ಬುರಹಾನಪುರ (ಮಧ್ಯಪ್ರದೇಶ) – ನಾನು ಬಾಗೇಶ್ವರಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಸಂದರ್ಶನವನ್ನು ನೋಡಿದೆನು. ಅವರು ಯಾವುದೇ ಚಮತ್ಕಾರ ಮಾಡುವುದಿಲ್ಲವೆಂದು ಹೇಳಿದ್ದಾರೆ. ‘ನನಗೆ ನನ್ನ ಇಷ್ಟ ದೇವತೆಯ ಮೇಲೆ ವಿಶ್ವಾಸವಿದ್ದು, ದೇವತೆಯ ಹೆಸರಿನಲ್ಲಿ ನಾನು ಜನರ ಸಮಸ್ಯೆಯನ್ನು ನಿವಾರಿಸುತ್ತೇನೆ’, ಎಂದೂ ಅವರು ಹೇಳಿದ್ದಾರೆ. ಜನರ ಸಮಸ್ಯೆಗಳನ್ನು ನಿವಾರಿಸುವುದು ಕೇವಲ ಶಾಸ್ತ್ರಿಗಳೇ ಮಾಡುತ್ತಾರೆ ಎಂದೇನಿಲ್ಲ, ಹುಸೇನ ಗುಡ್ಡದಲ್ಲಿಯೂ ಮಾಡುತ್ತಾರೆ. ಅವರ ಬಳಿಗೆ ಹೋಗಲು ದೊಡ್ಡ ಪ್ರಮಾಣದಲ್ಲಿ ಗದ್ದಲವಿರುತ್ತದೆ. ಅವರ ವಿಷಯದಲ್ಲಿಯೂ ಇಂದಿನವರೆಗೂ ಯಾರೂ ಏಕೆ ಪ್ರಶ್ನಿಸುವುದಿಲ್ಲ ? ಧೀರೇಂದ್ರಕೃಷ್ಣ ಶಾಸ್ತ್ರ ಸನಾತನ ಧರ್ಮದ ವಿಷಯದಲ್ಲಿ ಮಾತನಾಡುತ್ತಿರುವುದರಿಂದ ಅವರನ್ನು ಪ್ರಶ್ನಿಸಲಾಗುತ್ತಿದೆಯೆಂದು ಭಾಜಪ ಕಾರ್ಯದರ್ಶಿ ಕೈಲಾಸ ವಿಜಯವರ್ಗೀಯ ಇವರು ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ವ್ಯಕ್ತ ಪಡಿಸಿದರು. ಧೀರೇಂದ್ರಕೃಷ್ಣ ಶಾಸ್ತ್ರಿಯವರು ಚಮತ್ಕಾರವನ್ನು ಮಾಡಿ ತೋರಿಸಬೇಕು ಎಂದು ಶಾಮ ಮಾನವ ಕರೆ ನೀಡಿದ್ದಾರೆ. ಇದರಿಂದ ದೊಡ್ಡ ವಿವಾದ ನಿರ್ಮಾಣವಾಗಿದೆ.