ಚಲನಚಿತ್ರದಲ್ಲಿ ಆಕ್ಷೇಪಾರ್ಹ ಕಂಡು ಬಂದರೆ ಮಾತ್ರ ವಿರೋಧಿಸುವೆವು !

‘ಪಠಾಣ’ ಚಲನಚಿತ್ರದ ಕುರಿತು ವಿಶ್ವ ಹಿಂದು ಪರಿಷತ್ತಿನ ನಿಲುವು !

ನವದೆಹಲಿ – ನಟ ಶಾಹರೂಖ್ ಖಾನ್ ನ ‘ಪಠಾಣ’ ಚಲನಚಿತ್ರ ಜನವರಿ ೨೫ ರಂದು ಬಿಡುಗಡೆ ಆಯಿತು. ಈ ಚಲನಚಿತ್ರದಲ್ಲಿನ ‘ಬೆಶರಮ್ ರಂಗ್’ ಈ ಹಾಡಿನಿಂದ ಕೇಸರಿ ಬಣ್ಣಕ್ಕೆ ಆಗಿದ ಅವಮಾನದಿಂದ ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ತು ಮತ್ತು ಬಜರಂಗದಳದವರು ನೇರವಾಗಿ ಚಲನಚಿತ್ರವನ್ನು ವಿರೋಧಿಸುವುದಿಲ್ಲ, ಎಂದು ಹೇಳಿದ್ದಾರೆ.

೧. ವಿಶ್ವ ಹಿಂದು ಪರಿಷತ್ತಿನ ವಕ್ತಾರ ಶ್ರೀರಾಜ ನಾಯರ್ ಇವರು, ಸಧ್ಯಕ್ಕೆ ವಿಶ್ವ ಹಿಂದು ಪರಿಷತ್ತು ಪಠಾಣ ಚಲನಚಿತ್ರವನ್ನು ವಿರೋಧಿಸುವುದಿಲ್ಲ. ನಮ್ಮ ಹಿಂದಿನ ಆರೋಪವನ್ನು ಗಮನಿಸಿ ಚಲನಚಿತ್ರದಲ್ಲಿ ಮಾಡಿದ ಬದಲಾವಣೆಯು ಯೋಗ್ಯವಾಗಿದೆ. ಚಲನಚಿತ್ರವನ್ನು ನೋಡಿದಾಗ ನಮಗೆ ಆಕ್ಷೇಪಾರ್ಹ ಕಾಣಿಸಿದರೆ, ನಾವು ಅದನ್ನು ವಿರೋಧಿಸುವ ಪುನರ್ವಿಚಾರ ಮಾಡುವೆವು ಎಂದು ಹೇಳಿದರು.

೨. ಹಿಂದುತ್ವನಿಷ್ಠ ಸಂಘಟನೆಗಳಿಂದ ಕೇಸರಿ ಬಣ್ಣ ಮತ್ತು ಕೆಲವು ವಾಕ್ಯಗಳ ಮೇಲೆ ಆಕ್ಷೇಪ ಮಾಡಿದನಂತರ ಕೇಂದ್ರೀಯ ಚಲನಚಿತ್ರ ಪರಿನಿರೀಕ್ಷಣ ಮಂಡಳಿಯು ಚಲನಚಿತ್ರ ನಿರ್ಮಾಪಕರಿಗೆ ಕೆಲವು ಬದಲಾವಣೆಗಳನ್ನು ಸೂಚಿಸಿದನಂತರ ಅದನ್ನು ಪ್ರದರ್ಶಿಸಲಾಗಿದೆ.