ಅಂಡಮಾನ್ – ನಿಕೋಬಾರ್ ನ 21ದ್ವೀಪಗಳಿಗೆ ‘ಪರಮವೀರ ಚಕ್ರ’ ಪಡೆದಿರುವ ಸೈನಿಕರ ಹೆಸರು !

ನವದೆಹಲಿ – ಕೇಂದ್ರ ಸರಕಾರದಿಂದ ಅಂಡಮಾನ್ – ನಿಕೋಬಾರ್ ನಲ್ಲಿರುವ 21 ದ್ವೀಪಗಳಿಗೆ ‘ಪರಮ ವೀರ ಚಕ್ರ’ ಪಡೆದಿರುವ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಹೆಸರನ್ನು ಇಡಲಾಗಿದೆ. ಇದರಲ್ಲಿ 1947, 1962, 1971 ಮತ್ತು 1999 ಈ ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಹಾಗೂ 1965ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಪರಾಕ್ರಮ ತೋರಿಸಿರುವ ಭಾರತೀಯ ಸೈನಿಕರು ಮತ್ತು ಅಧಿಕಾರಿಗಳೊಂದಿಗೆ 1987ರಲ್ಲಿ ಶ್ರೀಲಂಕಾದಲ್ಲಿ ‘ಶಾಂತಿಸೇನೆ’ ಎಂದು ಹೋಗಿದ್ದ ಸೈನಿಕರೂ ಸೇರಿದ್ದಾರೆ. ಇದರಲ್ಲಿ ಮೇಜರ ರಾಣೆ, ಮೇಜರ್ ಶೈತಾನ ಸಿಂಹ, ಕಾರ್ಗಿಲ್ ಯುದ್ಧದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮುಂತಾದವರ ಹೆಸರುಗಳು ಇದೆ.