ಬಾಗೇಶ್ವರ ಧಾಮದ ವೇದಿಕೆಯಲ್ಲಿ ಸುಲ್ತಾನ ಬೇಗಮ್ ಇವರಿಂದ ಹಿಂದೂ ಧರ್ಮ ಸ್ವೀಕಾರ !

ರಾಯಪುರ (ಛತ್ತಿಸ್ಗಢ) – ಮಹಂತ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಬಾಗೇಶ್ವರ ಧಾಮದ ವೇದಿಕೆಯಲ್ಲಿ ಸುಲ್ತಾನ ಬೇಗಮ್ ಇವರು ಜನವರಿ ೨೧ ರಂದು ಹಿಂದೂ ಧರ್ಮದಲ್ಲಿ ಪ್ರವೇಶಿಸಿದರು. ಈ ದಿನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಛತ್ತೀಸ್ ಗಡದಲ್ಲಿ ತಮ್ಮ ದರ್ಬಾರದ ಆಯೋಜನೆ ಮಾಡಿದ್ದರು. ‘ಇಂದು ಈ ಸಹೋದರಿ ಬಾಲೆಶ್ವರ ಬಾಲಾಜಿಯ ಪವಾಡ ನೋಡಿ ಮತ್ತು ಸನಾತನ ಹಿಂದೂ ಧರ್ಮಕ್ಕೆ ಸರ್ವಸ್ವವೆಂದು ನಂಬುತ್ತಾ ಸ್ವಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸಿದಳು, ಎಂದು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಹೇಳಿದರು. ವಿಶೇಷ ಎಂದರೆ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಕುರಿತು ಕೆಲವು ಜನರು ಮೂಢನಂಬಿಕೆ ಹಬ್ಬಿಸುವ ಆರೋಪ ಮಾಡುತ್ತಿದ್ದಾರೆ.

ಹಿಂದೂ ಧರ್ಮ ಸಭ್ಯತೆಯ ಧರ್ಮ ! – ಸುಲ್ತಾನ ಬೇಗಮ್

ಸುಲ್ತಾನ ಬೇಗಮ್ ಇವರು, ‘ನಾನು ಛತ್ತೀಸ್ ಗಡದ ಬಿಲಾಸಪುರದವಳಾಗಿದ್ದೇನೆ. ನನ್ನ ತಂದೆಯ ಹೆಸರು ಆಮಿರ ಖಾನ್ ಮತ್ತು ತಾಯಿಯ ಹೆಸರು ಶರ್ವರಿ ಬೇಗಮ್ ಇದೆ. ನಾನು ಮೂರ್ತಿ ಪೂಜೆ ಮಾಡುತ್ತೇನೆ; ಆದ್ದರಿಂದಲೇ ನನ್ನ ಕುಟುಂಬದವರು ನನ್ನನ್ನು ಹೊರ ಹಾಕಿದ್ದಾರೆ. ಈ ಜನರು ನನಗೆ, ನಾನು ಇಸ್ಲಾಂನ ಹೆಸರಿಗೆ ಒಂದು ಕಲಂಕವಾಗಿದ್ದೇನೆ. ನಾನು ಸತ್ತರೆ ನರಕಕ್ಕೆ ಹೋಗುವೆನು ಎಂದು ಸುಲ್ತಾನ ಬೇಗಮ್ ಹೇಳಿದರು. ಅವರು ಮಾತು ಮುಂದುವರಿಸಿ ನನ್ನ ಮನಸ್ಸು, ಹಿಂದೂ ಧರ್ಮಕ್ಕಿಂತ ಒಳ್ಳೆಯ ಧರ್ಮ ಬೇರೊಂದು ಇರಲು ಸಾಧ್ಯವಿಲ್ಲ; ಏಕೆಂದರೆ ಈ ಧರ್ಮ ಸಭ್ಯತೆಯ ಧರ್ಮವಾಗಿದೆ. ಇಲ್ಲಿ ಸಹೋದರ ಸಹೋದರಿಯಲ್ಲಿ ವಿವಾಹವಾಗುವುದಿಲ್ಲ. ಇಲ್ಲಿ ಮಹಿಳೆಯರ ಜೀವನ ವ್ಯರ್ಥವಾಗುವುದಿಲ್ಲ. ಈ ಧರ್ಮದಲ್ಲಿ ತ್ರಿವಳಿ ತಲಾಕ್ ಇಲ್ಲ. ಇದರಲ್ಲಿ ಸಪ್ತಪದಿಯಲ್ಲಿ ವಿವಾಹ ಇರುತ್ತದೆ.

ಇದರಲ್ಲಿ ಕುಂಕುಮ ಮಹತ್ವದ್ದಾಗಿದೆ, ಮಂಗಳಸೂತ್ರಕ್ಕೆ ಮಹತ್ವವಿದೆ. ಸಂಪೂರ್ಣ ಸಮಾರಂಭದ ಸಂಸ್ಕಾರಕ್ಕೆ ಮಹತ್ವವಿದೆ ಎಂದು ಹೇಳಿದರು. (ಲವ್ ಜಿಹಾದ್ ಗೆ ಬಲಿಯಾಗಿ ಹಿಂದೂ ಧರ್ಮದ ತ್ಯಾಗ ಮಾಡುವ ಹಿಂದೂ ಹುಡುಗಿಯರ ಕಣ್ಣ ತೆರೆಸುವ ಹೇಳಿಕೆ ! – ಸಂಪಾದಕರು)