ಪೂರ್ಣವಾಗುವವರೆಗೆ ರಾಜ್ಯದಲ್ಲಿನ ೬೦೯ ಮದರಸಾಗಳಿಗೆ ದೊರೆಯುವ ಅನುದಾನ ನಿಲ್ಲಿಸುವಂತೆ ಆದೇಶ ಕೂಡ ನೀಡಿದೆ. ಈ ಮದರಸಾಗಳು ನಕಲಿ ದಾಖಲೆಗಳನ್ನು ನಿರ್ಮಿಸಿ ಸರಕಾರದ ಅನುದಾನ ಪಡೆಯುತ್ತಿದ್ದರು. ನಕಲಿ ದಾಖಲೆಗಳ ಪ್ರಕಾರ ಅನುದಾನ ಪಡೆಯುವ ಮದರಸಗಳ ಬಗ್ಗೆ ನ್ಯಾಯಾಲಯದಲ್ಲಿ ಮಹಮ್ಮದ್ ಅಲ್ಲಾವುದ್ದೀನ್ ಬಿಸ್ಮಿಲ್ಲಾ ಇವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಿಂದ ಇದರ ಬಗ್ಗೆ ವಿಚಾರಣೆ ನಡೆಸುವಾಗ ಮೇಲಿನ ಆದೇಶ ನೀಡಿತು. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸಭೆ ನಡೆಸುವಂತೆ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ೬೦೯ ಮದರಸಾಗಳ ವಿರುದ್ಧ ದೂರು ದಾಖಲಿಸಿದ ನಂತರ ಏನು ಕ್ರಮ ಕೈಗೊಂಡಿದೆ ಇದರ ವರದಿ ಪ್ರಸ್ತುತಪಡಿಸಲು ಪೊಲೀಸ ಮಹಾ ಸಂಚಾಲಕರಿಗೆ ಆದೇಶ ನೀಡಿದೆ. ಈ ಅರ್ಜಿಯ ಕುರಿತು ಫೆಬ್ರವರಿ ೧೪ ರಂದು ಮುಂದಿನ ವಿಚಾರಣೆ ನಡೆಯಲಿದೆ.

ಸಂಪಾದಕರ ನಿಲುವು

* ದೇಶದಲ್ಲಿನ ಪ್ರತಿಯೊಂದು ಮದರಸಾಗಳ ವಿಚಾರಣೆ ನಡೆಯುವ ಬದಲು ದೇಶದಲ್ಲಿನ ಮದರಸಾಗಳು ಶಾಶ್ವತವಾಗಿ ನಿಷೇಧಿಸಬೇಕು. ಈ ಮದರಸಾಗಳಲ್ಲಿನ ಶಿಕ್ಷಣದಿಂದ ದೇಶಕ್ಕೆ ಎಷ್ಟು ಲಾಭವಾಗುತ್ತಿದೆ ? ಮತ್ತು ಎಷ್ಟು ಹಾನಿ ಆಗುತ್ತಿದೆ ? ಸರಕಾರ ಇದರ ತುಲನೆ ಜನರ ಎದುರು ಮಂಡಿಸಬೇಕು !

* ನಕಲಿ ದಾಖಲೆಯ ಮೂಲಕ ಅನುದಾನ ಪಡೆಯುವ ವರೆಗೆ ಸರಕಾರ ನಿದ್ರಿಸುತ್ತಿತ್ತೆ ? ಅದಕ್ಕೆ ಜವಾಬ್ದಾರ ಇರುವವರ ಮೇಲೆ ಕ್ರಮ ಕೈಗೊಳ್ಳಬೇಕು ?