ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಕಾನೂನಿನಲ್ಲಿರುವ ಶಿಕ್ಷೆಯನ್ನು ಇನ್ನೂ ಕಠೋರಗೊಳಿಸಿದೆ – ಪಾಕಿಸ್ತಾನ ಮಾನವಾಧಿಕಾರ ಆಯೋಗದಿಂದ ಚಿಂತೆ ವ್ಯಕ್ತ !

ಸುಳ್ಳು ಆರೋಪ ಮತ್ತು ಸೇಡು ತೀರಿಸಿಕೊಳ್ಳಲು ಈ ಕಾನೂನಿನ ಬಳಕೆಯ ಸಾಧ್ಯತೆ !

(ಧರ್ಮನಿಂದೆ ಅಂದರೆ ಶ್ರದ್ಧಾಸ್ಥಾನಗಳ ಅಪಮಾನ ಮಾಡುವುದು)

ಇಸ್ಲಾಮಾಬಾದ(ಪಾಕಿಸ್ತಾನ)- ಪಾಕಿಸ್ತಾನ ಮಾನವಾಧಿಕಾರ ಆಯೋಗವು ದೇಶದ `ಅಪರಾಧ ಕಾನೂನು (ಸಂಶೋಧನೆ) ಅಧಿನಿಯಮ 2023’ರ ಅಡಿಯಲ್ಲಿ ಬರುವ ಧರ್ಮನಿಂದೆಯ ಸಂದರ್ಭದಲ್ಲಿನ ವ್ಯವಸ್ಥೆಯ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ಜನವರಿ 17ರಂದು ಪಾಕಿಸ್ತಾನದ ಸಂಸತ್ತಿನಲ್ಲಿ ಈ ಸುಧಾರಿತ ಕಾನೂನಿಗೆ ಸಮ್ಮತಿ ದೊರೆತಿದೆ.

೧. ಈ ಸುಧಾರಣೆಯ ಮೂಲಕ ಕಾನೂನಿನಲ್ಲಿ ಧಾರ್ಮಿಕ ವ್ಯಕ್ತಿಯ ಅಥವಾ ಶ್ರದ್ಧಾಸ್ಥಾನಗಳ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡುವವರಿಗೆ ಈ ಮೊದಲು ಇದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು ಈಗ ಜೀವಾವಧಿ ಶಿಕ್ಷೆ ಮಾಡಲಾಗಿದೆ. ಹಾಗೆಯೇ 10 ವರ್ಷಗಳ ಜೈಲು ಶಿಕ್ಷೆಯು ಕನಿಷ್ಟ ಶಿಕ್ಷೆಯಾಗಿದೆ. ಈ ಅಪರಾಧವು ಜಾಮೀನು ರಹಿತವಾಗಿದೆ.
೨. ಮಾನವಾಧಿಕಾರ ಆಯೋಗವು ಈ ಕಾನೂನು ಅಲ್ಪಸಂಖ್ಯಾತರ ವಿರುದ್ಧ ಶಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಯಿದೆ. ಇದರಿಂದ ಸುಳ್ಳು ಆರೋಪ ಮತ್ತು ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಈ ಕಾನೂನು ಅಲ್ಪಸಂಖ್ಯಾತರ ಮೇಲಿನ ಶಸ್ತ್ರವಾಗುವ ಸಾಧ್ಯತೆ !
  • ಭಾರತದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ನಿರಂತರವಾಗಿ ಅಪಮಾನ ಮಾಡುತ್ತಿರುವಾಗಲೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಆದರೆ ಪಾಕಿಸ್ತಾನದಲ್ಲಿ ಶಿಕ್ಷೆಯನ್ನು ಹೆಚ್ಚು ತೀವ್ರಗೊಳಿಸಲಾಗುತ್ತಿರುವುದು ಹಿಂದೂಗಳಿಗೆ ಅವಮಾನಕಾರಿಯಾಗಿದೆ !