ಸಿವಾನ (ಬಿಹಾರ) – ಸಾರಾಯಿ ನಿಷೇಧ ಇರುವ ಬಿಹಾರದಲ್ಲಿ ಮತ್ತೊಮ್ಮೆ ಕಲಬೆರಿಕೆ ಸಾರಾಯಿ ಕುಡಿದು ೩ ಜನರ ಸಾವನ್ನಪ್ಪಿದ್ದಾರೆ. ೧೨ ಜನರ ಆರೋಗ್ಯ ಗಂಭೀರವಾಗಿದ್ದು ಅದರಲ್ಲಿ ೬ ಜನರು ದೃಷ್ಟಿ ಕಳೆದುಕೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಕಳೆದ ಡಿಸೆಂಬರ ತಿಂಗಳಲ್ಲಿ ಬಿಹಾರದ ಛಪರಾ ಜಿಲ್ಲೆಯಲ್ಲಿ ಕಲಬೆರಿಕೆ ಸಾರಾಯಿ ಕುಡಿದು ೭೦ ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು.
೧. ಸಿವಾನ ಜಿಲ್ಲೆಯಲ್ಲಿನ ಲಕಡಿ ನವೀಗಂಜ ಓಪಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಬಾಲ ಮತ್ತು ಭೋಪತಪುರ ಗ್ರಾಮದ ಜನರು ಕಲೆಬೆರಿಕೆ ಸಾರಾಯಿ ಸೇವಿಸಿದ್ದರು. ಇಲ್ಲಿಯವರೆಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಸಂತ್ರಸ್ತ ಕುಟುಂಬದವರಿಗೆ ಮಾಧ್ಯಮಗಳ ಜೊತೆ ಮಾತನಾಡಲು ನಿಷೇಧಿಸಿದೆ.
೨. ಇದರ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿ ಅಮಿತ ಕುಮಾರ ಪಾಂಡೆ ಇವರು, ಈ ಪ್ರಕರಣದಲ್ಲಿ ಶವ ಪರೀಕ್ಷೆಯ ವರದಿ ಬಂದ ನಂತರವೇ ಇದರ ಬಗ್ಗೆ ಹೇಳುವುದು ಸಾಧ್ಯ ಎಂದು ಹೇಳಿದ್ದಾರೆ. ಕೊನೆಗೆ ಇಷ್ಟು ಜನರು ಏಕೆ ಸಾವನ್ನಪ್ಪುತ್ತಿದ್ದಾರೆ ? ಮತ್ತು ಅನೇಕರ ಆರೋಗ್ಯ ಏಕೆ ಹದಗೆಡುತ್ತಿದೆ ? ಇದು ಸಮೀಕ್ಷೆಯ ವಿಷಯವಾಗಿದೆ ಎಂದು ಸಹ ಹೇಳಿದರು.
ಸಂಪಾದಕೀಯ ನಿಲುವುಬಿಹಾರದಲ್ಲಿ ಸಾರಾಯಿ ನಿಷೇಧ ಒಂದು ತೋರಿಕೆ ಆಗಿದೆ. ಇದು ಸತತವಾಗಿ ಕಲಬೆರಿಕೆ ಸರಾಯಿದಿಂದ ಜನರು ಸಾವನ್ನಪ್ಪುವ ಘಟನೆಯಿಂದ ಸ್ಪಷ್ಟವಾಗಿದೆ. ಇದರ ಹೊಣೆಗಾರರ ಮೇಲೆ ಯಾರು ಮತ್ತು ಹೇಗೆ ಕ್ರಮ ಕೈಗೊಳ್ಳುವರು ? ಇದು ಕೂಡ ಒಂದು ಪ್ರಶ್ನೆ ಆಗಿದೆ ! |