ಯಾವಾಗ ಜನರು ವ್ಯವಸ್ಥೆ ಅಥವಾ ಅದರ ಗುತ್ತಿಗೆದಾರರಿಗೆ ಹೆದರುತ್ತಾರೆಯೋ, ಆಗ ಅಲ್ಲಿ ದಬ್ಬಾಳಿಕೆ ನಡೆಯುತ್ತಿರುತ್ತದೆ ! – ಕರ್ನಾಟಕ ಉಚ್ಚನ್ಯಾಯಾಲಯ

ಬೆಂಗಳೂರು – ಯಾವಾಗ ವ್ಯವಸ್ಥೆ ಅಥವಾ ಅದರ ಗುತ್ತಿಗೆದಾರರು ಜನರಿಗೆ ಹೆದರುತ್ತಾರೆ, ಇದರ ಅರ್ಥ ಅಲ್ಲಿ ಸ್ವಾತಂತ್ರ್ಯವಿರುತ್ತದೆ; ಆದರೆ ಜನರು ವ್ಯವಸ್ಥೆ ಮತ್ತು ಅದರ ಗುತ್ತಿಗೆದಾರರಿಗೆ ಹೆದರಿದಾಗ, ಅಲ್ಲಿ ದಬ್ಬಾಳಿಕೆ ಇರುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ವರ್ಷದ ನ್ಯಾಯವಾದಿ ಕುಲದೀಪ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ ಇವರು ಈ ಹೇಳಿಕೆ ನೀಡಿದ್ದಾರೆ.

ಬೆಳ್ತಂಗಡಿಯ ಪೂಂಜಾಲಕಟ್ಟೆ ಗ್ರಾಮದ ನ್ಯಾಯವಾದಿ ಕುಲದೀಪ್ ಅವರಿಗೆ ಪೊಲೀಸ್ ಉಪ ನಿರೀಕ್ಷಕ ಸುತೇಶ್ ಕೆ.ಪಿ. ಇವರು ಥಳಿಸಿದ್ದರು. ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ ನ್ಯಾಯವಾದಿ ಕುಲದೀಪ್ ಇವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. (ನ್ಯಾಯವಾದಿಗಳ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುವ ಪೊಲೀಸರು ಸಾಮಾನ್ಯ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂದು ಯೋಚಿಸದಿರುವುದೇ ಒಳಿತು ! – ಸಂಪಾದಕರು)

ನ್ಯಾಯಾಲಯವು ಆದೇಶ ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸದಿರುವುದರಿಂದ ನ್ಯಾಯವಾದಿ ಕುಲದೀಪ ಇವರು ನ್ಯಾಯಾಲಯದ ಮೆಟ್ಟಿಲೇರಿದ್ದರು.(ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾನೂನು ದ್ರೋಹಿ ಪೊಲೀಸರು! – ಸಂಪಾದಕ) ಆ ಸಮಯದಲ್ಲಿ ನ್ಯಾಯಾಲಯವು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಮತ್ತು ಅವರ ಸಹೋದ್ಯೋಗಿಗಳ ಕಚೇರಿ ವಿಚಾರಣೆ ಮಾಡಲು ಮತ್ತು ನ್ಯಾಯವಾದಿ ಕುಲದೀಪ್‌ ಇವರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಇದರೊಂದಿಗೆ ಥಳಿತ ಪ್ರಕರಣದ ಕಚೇರಿ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಪೊಲೀಸರ ವೇತನದಿಂದಲೇ ದಂಡ ನೀಡಬೇಕು ಎಂದೂ ಸಹ ನ್ಯಾಯಾಲಯ ಹೇಳಿದೆ.