ಕೌಶಾಂಬಿ (ಉತ್ತರಪ್ರದೇಶ) ಯಲ್ಲಿ ಯೇಶು  ದರಬಾರನ ಹೆಸರಿನಡಿಯಲ್ಲಿ ಹಿಂದೂಗಳ ಮತಾಂತರ

ಹಿಂದೂ ಸಂಘಟನೆಯ ವಿರೋಧದ ನಂತರ ಸರಕಾರದಿಂದ ತಡೆ

ಪೊಲೀಸರಿಂದ ಆರೋಪ ದಾಖಲು

ಕೌಶಾಂಬಿ (ಉತ್ತರಪ್ರದೇಶ) – ಇಲ್ಲಿ ಯೇಶು ದರಬಾರನ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ ಎಂದು ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧವಾದ ನಂತರ ಆಡಳಿತವು ದರಬಾರ ರದ್ದುಪಡಿಸಿತು. ಹಾಗೂ ಮುಂದೆ ದರಬಾರ ಆಯೋಜಿಸುವ ಮೊದಲು ಅನುಮತಿ ಪಡೆಯುವಂತೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಆಯೋಜಕರ ವಿರುದ್ಧ ದೂರು ದಾಖಲಿಸಿದ್ದಾರೆ. ಇಲ್ಲಿಯ ಮತಾಂತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

(ಸೌಜನ್ಯ :Capital TV Uttar Pradesh)

೧. ಮಹಮ್ಮದಪುರ ಪುರೈನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಸೀಹಿ ಸಮಾಜದ ಜನರಿಂದ ದರಬಾರನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಹಿಂದೂ ಮಹಾಸಭೆಯ ಕಾರ್ಯಕರ್ತರು ಅಲ್ಲಿಗೆ ತಲುಪಿ ಅದನ್ನು ವಿರೋಧಿಸಿದರು. ಕಾರ್ಯಕರ್ತರು ಆಯೋಜಕರ ಮೇಲೆ  ಮೂಢನಂಬಿಕೆ ಮತ್ತು ಮತಾಂತರ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಆರೋಪಿಸಿದ್ದಾರೆ. ಸ್ಥಳೀಯ ಹಿಂದೂಗಳು ಕೂಡ ಈ ಪ್ರಕರಣದಲ್ಲಿ ಆಯೋಜಕರಿಗೆ ಕಾರ್ಯಕ್ರಮ ನಿಲ್ಲಿಸಲು ಮತ್ತು ಮತ್ತೆ ಆಯೋಜನೆ ಮಾಡುವಾಗ ಸರಕಾರದ ಅನುಮತಿ ಪಡೆಯುವಂತೆ ಹೇಳಿದ್ದಾರೆ.

೨. ಈ ಪ್ರಕರಣದಲ್ಲಿ ಹಿಂದೂ ಜಾಗರಣ ಮಂಚದ ಪದಾಧಿಕಾರಿ ವೇದ ಪ್ರಕಾಶ ಪಾಂಡೆಯ ಇವರು, ಬಹಳ ದಿನದಿಂದ  ಇಲ್ಲಿ ಹಿಂದೂಗಳಿಗೆ ಭೂತ ಪ್ರೇತದ ಭಯ ತೋರಿಸಿ, ಹಾಗೂ ಆಮೀಷ ಒಡ್ಡಿ ಕ್ರೈಸ್ತರನ್ನಾಗಿ ಪರಿವರ್ತಿಸಲಾಗುತ್ತಿತ್ತು, ಎಂದು ಹೇಳಿದರು.

ಸಂಪಾದಕರ ನಿಲುವು 

ಹಿಂದುತ್ವನಿಷ್ಠ ಸಂಘಟನೆಗೆ ತಿಳಿಯುವಂತಹ ವಿಷಯವು ಪೊಲೀಸರಿಗೆ ಮತ್ತು ಸರಕಾರಕ್ಕೆ ಏಕೆ ತಿಳಿಯುವುದಿಲ್ಲ ?