‘ಕೇಸರಿ ಇದು ಹಿಂದುತ್ವದ ಬಣ್ಣ ಆಗಲು ಸಾಧ್ಯವಿಲ್ಲ !’ (ಅಂತೆ) – ನಟ ಚೇತನ

ಬೆಂಗಳೂರು – ‘ಪಠಾಣ’ ಚಲನಚಿತ್ರದ ನಾಯಕಿ ಕೇಸರಿ ಒಳ ಉಡುಪು ಧರಿಸಿರುವುದರಿಂದ ವಿವಾದ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಟ ಚೇತನ ಕುಮಾರ್ ಇವರು, ”ಕೇಸರಿ ಬಣ್ಣ ಇದು ಹಿಂದುತ್ವದ ಬಣ್ಣ ಇರಲು ಸಾಧ್ಯವಿಲ್ಲ. ಕೇಸರಿ ಬಣ್ಣ ಇದು ತ್ಯಾಗದ ಪ್ರತಿಕವಾಗಿದೆ. ಬಸವಣ್ಣ ಅಥವಾ ಭಗವಾನ್ ಬುದ್ಧ ಮುಂತಾದ ಅನೇಕರು ಕೇಸರಿ ಬಣ್ಣದ ವಸ್ತ್ರ ಉಪಯೋಗಿಸಿದ್ದಾರೆ. ಇಂತಹ ಬಣ್ಣ ಒಂದು ಸಿದ್ದಾಂತಕ್ಕೆ ಜೋಡಿಸುವುದು ಸರಿಯಲ್ಲ. ನಮ್ಮ ದೇಶದ ತ್ರಿವರ್ಣದಲ್ಲಿ ಕೇಸರಿ ಬಣ್ಣ ಇದೆ. ಸಣ್ಣ ಸಣ್ಣ ವಿಷಯದಲ್ಲಿ ತಪ್ಪು ಹುಡುಕುವುದು (ಹಿಂದುತ್ವ ನಿಷ್ಠರ) ಇವರ ರೂಢಿಯಾಗಿದೆ. (ಯಾವಾಗ ಒಂದು ವಿಶಿಷ್ಟ ಧರ್ಮದ ಜನ ಕ್ಷುಲ್ಲಕ ಕಾರಣದಿಂದ ‘ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ’, ಎಂದು ಹೇಳುತ್ತಾರೆ, ಆ ಸಮಯದಲ್ಲಿ ಇಂತಹ ಪುಕ್ಕಟ್ಟೆ ಸಲಹೆ ನೀಡುವ ಧೈರ್ಯ ಚೇತನ ಕುಮಾರ ಮಾಡುವರೆ ? – ಸಂಪಾದಕರು) ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಘಾತ ಮಾಡುವ ಷಡ್ಯಂತ್ರವಾಗಿದೆ. ಇದನ್ನು ರಾಜಕೀಯ ಮಾಡುವುದು, ಇದಕ್ಕೆ ವಿರೋಧಿಸುವರ ವಿಚಾರಗಳ ದಿವಾಳಿತನ ತೋರಿಸುತ್ತದೆ.” ಎಂದು ಹೇಳಿದರು.

(ಸೌಜನ್ಯ : NEWS 1 KANNADA ನ್ಯೂಸ್ 1 ಕನ್ನಡ)

ಸಂಪಾದಕಿಯ ನಿಲುವು

ಹಿಂದೂ ಧರ್ಮವು ತ್ಯಾಗ ಮತ್ತು ಸಮರ್ಪಣೆ ಕಲಿಸುತ್ತದೆ ಮತ್ತು ಕೇಸರಿ ಬಣ್ಣ ಅದರ ಪ್ರತಿಕವಾಗಿದೆ. ಆದ್ದರಿಂದ ಕೇಸರಿ ಮತ್ತು ಹಿಂದೂ ಧರ್ಮ ಇದು ಒಟ್ಟಾಗಿ ಇದೆ. ಅದರ ಬಗ್ಗೆ ಭ್ರಮೆ ನಿರ್ಮಿಸುವ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ !