ನವ ದೆಹಲಿ – ಶ್ರೀ ಕಾಲಿಮಾತೆಯ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿರುವ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲಾಯಿ ಇವರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಲೀನಾ ಇವರು ಅವರ ಸಾಕ್ಷ್ಯಚಿತ್ರದಲ್ಲಿ ಶ್ರೀ ಕಾಲಿ ಮಾತೆಯ ಕೈಯಲ್ಲಿ ಸಮಲೈಂಗಿಕತೆಯ ಬಾವುಟ ಹಿಡಿದು ಸಿಗರೇಟ ಸೇದುತ್ತಿರುವುದು ತೋರಿಸಿದ್ದರು. ಇದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಇತರ ಕಡೆಗಳಲ್ಲಿ ದೂರು ದಾಖಲಿಸಲಾಗಿತ್ತು. ಇದರಿಂದ ನ್ಯಾಯಾಲಯ ಎಲ್ಲಾ ರಾಜ್ಯಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬಾರದೆಂದು ಹೇಳಿದೆ. ಈ ಪ್ರಕರಣದ ಕುರಿತು ಫೆಬ್ರುವರಿ ೨೦ ರಂದು ಮುಂದಿನ ವಿಚಾರಣೆ ನಡೆಯಲಿದೆ.
ನ್ಯಾಯಾಲಯದ ಆದೇಶದಲ್ಲಿ, ಲೀನಾ ಅವರ ನ್ಯಾಯವಾದಿ, ಅರ್ಜಿದಾರರು ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದ ಪದವಿ ಪಡೆದಿದ್ದಾರೆ. ಅವರು ‘ಕಾಲಿ’ ಎಂದು ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದರು. ಇದರಲ್ಲಿ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿಲ್ಲ. ಸಾಕ್ಷ್ಯಚಿತ್ರದ ಉದ್ದೇಶ ದೇವಿಯನ್ನು ಎಲ್ಲಾರೀತಿಯಲ್ಲಿ ಒಳಗೊಂಡಿರುವ ಅರ್ಥದಲ್ಲಿ ಚಿತ್ರಿಸಲಾಗಿತ್ತು ಎಂದು ಹೇಳಿದರು.
SC protects filmmaker Leena Manimekalai from arrest in ‘Kaali’ poster row#SC #filmmakers #LeenaManimekalai #Kaali https://t.co/itoy7f4NV1
— Oneindia News (@Oneindia) January 20, 2023
ನೂಪುರ ಶರ್ಮಾ ಮತ್ತು ಲೀನಾ ಮಣಿಮೇಕಲಾಯಿ ಇವರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಬೇರೆ ಬೇರೆ ನಿಲುವಿನ ಬಗ್ಗೆ ಜನರಲ್ಲಿ ಚರ್ಚೆ !
ಲೀನಾ ಇವರ ಪ್ರಕಾರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಯಾವ ನಿಲುವು ತಾಳಿದೆ, ಅದು ಈ ಹಿಂದೆ ನೂಪುರ ಶರ್ಮಾ ಇವರ ಪ್ರಕಾರಣದಲ್ಲಿ ಅನುಸರಿಸಲಿಲ್ಲ, ಎಂದು ಸಮಾಜ ಹೇಳುತ್ತಿದೆ. ನೂಪುರ ಶರ್ಮಾ ಇವರು ಇಸ್ಲಾಂ ಪುಸ್ತಕದ ಉದಾಹರಣೆ ನೀಡುತ್ತಾ ಪೈಗಂಬರನ ಪತ್ನಿಯ ಬಗ್ಗೆ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ನ್ಯಾಯಾಲಯವು ನೂಪುರ ಶರ್ಮಾ ಇವರನ್ನು ದೇಶದಲ್ಲಿನ ಅಸಮಧಾನಕ್ಕೆ ಹೊಣೆಗಾರವನ್ನಾಗಿ ಮಾಡಿತ್ತು. ಹಾಗೂ ದೇಶದಲ್ಲಿ ಶರ್ಮಾ ಇವರ ವಿರುದ್ಧ ಅರ್ಜಿಯನ್ನು ಒಂದೇ ಸ್ಥಳದ ವಿಚಾರಣೆ ಬಗ್ಗೆ ಕೂಡ ಕಠೋರ ಟಿಪ್ಪಣಿ ಮಾಡಿತ್ತು. ಇದರ ಜೊತೆಗೆ ನ್ಯಾಯಾಲಯವು ‘ನೂಪುರ ಶರ್ಮಾ ದೇಶದ ಸುರಕ್ಷತೆಗೆ ಅಪಾಯಕಾರಿ ಆಗಿದ್ದಾರೆ’ ಎಂದು ಕೂಡ ಹೇಳಿಕೆ ನೀಡಿತ್ತು, ಅವರನ್ನು ‘ಅಹಂಕಾರಿ’, ‘ಕುಚೇಷ್ಟೆ’, ‘ನಿಷ್ಠುರ’ ಮುಂತಾದ ಪದಗಳ ಬಳಕೆ ಮಾಡಿ ನಿಂದಿಸಿತ್ತು. ಹಾಗೂ ದೇಶದ ಕ್ಷಮೆಯಾಚಿಸಲು ಸೂಚಿಸಿತ್ತು. ತದ್ವಿರುದ್ಧ ಲೀನಾ ಇವರ ಪ್ರಕರಣದಲ್ಲಿ ನ್ಯಾಯಾಲಯದ ದೃಷ್ಟಿಕೋನ ಬೇರೆ ಕಾಣುತ್ತದೆ ಎಂದು ಹೇಳಲಾಗುತ್ತಿದೆ.