ಮಧೆಪುರ (ಬಿಹಾರ) ಇಲ್ಲಿಯ ಮಹಾವಿದ್ಯಾಲಯ ಪರಿಸರದಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗೆ ನಿಷೇಧ !

ವಿದ್ಯಾರ್ಥಿಗಳಿಂದ ವಿರೋಧ !

ಸಮಸ್ತಿಪುರ (ಬಿಹಾರ) – ಬರುವ ವಸಂತ ಪಂಚಮಿಯ ದಿನದಂದು ಮಧೆಪುರದ ಬಿಪಿ ಮಂಡಲ್ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪರಿಸರದಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಯನ್ನು ನಿಷೇಧಿಸಲಾಗಿದೆ. ಇನ್ನೊಂದು ಕಡೆ ಸಮಸ್ತಿಪುರದ ಜಿಲ್ಲಾಧಿಕಾರಿಗಳಿಂದ ಪೂಜೆಯ ಸಮಯದಲ್ಲಿ ‘ಡಿಜೆ’ ಹಾಕಿದರೆ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

೧. ಮಧೆಪುರಾದ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪರಿಸರದಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಯನ್ನು ನಿಷೇಧಿಸಿರುವುದರಿಂದ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಪ್ರಾಚಾರ್ಯರಿಂದ ನೀಡಿರುವ ಆದೇಶದಲ್ಲಿ, ಅನುಮತಿ ಇಲ್ಲದೆ ಯಾರೇ ಶ್ರೀ ಸರಸ್ವತಿ ದೇವಿಯ ಪೂಜೆಯ ಆ ಯೋಜನೆ ಮಾಡಿದರೆ, ಕಾನೂನ ರೀತಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದ್ದಾರೆ.

೨. ವಿದ್ಯಾರ್ಥಿಗಳು, ಪ್ರಾಚಾರ್ಯ ಅರವಿಂದ ಕುಮಾರ ಇವರಿಗೆ ಪೂಜೆಗೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು, ಆದರೆ ಅದನ್ನು ನಿರಾಕರಿಸಲಾಯಿತು. ಮೂರ್ತಿಸ್ಥಾಪನೆ ಮಾಡಲು ಕೂಡ ನಿರಾಕರಿಸಲಾಗಿದೆ ಎಂದು ಹೇಳಿದರು.

೩. ಪ್ರಾಚಾರ್ಯರು, ವಿದ್ಯಾರ್ಥಿಗಳಿಗೆ ಚಿತ್ರದ (ಫೋಟೋ)ಪೂಜೆ ಮಾಡಲು ಹೇಳಲಾಗಿತ್ತು. ಆದರೆ ಅವರು ಅದನ್ನು ಸ್ವೀಕರಿಸದೆ ಗಲಾಟೆ ಮಾಡಿದರು. ಅವರಿಗೆ ಪೂಜೆ ಮಾಡುವುದೇ ಇದ್ದರೆ ಅವರು ವಸತಿಗೃಹದ ಕೊಠಡಿಯಲ್ಲಿ ಮಾಡಬಹುದು. ಸಾರ್ವಜನಿಕ ಪೂಜೆ ಮಾಡಿದರೆ ಅವರವರಲ್ಲಿಯೇ ವಿವಾದ ನಿರ್ಮಾಣವಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಮಹಾವಿದ್ಯಾಲಯದಲ್ಲಿ ವಿದ್ಯೆಯ ದೇವತೆ ಶ್ರೀ ಸರಸ್ವತಿ ದೇವಿಯ ಪೂಜೆಗೆ ಅನುಮತಿ ನಿರಾಕರಿಸುವುದು ಇದು ಶಿಕ್ಷಣ ಕ್ಷೇತ್ರದ ಅಧೋಗತಿಯಾಗಿದೆ !

ಈ ರೀತಿ ನಿಷೇಧ ಹೇರಲು ಮಧೆಪುರ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ?