ಆಝಮಗಡ (ಉತ್ತರಪ್ರದೇಶ)ದಲ್ಲಿ ಬುರ್ಖಾ ಹಾಕಿಕೊಂಡು ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಪೂರೈಸುತಿದ್ದ ೪ ಮಹಿಳೆಯರ ಬಂಧನ

ಅಪರಾಧದಲ್ಲಿ ಕೇವಲ ಮುಸಲ್ಮಾನ ಪುರುಷರಷ್ಟೇ ಅಲ್ಲದೆ ಮಹಿಳೆಯರು ಕೂಡ ಮುಂದಿದ್ದಾರೆ, ಇದು ತೋರಿಸುವ ಘಟನೆ !

ಬುರ್ಖಾ ಧರಿಸಿ ಗಾಂಜಾ ಪೂರೈಸುತ್ತಿದ್ದ ೪ ಮುಸಲ್ಮಾನ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ

ಆಝಮಗಡ (ಉತ್ತರಪ್ರದೇಶ) – ಇಲ್ಲಿ ಪೊಲೀಸರು ಬುರ್ಖಾ ಧರಿಸಿ ಗಾಂಜಾ ಪೂರೈಸುತ್ತಿದ್ದ ೪ ಮುಸಲ್ಮಾನ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಶಬನಮ್, ಮದೀನಾ, ಶಹನಾಜ್ ಮತ್ತು ಶಬಾನಾ ಎಂದು ಇವರ ಹೆಸರುಗಳಾಗಿವೆ. ಆ ಮಹಿಳೆಯರು ಬುರ್ಖಾ ಹಾಕಿ ಕೈದಿಗಳನ್ನು ಭೇಟಿ ಮಾಡಿ ಬೇಕಾದ ಬೆಲೆಗೆ ಗಾಂಜಾ ಪೂರೈಸುತ್ತಿದ್ದರು. ಅವರಿಂದ ೪ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ವಿಚಾರಣೆಯಲ್ಲಿ ಆರೋಪಿ ಮಹಿಳೆಯರು, ಕೈದಿಗಳನ್ನು ಭೇಟಿಯಾಗುವ ನೆಪದಲ್ಲಿ ಬಂದು ಕೈದಿಗಳ ಬೇಡಿಕೆಯ ಪ್ರಕಾರ ಅವರಿಗೆ ಗಾಂಜಾ ಪೂರೈಸುತ್ತಿದ್ದರು. ಇತ್ತಿಚೆಗೆ ಅವರು ಗಾಂಜಾ ನೀಡಲು ಜೈಲು ಹತ್ತಿರ ತಲುಪಿದಾಗ ಪೊಲೀಸರು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬುರ್ಖಾದಲ್ಲಿ ಗಾಂಜಾ ಮುಚ್ಚಿಟ್ಟಿರುವುದು ಕಂಡುಬಂದಿದೆ. ನಾಲ್ಕು ಮಹಿಳೆಯರಿಂದ ನಾಲ್ಕು ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಪೊಲೀಸರು ಆರೋಪಿಯ ವಿರುದ್ಧ ದಂಡ ಸಂಹಿತೆಯ ವಿವಿಧ ಕಲಮಿನಲ್ಲಿ ದೂರು ದಾಖಲಿಸಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.