ಗೋ ಹತ್ಯೆ ನಿಂತರೆ, ಪೃಥ್ವಿಯ ಮೇಲಿನ ಎಲ್ಲಾ ಪ್ರಶ್ನೆಗಳ ಪರಿಹಾರವಾಗುವುದು !

ತಾಪಿ (ಗುಜರಾತ) ಜಿಲ್ಲಾ ಸತ್ರ ನ್ಯಾಯಾಲಯದಿಂದ ಸ್ಪಷ್ಟನೆ !

ತಾಪಿ (ಗುಜರಾತ) – ಆಕಳಿನಿಂದ ಧರ್ಮವು ಹುಟ್ಟಿದ್ದೂ ಗೋ ಹತ್ಯೆನಿಲ್ಲಿಸಿದರೇ ಮಾತ್ರ ಪೃಥ್ವಿಯಲ್ಲಿನ ಎಲ್ಲಾ ಪ್ರಶ್ನೆಗಳ ಪರಿಹಾರವಾಗುವುದು, ಎಂದು ತಾಪಿ ಜಿಲ್ಲಾ ಸತ್ರ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಾರಾಷ್ಟ್ರದಿಂದ ಗುಜರಾತಗೆ ಗೋವುಗಳ ಕಳ್ಳ ಸಾಗಾಣಿಕೆ ಮಾಡುವ ಮಹಮ್ಮದ್ ಆಮೀನ್ ಆರಿಫ್ ಅಂಜುಮ್ ಈ ೨೨ ವರ್ಷದ ಗೋ ಕಳ್ಳ ಸಾಗಾಣಿಕೆ ದಾರನಿಗೆ ಜೀವಾವಧಿ ಶಿಕ್ಷೆ ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜುಲೈ ೨೦೨೦ ರಲ್ಲಿ ಮಹಾರಾಷ್ಟ್ರದಿಂದ ಒಂದು ಟ್ರಕ್ ನಲ್ಲಿ ೧೬ ಹಸುಗಳು ಮತ್ತು ಅದರ ಕರುಗಳನ್ನು ತೆಗೆದುಕೊಂಡು ಹೋಗುವಾಗ ಇವನನ್ನು ಬಂಧಿಸಿದ್ದರು.

ನ್ಯಾಯಾಲಯವು

೧. ಧರ್ಮದ ಜನನ ಗೋಮಾತೆಯಿಂದ ಆಗಿದೆ; ಕಾರಣ ಧರ್ಮ ವೃಷಭದ ರೂಪದಲ್ಲಿ ಇರುವುದು ಮತ್ತು ಗೋಮಾತೆಯ ಕರುವನ್ನು ವೃಷಭ ಎನ್ನುತ್ತಾರೆ. ಗೋವಿನ ಅಸ್ತಿತ್ವ ಮುಗಿದರೆ, ಆಗ ಈ ಬ್ರಹ್ಮಾಂಡದ ಅಸ್ತಿತ್ವ ಮುಗಿಯುವುದು. ವೇದಗಳ ಎಲ್ಲಾ ೬ ಭಾಗಗಳ ನಿರ್ಮಿತಿ ಗೋವಿನಿಂದ ಆಗಿದೆ. ಆದ್ದರಿಂದ ಗೋ ಹತ್ಯೆ ಸ್ವೀಕರಿಸಲು ಸಾಧ್ಯವಿಲ್ಲ.

೨. ಪ್ರಸ್ತುತ ಗೋಧನ ಶೇಕಡ ೭೫ ರಷ್ಟು ನಾಶವಾಗಿದೆ ಮತ್ತು ಈಗ ಅದು ಕೇವಲ ಶೇಕಡ ೨೫ ರಷ್ಟು ಉಳಿದಿದೆ. ಒಂದು ಸಮಯ ಹೇಗೆ ಬರುವುದು, ಜನರು ಗೋವಿನ ಚಿತ್ರ ಬರೆಯುವುದು ಮರೆಯುವರು. ಸ್ವಾತಂತ್ರ್ಯದ ನಂತರ ೭೦ ವರ್ಷ ಕ್ಕಿಂತಲೂ ಹೆಚ್ಚಿನ ಸಮಯ ಕಳೆದಿದೆ. ಈ ಸಮಯದಲ್ಲಿ ಗೋ ಹತ್ಯೆ ನಿಲ್ಲಲಿಲ್ಲ, ಅದು ಎಲ್ಲಕ್ಕಿಂತ ತುತ್ತ ತುದಿಗೆ ಮುಟ್ಟಿದೆ.

೩. ಕಿರಿಕಿರಿ ಮತ್ತು ಕ್ರೋಧ ಹೆಚ್ಚಿದೆ. ಆದ್ದರಿಂದಲೇ ಇಂದಿನ ಈ ಪ್ರಶ್ನೆಗಳು ನಿರ್ಮಾಣವಾಗಿವೆ. ಇದರ ಹಿಂದಿನ ಏಕೈಕ ಕಾರಣವೆಂದರೆ ಗೋ ಹತ್ಯೆ ಆಗಿದೆ. ಎಲ್ಲಿಯವರೆಗೆ ಸಂಪೂರ್ಣವಾಗಿ ಗೋಹತ್ಯೆ ನಿಲ್ಲುವುದಿಲ್ಲವೋ, ಅಲ್ಲಿಯವರೆಗೆ ಸಾತ್ವಿಕ ಜಲವಾಯುವಿನ ಪ್ರಭಾವ ಬೀರುವುದಿಲ್ಲ. ಗೋ ಹತ್ಯೆ ಮತ್ತು ಗೋ ಕಳ್ಳ ಸಾಗಾಣಿಕೆ ಈ ಘಟನೆಗಳು ಸಭ್ಯ ಸಮಾಜಕ್ಕೆ ನಾಚಿಕೆಗೇಡು.

೪. ಗೋ ರಕ್ಷಣೆ ಮತ್ತು ಗೋಪಾಲನೆ ಇದರ ಬಗ್ಗೆ ಬಹಳ ಚರ್ಚೆ ನಡೆಯುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಈ ಬಗ್ಗೆ ಕೃತಿಗಳಾಗುವುದಿಲ್ಲ. ಹಸುವಿನ ಸಗಣಿಯಿಂದ ಕಟ್ಟಿರುವ ಮನೆಯಲ್ಲಿ ಪರಮಾಣು ಬಾಂಬ್ ನಿಂದ ಹೊರಸುಸುವ ವಿಕಿರಣಗಳ ಯಾವುದೇ ಪರಿಣಾಮ ಆಗುವುದಿಲ್ಲ. ಹಾಗೂ ಗೋಮೂತ್ರದ ಉಪಯೋಗ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸುತ್ತೇವೆ ಎಂದು ವಿಜ್ಞಾನ ಕೂಡ ಸಿದ್ದಪಡಿಸಿದೆ.

೫. ಗೋವು ಕೇವಲ ಒಂದು ಪ್ರಾಣಿಯಲ್ಲ, ಆಕೆ ಮಾತೇಯಾಗಿದ್ದಾಳೆ, ಆದ್ದರಿಂದಲೇ ಆಕೆಯನ್ನು ಗೋಮಾತೆ ಎನ್ನುತ್ತಾರೆ. ಹಸುವಿನಷ್ಟು ಯಾವುದೇ ಕೃತಜ್ಞವಿಲ್ಲ. ಒಂದು ಹಸು ೬೮ ಕೋಟಿ ಪವಿತ್ರ ಸ್ಥಳ ಮತ್ತು ೩೩ ಕೋಟಿ ದೇವತೆಗಳ ವಾಸವಾಗಿರುವ ಜೀವಂತ ಗ್ರಹವಾಗಿದೆ.

..ಯಾವ ದಿನ ಪೃಥ್ವಿಯಲ್ಲಿನ ಎಲ್ಲಾ ಪ್ರಶ್ನೆ ಬಗೆಹರಿಯುವುದು ಅಂದು ಪೃಥ್ವಿಯ ಕಲ್ಯಾಣವಾಗುವುದು !

ಗೋ ಹತ್ಯೆಯ ಬಗ್ಗೆ ಹೇಳುವಾಗ ನ್ಯಾಯಾಧೀಶರು ಸಂಸ್ಕೃತ ಶ್ಲೋಕ ಹೇಳಿದರು. ಹಾಗೂ ಇತರ ೨ ಶ್ಲೋಕಗಳ ಉಲ್ಲೇಖ ಕೂಡ ಮಾಡಿದರು. ಈ ಶ್ಲೋಕದಲ್ಲಿ, ಎಲ್ಲಿ ಗೋವು ಸುಖವಾಗಿರುತ್ತದೆ ಅಲ್ಲಿ ಧನ ಮತ್ತು ಸಂಪತ್ತಿ ಸಿಗುತ್ತದೆ. ಎಲ್ಲಿ ಗೋವು ದುಃಖಿತವಾಗಿರುತ್ತದೆ ಅಲ್ಲಿಂದ ಧನ ಮತ್ತು ಸಂಪತ್ತಿ ಹೊರಹೋಗುತ್ತದೆ. ಗೋವು ರುದ್ರನ ತಾಯಿ, ವಸುವಿನ ಮಗಳು, ಅದಿತಿ ಪುತ್ರರ ಸಹೋದರಿ ಮತ್ತು ದೃರೂಪ ಅಮೃತದ ಖಜಾನೆ ಆಗಿದೆ. ಯಾವ ದಿನ ಗೋವಿನ ರಕ್ತದ ಒಂದು ಹನಿ ಪೃಥ್ವಿಯ ಮೇಲೆ ಬೀಳುವುದಿಲ್ಲ, ಆ ದಿನದಂದು ಪೃಥ್ವಿಯಲ್ಲಿನ ಎಲ್ಲಾ ಪ್ರಶ್ನೆ ಬಗೆಹರಿದು ಪೃಥ್ವಿಯ ಕಲ್ಯಾಣವಾಗುವುದು ಎಂದು ಹೇಳಿತು.

 

ಸಂಪಾದಕೀಯ ನಿಲುವು

ಸರಕಾರವು ಭಾರತಾದ್ಯಂತ ಗೋ ಹತ್ಯೆ ನಿಷೇಧ ಕಾನೂನು ರೂಪಿಸಿ ಗೋ ಹತ್ಯೆ ನಿಲ್ಲಿಸುವುದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !