ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಪ್ರಶ್ನಿಸುವವರು ಸನಾತನ ಧರ್ಮದ ವಿರೋಧಿಗಳಾಗಿದ್ದಾರೆ !

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿಯವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳಿಗೆ ಸಮರ್ಥನೆ !

(ಎಡದಿಂದ) ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ

ಕಟನೀ (ಮಧ್ಯಪ್ರದೇಶ) – ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹೆಸರನ್ನು ಉಲ್ಲೇಖಿಸದೇ ಟೀಕಿಸುವಾಗ ‘ನಮ್ಮ ಮಠ ಹಾಗೂ ಜೋಶೀಮಠದ ಊರಿನಲ್ಲಿ ಬಿದ್ದಿರುವ ಒಡಕನ್ನು ದೂರಗೊಳಿಸುವ ಚಮತ್ಕಾರ ಮಾಡಬೇಕು. ನಾವು ಅವರ ಜಯಕಾರ ಮಾಡುವೆವು, ಎಂದು ಹೇಳಿದ್ದರು. ಈಗ ದ್ವಾರಕಾ ಪೀಠದ ಶಂಕರಾಚಾರ್ಯರಾದ ಸ್ವಾಮಿ ಸದಾನಂದ ಸರಸ್ವತಿಯವರು ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಸಮರ್ಥಿಸಿದ್ದಾರೆ. ಅವರು ಮಾತನಾಡುತ್ತ, ‘ಬಾಗೇಶ್ವರ ಸರಕಾರ’ರನ್ನು (ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು) ಪ್ರಶ್ನಿಸುವ ಹಿಂದೂಗಳು ಸನಾತನ ಧರ್ಮದ ವಿರೋಧಿಗಳಾಗಿದ್ದಾರೆ. ಹಿಂದೂಗಳೇ ಹಿಂದೂ ಧರ್ಮವನ್ನು ನಿಂದಿಸುತ್ತಿದ್ದಾರೆ. ಇಂತಹವರು ನಾಸ್ತಿಕ ಹಿಂದೂಗಳಾಗಿದ್ದಾರೆ, ಎಂದು ಹೇಳಿದ್ದಾರೆ.

ಶಂಕರಾಚಾರ್ಯ ಸ್ವಾಮೀ ಸದಾನಂದ ಸರಸ್ವತಿಯವರು ಮುಂದುವರಿದು, ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಪ್ರಶ್ನಿಸುವವರು ಎಂದಿಗಾದರೂ ಬಾಗೇಶ್ವರ ಧಾಮಕ್ಕೆ ಹೋಗಿದ್ದಾರೆಯೇ ? ಧೀರೇಂದ್ರಕೃಷ್ಣ ಶಾಸ್ತ್ರಿಯವರು ಎಂದಾದರೂ ಜನರಿಗೆ ಒಳಿತು ಮಾಡಿರುವುದಕ್ಕೆ ಹಣ ಪಡೆದಿದ್ದಾರೆಯೇ ? ಯಾವುದೇ ವ್ಯಕ್ತಿಗೆ ಅವರು ಒಳಿತು ಮಾಡುವುದಾಗಿ ಆಶ್ವಾಸನೆ ನೀಡಿರುವಾಗಲೂ ಅವರಿಗೆ ಕೆಡುಕಾಗಿದೆ ? ಆದುದರಿಂದ ಮೊದಲು ಶ್ರದ್ಧೆ ಮತ್ತು ಅಂಧಶ್ರದ್ಧೆಯ ನಡುವಿನ ಅಂತರವನ್ನು ಅರಿತುಕೊಳ್ಳಬೇಕು. ಯಾರಾದರೂ ದೇವರಿಗೆ ಶರಣಾಗುವುದರಿಂದ ಅವರಿಗೆ ಒಳಿತಾದರೆ ಅದರಲ್ಲಿ ತಪ್ಪೇನು ? ಇದು ನಮ್ಮ ಪರಂಪರೆಯಾಗಿದೆ. ಇದುವೇ ಶ್ರದ್ಧೆ. ಅವರು ಮಾಡುತ್ತಿರುವುದು ಸಾವಿರಾರು ಜನರ ಎದುರು ಸಾಬೀತಾಗುತ್ತಿರುವಾಗ ಅದು ಅಂಧಶ್ರದ್ಧೆ ಹೇಗೆ ? ಸಾವಿರಾರು ಜನರು ಬಾಗೇಶ್ವರ ಧಾಮದಿಂದ ಲಾಭ ಪಡೆಯುತ್ತಿದ್ದಾರೆ. ಅಲ್ಲಿ ಹೋಗುವವರು ಸಮಾಧಾನದೊಂದಿಗೆ ಹಿಂದಿರುಗುತ್ತಾರೆ. ನಿಮ್ಮಲ್ಲಿ ಜಿಜ್ಞಾಸೆ ಇದ್ದರೆ ನೀವೂ ಅಲ್ಲಿಗೆ ಹೋಗಿ. ಆರೋಪಿಸುವುದು ಸುಲಭ ಆದರೆ ಅದನ್ನು ಸಾಬೀತುಪಡಿಸುವುದು ಕಠೀಣ, ಎಂದು ಹೇಳಿದರು.

ಧೀರೇಂದ್ರರ ವಿರುದ್ಧ ಅಯೋಗ್ಯವಾಗಿ ಮಾತನಾಡುವವರ ಮೇಲೆ ನಾನು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವೆನು ! – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಗುರು ಪೀಠಾಧೀಶ್ವರ ರಾಮಭದ್ರಾಚಾರ್ಯ ಮಹಾರಾಜರು

ಪೀಠಾಧೀಶ್ವರ ರಾಮಭದ್ರಾಚಾರ್ಯ ಮಹಾರಾಜ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಗುರುಗಳಾದ ಪೀಠಾಧೀಶ್ವರ ರಾಮಭದ್ರಾಚಾರ್ಯ ಮಹಾರಾಜರು ಮಾತನಾಡುತ್ತ, ‘ನನ್ನ ಶಿಷ್ಯರಾದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಮಾಡಿರುವ ಕೃತಿಗಳು ಮರ್ಯಾದೆ ಮತ್ತು ಧರ್ಮದ ಅನುಸಾರ ಇವೆ. ಅವರ ಹೇಳಿಕೆಗಳನ್ನು ತಪ್ಪು ರೀತಿಯಲ್ಲಿ ಸಾದರಪಡಿಸಲಾಗುತ್ತಿದೆ. ಧೀರೇಂದ್ರರವರ ವಿರುದ್ಧ ಅಯೋಗ್ಯವಾಗಿ ಮಾತನಾಡುವವರ ಮೇಲೆ ನಾನು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಿದ್ದೇನೆ. ಅವರನ್ನು ಅಪಮಾನ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇವುಗಳಿಂದ ಅವರು ಹೆದರುವುದಿಲ್ಲ. ಧೀರೇಂದ್ರನು ಮಾಡಿರುವ ಕೆಲಸದಿಂದ ಮತಾಂತರ ಮಾಡುವವರು ಹೆದರಿದ್ದಾರೆ. ನಾನು ಸರಕಾರಕ್ಕೆ ಮತಾಂತರ ವಿರೋಧಿ ಕಾನೂನು ಮಾಡುವಂತೆ ಪತ್ರ ಬರೆದಿದ್ದೇನೆ.

ಸಂಪೂರ್ಣ ದೇಶವು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬೆಂಬಲ ನೀಡಬೇಕು ! – ಭಾಜಪದ ಸಂಸದ ಹರೀಶ ದ್ವಿವೇದಿ

ಭಾಜಪದ ಸಂಸದ ಹರೀಶ ದ್ವಿವೇದಿ

ಉತ್ತರಪ್ರದೇಶದ ಬಸ್ತಿಯಲ್ಲಿರುವ ಭಾಜಪದ ಸಂಸದರಾದ ಹರೀಶ ದ್ವಿವೇದಿಯವರೂ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಸಮರ್ಥಿಸಿದ್ದಾರೆ. ಅವರು ಮಾತನಾಡುತ್ತ, ಸಂಪೂರ್ಣ ದೇಶವು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಸಮರ್ಥಿಸಬೇಕು. ಅವರು ಸನಾತನದ ಪ್ರಸಾರ ಮಾಡುತ್ತಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿಯವರ ಚಮತ್ಕಾರಗಳು ಇಷ್ಟವಾಗದಿರುವವರು ಅವರ ಬಳಿ ಹೋಗಬಾರದು, ಎಂದು ಹೇಳಿದರು.