ಮಧ್ಯಪ್ರದೇಶದಲ್ಲಿ ಸಲೀಮ ಖಾನ್ ಇವರಿಂದ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಪ್ರವೇಶ !

ಶ್ರೀ ಹನುಮಂತನ ಪ್ರಭಾವಿತನಾಗಿ ಹಿಂದೂ ಧರ್ಮ ಸ್ವೀಕರಿಸಿದುದಾಗಿ ಮಾಹಿತಿ !

ಬಾಬಾ ಸುಖರಾಮ  ದಾಸ

ಭೋಪಾಲ್: ರಾಜ್ಯದ ಮುರೈನ ಜಿಲ್ಲೆಯಲ್ಲಿನ ಅಂಬಾಹ ಕ್ಷೇತ್ರದ ಅಂತರ್ಗತ ಬರುವ ಖಡಿಯಾಹಾರ ಇಲ್ಲಿ ವಾಸಿಸುವ ಸಲೀಮ ಖಾನ್ ಎಂಬ ಒಬ್ಬ ವೃದ್ಧ ವ್ಯಕ್ತಿ  ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.  ಬಾಬಾ ಸುಖರಾಮ  ದಾಸ ಎಂದು ಅವರಿಗೆ ನಾಮಕರಣ ಮಾಡಲಾಗಿದೆ. ಶ್ರೀ ಹನುಮಂತನಿಂದ ಪ್ರಭಾವಿತವಾಗಿ ಮತ್ತು ನನ್ನ ಅಂತರಾತ್ಮದ ಧ್ವನಿ ಕೇಳಿ ನಾನು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಎಂದು ಬಾಬಾ ಸುಖರಾಮ ದಾಸ ಹೇಳಿದ್ದಾರೆ.

೧. ಬಾಬಾ ಸುಖಾರಾಮ ದಾಸರು ಕಳೆದ ಕೆಲವು ತಿಂಗಳಿಂದ ಶ್ರೀ ಹನುಮಂತ ದೇವಸ್ಥಾನದಲ್ಲಿ ಭಜನೆ ಕೀರ್ತನೆ ಮಾಡುತ್ತಿದ್ದರು. ಕಳೆದ ವರ್ಷದಲ್ಲಿ ಅವರಲ್ಲಿ ಹಿಂದೂ ಧರ್ಮದ ಕುರಿತು ಶ್ರದ್ಧೆ ಹೆಚ್ಚಾಯಿತು ,ಆ ಕಾರಣದಿಂದ ಅವರು ಮನೆ ಬಿಟ್ಟರು.

೨. ಅದರ ನಂತರ ಅವರು ಖಡಿಯಾಹಾರದಲ್ಲಿ ಕಟ್ಟಿರುವ ಶ್ರೀ ಹನುಮಂತನ ದೇವಸ್ಥಾನಕ್ಕೆ ಹೋದರು. ಅಲ್ಲಿಯ ಮಹಂತರಿಗೆ ನಾನು ಮುಸಲ್ಮಾನನಾಗಿದ್ದು ತನಗೆ ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಲಿಕ್ಕಿದೆ ಎಂದು ಹೇಳಿದರು. ಅದರ ನಂತರ ಅವರು ಮಹಂತರನ್ನು ಗುರು ಎಂದು ತಿಳಿದು ದೇವಸ್ಥಾನದಲ್ಲಿ ಪೂಜೆ ಅರ್ಚನೆ ಮಾಡಲು ಪ್ರಾರಂಭಿಸಿದರು.

೩. ಭಗವಂತ ಮತ್ತು ಗುರು ಮಹಾರಾಜರ ಕೃಪೆಯಿಂದ ನನಗೆ ಹಿಂದೂ ಧರ್ಮದಲ್ಲಿ ದೀಕ್ಷೆ ಸಿಕ್ಕಿದೆ. ನಾನು ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಂತ ಇಚ್ಛೆಯಿಂದ ಹಿಂದೂ ಧರ್ಮದಲ್ಲಿ ಪ್ರವೇಶ ಪಡೆದಿದ್ದೇನೆ. ನಾನು ನನ್ನ ಪತ್ನಿ , ನನ್ನ ನಾಲ್ಕು ಮಕ್ಕಳು, ಮತ್ತು ೬ ಮೊಮ್ಮಕ್ಕಳ ತ್ಯಾಗ ಮಾಡಿದ್ದೇನೆ ಎಂದು ಅವರು ಹೇಳಿದರು.

೪. ಶ್ರೀ ಹನುಮಂತ ದೇವಸ್ಥಾನದಲ್ಲಿನ ಭವ್ಯ ಕಾರ್ಯಕ್ರಮದಲ್ಲಿ ಬಾಬಾ ಸುಖದಾಸ ಇವರು ಹಿಂದೂ ಧರ್ಮ ಸ್ವೀಕರಿಸಿದರು. ಇದರ ಮಾಹಿತಿ ದೊರೆಯುತ್ತಲೇ ಅವರ ಕುಟುಂಬದವರು ಕೂಡ ದೇವಸ್ಥಾನಕ್ಕೆ ಬಂದರು. ಆ ಸಮಯದಲ್ಲಿ ಅವರ ಪತ್ನಿ, ನನ್ನ ಪತಿ ಹಿಂದೂ ಧರ್ಮ ಸ್ವೀಕರಿಸಿರುವುದರಿಂದ ನನಗೆ ಯಾವುದೇ ಅಡಚಣೆ ಇಲ್ಲ. ಅವರಿಗೆ ಹಿಂದೂ ಧರ್ಮ ಒಳ್ಳೆಯದೆಂದು ಅನಿಸಿರುವುದರಿಂದ ಅವರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ಹೇಳಿದರು.