ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ನೇತ್ರಕೊನಾದ ಪೂರಬಾಧಲಾ ಮಾರುಕಟ್ಟೆಯ ಹತ್ತಿರದ ಹಿಂದೂಗಳ ದೇವಸ್ಥಾನದ ಮೇಲೆ ಮುಸಲ್ಮಾನರು ದಾಳಿ ನಡೆಸಿ ಅಲ್ಲಿ ಎಲ್ಲಾ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ವಸಂತ ಪಂಚಮಿಗೆ ನಡೆಯುವ ಶ್ರೀ ಸರಸ್ವತಿಯ ದೇವಿಯ ಪೂಜೆಗೆ ವಿರೋಧ ಮಾಡುವುದಕ್ಕಾಗಿ ಈ ದಾಳಿ ಮಾಡಿದ್ದಾರೆ, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯು ಟ್ವೀಟ್ ಮಾಡಿ ಮಾಹಿತಿ ನೀಡಿದೆ.
Islamic extremists have broken all the idols in the temple to stop Saraswati Puja celebrations. The attack took place on a temple in Purbadhala market of Netrokona, Bangladesh.#BangladeshAgainstHinduFestival#HindusUnderAttackInBangladesh pic.twitter.com/FJJONzZfJf
— Voice Of Bangladeshi Hindus 🇧🇩 (@VoiceOfHindu71) January 24, 2023
ಸಂಪಾದಕರ ನಿಲುವು* ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರು ರಕ್ಷಕರೇ ಇಲ್ಲದಿರುವುದರಿಂದ ನಿರಂತರವಾಗಿ ಈ ರೀತಿಯ ಘಟನೆ ನಡೆಯುತ್ತವೆ. ಭಾರತದಲ್ಲಿನ ಹಿಂದೂಗಳಿಗೆ ಭಾರತದಲ್ಲಿನ ದೇವಸ್ಥಾನದ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ಅವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮತ್ತು ಅವರ ದೇವಸ್ಥಾನಗಳ ರಕ್ಷಣೆ ಮಾಡುವರು, ಎಂದು ಅಪೇಕ್ಷೆ ಕೂಡ ಮಾಡಲಾಗದು ! ಆದ್ದರಿಂದ ಬಾಂಗ್ಲಾದೇಶದಲ್ಲಿ ಮುಂದೆ ಕೂಡ ಇದೇ ರೀತಿ ಘಟನೆಗಳು ನಡೆಯಲಿದೆ, ಇದು ಪ್ರತ್ಯೇಕವಾಗಿ ಹೇಳಬೇಕಿಲ್ಲ ! * ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಭಾರತದೊಂದಿಗಿನ ಉತ್ತಮ ಸಂಬಂಧ ಇದ್ದರೂ ಕೂಡ ಅವರು ತಮ್ಮ ದೇಶದಲ್ಲಿನ ಹಿಂದುಗಳ ರಕ್ಷಣೆ ಮಾಡುತ್ತಿಲ್ಲ ಮತ್ತು ಭಾರತ ಸರಕಾರ ಕೂಡ ಅವರ ಮೇಲೆ ಒತ್ತಡ ಹೇರುತ್ತಿಲ್ಲ, ಇದು ವಾಸ್ತವಿಕತೆಯಾಗಿದೆ. |