ಮಸೀದಿ ಮೇಲಿನ ಬೋಂಗಾದಿಂದಾಗುವ ಶಬ್ದ ಮಾಲಿನ್ಯದ ಪ್ರಕರಣ
ಹರಿದ್ವಾರ (ಉತ್ತರಾಖಂಡ) – ಇಲ್ಲಿಯ ೭ ಮಸೀದಿಗಳಿಗೆ ಭೊಂಗಾದಿಂದುಂಟಾಗುವ ಧ್ವನಿ ಮಾಲಿನ್ಯ ಪ್ರಕರಣದಿಂದಾಗಿ ೩೫ ಸಾವಿರ ರೂಪಾಯಿಯ ದಂಡ ವಿಧಿಸಿದೆ. ಉಪಜಿಲ್ಲಾಧಿಕಾರಿ ಪೂರಣ ಸಿಂಹ ರಾಣ ಇವರು ಈ ಕ್ರಮ ಕೈಗೊಂಡಿದ್ದಾರೆ. ನೈನಿತಾಲ್ ಉಚ್ಚ ನ್ಯಾಯಾಲಯ ಮತ್ತು ಸರಕಾರದಿಂದ ನೀಡಿರುವ ಆದೇಶದ ಮೂಲಕ ಕೆಲವು ಷರತ್ತುಗಳೊಂದಿಗೆ ಮಸೀದಿ ಮೇಲೆ ಭೊಂಗಾ ಹಾಕುವ ಅನುಮತಿ ನೀಡಿತ್ತು. ಅದನ್ನು ಉಲ್ಲಂಘಿಸಿ ಶಬ್ದ ಮಾಲಿನ್ಯ ಮಾಡಲಾಗಿತ್ತು. ವಿಚಾರಣೆಯಿಂದ ಸ್ಪಷ್ಟವಾದ ನಂತರ ಈ ದಂಡ ವಿಧಿಸಿದೆ. ಪಥರಿ ಪೊಲೀಸ್ ಠಾಣೆ ಮತ್ತು ಮಾಲಿನ್ಯ ನಿಯಂತ್ರಣ ಬೋರ್ಡ್ (ರೂಡಕಿ) ಇವರ ವಿಚಾರಣೆಯ ವರದಿಯ ಆಧಾರದಲ್ಲಿ ಈ ಮಸೀದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಅವುಗಳಿಂದ ಸಮಾಧಾನಕಾರಕ ಉತ್ತರ ಬರದೇ ಇದ್ದರಿಂದ ಈ ಮಸೀದಿಗಳಿಗೆ ಪ್ರತಿಯೊಂದಕ್ಕೆ ೫ ಸಾವಿರ ರೂಪಾಯಿಯಂತೆ ದಂಡ ವಿಧಿಸಿದೆ. ಭೊಂಗದ ಅನುಮತಿ ಪಡೆದವರಿಗೆ ದಂಡ ಜಮೆ ಮಾಡಲು ಹೇಳಿದೆ.
Uttarakhand: Haridwar administration fined seven mosques for using loudspeakers that exceeded the permissible decibel levelshttps://t.co/sc3y2Vl6vX
— OpIndia.com (@OpIndia_com) January 20, 2023
ಸಂಪಾದಕರ ನಿಲುವುಪ್ರತಿಯೊಂದು ಸಲ ಈ ಮಸೀದಿ ಮೇಲಿನ ಬೋಂಗಾದ ಮೇಲೆ ನಿಗಾವಿಡುವ ಬದಲು ಮಸೀದಿಗಳ ಮೇಲಿನ ಬೋಂಗದ ಅನುಮತಿ ರದ್ದು ಪಡಿಸುವುದು ಅಗತ್ಯ ! |