ಕರ್ನಾಟಕದಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸಲ್ಮಾನರಿಂದ ಹಾಕಲಾದ ಅಂಗಡಿಗಳ ತೆರವು  !

ಅಂಗಡಿಗಳ ವಿರುದ್ಧ ಬಿತ್ತಿ ಪತ್ರಗಳನ್ನು ಅಂಟಿಸಿದ್ದ ವಿಶ್ವ ಹಿಂದೂ ಪರಿಷತ್ತು !

ದಕ್ಷಿಣ ಕನ್ನಡ (ಕರ್ನಾಟಕ) – ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಮಯದಲ್ಲಿ ಮುಸಲ್ಮಾನರಿಂದ ಹಾಕಲಾಗಿರುವ ಅಂಗಡಿಗಳನ್ನು ತೆರೆವು ಗೊಳಿಸಲಾಗಿದೆ. ಈ ಜಾತ್ರಾ ಮಹೋತ್ಸವ ಆರಂಭವಾಗುವ ಮೊದಲು ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನರ ಅಂಗಡಿಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಕೈಗೆತ್ತಿಕೊಂಡು ಅಲ್ಲಲ್ಲಿ ಬಿತ್ತಿ ಪತ್ರಕಗಳನ್ನು ಅಂಟಿಸಲಾಗಿತ್ತು. ಅನೇಕ ವಾಟ್ಸಪ್ ಗ್ರೂಪಗಳಿಂದ ಅಹಿಂದೂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ನಿಷೇಧಿಸುವ, ಸಂದೇಶ ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಬ್ಬ ಮುಸಲ್ಮಾನನು ಜಾತ್ರೆಯಲ್ಲಿ ಅಂಗಡಿ ಹಾಕಿದ್ದನು, ಅದನ್ನು ತೆರವುಗೊಳಿಸಲಾಯಿತು. ಹಾಗೂ ಇಬ್ಬರು ಮುಸಲ್ಮಾನರ ಅಂಗಡಿ ಹಾಕುವ ಅನುಮತಿ ರದ್ದು ಪಡಿಸಲಾಯಿತು.

೧. ಜನವರಿ ೧೪ ರಿಂದ ೨೨ ರ ಕಾಲಾವಧಿಯಲ್ಲಿ ಈ ಜಾತ್ರೆಯ ಆಯೋಜನೆ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ತಿನಿಂದ ಅಂಟಿಸಲಾದ ಬಿತ್ತಿ ಪತ್ರಕಗಳ ಮೇಲೆ ನವೆಂಬರ್ ೨೦೨೨ ರಲ್ಲಿ ನಡೆದಿರುವ ಕುಕ್ಕರ್ ಸ್ಫೋಟದ ಉಲ್ಲೇಖ ಮಾಡುತ್ತಾ,  ಈ ಸ್ಫೋಟದ ಗುರಿ ಕದ್ರಿ ಮಂಜುನಾಥ ದೇವಸ್ಥಾನ ಇದೆ, ಎಂದು ಹೇಳಲಾಗಿತ್ತು. ಮೂರ್ತಿ ಪೂಜೆಯನ್ನು ವಿರೋಧಿಸುವವರು ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಕೇವಲ ಹಿಂದೂ ಧರ್ಮದ ಪಾಲನೆ ಮಾಡುವವರು ಇಲ್ಲಿ ವ್ಯಾಪಾರ ಮಾಡಬಹುದು. ಪೊಲೀಸರು ಈ ಬಿತ್ತಿ ಪತ್ರಕಗಳು ತೆಗೆದಿದ್ದರೂ ಮತ್ತು ದೇವಸ್ಥಾನ ಆಡಳಿತವು ಕೂಡ ಈ ಬಿತ್ತಿ ಪತ್ರಕಗಳಲ್ಲಿ ಬರೆದಿರುವ ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

೨. ಈ ದೇವಸ್ಥಾನದ ಜಾತ್ರೆಯಲ್ಲಿ  ಒಂದು ಕಿಲೋ ಮೀಟರ್ ಪರಿಸರದಲ್ಲಿ ಅಂಗಡಿಗಳನ್ನು ಹಾಕಲಾಗುತ್ತದೆ. ಇದರಲ್ಲಿ ಮುಸಲ್ಮಾನರ ಅಂಗಡಿಗಳು  ಕೂಡ ಇರುತ್ತವೆ. ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ದೇವಸ್ಥಾನದ ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಹಾಕಲು ಹಿಂದೂ ಸಂಘಟನೆಗಳಿಂದ ಬಹಿಷ್ಕಾರದ ಚಳುವಳಿ ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸ್ಥಳಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಇದರಲ್ಲಿ ಮುಸಲ್ಮಾನರ ಅಂಗಡಿಗಳಿಗೆ ವಿರೋಧಿಸಲಾಗಿತ್ತು.

ಯಾರು ದೇಶದ ಕಾನೂನು ಪಾಲನೆಯನ್ನು ಮಾಡುವುದಿಲ್ಲವೋ, ಅವರಿಗೆ ವ್ಯಾಪಾರ ಮಾಡುವ ಅನುಮತಿ ನೀಡಲಾಗುವುದಿಲ್ಲ, ಈ ರೀತಿ ನಿಲುವನ್ನು ತಾಳಲಾಗಿತ್ತು.