ನವದೆಹಲಿ – ಪ್ರಪಂಚದಾದ್ಯಂತದ ಜ್ಞಾನಕ್ಕೆ ಉಚಿತವಾಗಿ ಒದಗಿಸುವ ಆನ್‌ಲೈನ್ ಮೂಲಗಳ ಉಪಯುಕ್ತತೆಯನ್ನು ಅಂಗೀಕರಿಸಲಾಗಿದೆ; ಆದರೆ ಕಾನೂನು ವಿವಾದ ಬಗೆಹರಿಸುವುದಕ್ಕಾಗಿ ಈ ಮೂಲಗಳ ಉಪಯೋಗ ಮಾಡುವಾಗ ಎಚ್ಚರದಿಂದಿರಬೇಕೆಂದು, ಸರ್ವೋಚ್ಚ ನ್ಯಾಯಾಲಯ ಒಂದು ಮೊಕ್ಕದಮೆಯ ಆಲಿಕೆಯ ಸಮಯದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದೆ. ಕೇಂದ್ರ ಅಬಕಾರಿ ಶುಲ್ಕ ಕಾನೂನು, ೧೯೮೫ ರ ಅಡಿಯಲ್ಲಿ ಆಮದು ಮಾಡಿಕೊಂಡಿರುವ ‘ಆಲ್ ಇನ್ ಒನ್ ಇಂಟಿಗ್ರೇಟೆಡ್ ಡೆಕ್ಸ್ ಟಾಪ್ ಕಂಪ್ಯೂಟರ್’ನ ಯೋಗ್ಯ ವರ್ಗೀಕರಣದ ಹಿನ್ನೆಲೆಯಲ್ಲಿ ಒಂದು ಮೊಕದ್ದಮೆಯ ಕುರಿತು ನ್ಯಾಯಾಲಯ ಈ ಪ್ರತಿಪಾದನೆ ಮಾಡಿದೆ.
ನ್ಯಾಯಾಲಯವು, `ವಿಕಿಪಿಡಿಯಾ’ದಂತಹ ಆನ್ ಲೈನ್ ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವುದು ಯೋಗ್ಯವಲ್ಲ. ಈ ಮೂಲಗಳು ಜ್ಞಾನದ ಖಜಾನೆಯಾಗಿದ್ದರೂ, ಅದು ಬೇರೆ ಬೇರೆ ಜನರು ಪೂರೈಸಿರುವ ಮಾಹಿತಿಯ ಆಧಾರ ಮತ್ತು ಉಪಯೋಗಿಸಿರುವ ಜನರಿಂದ ಸಂಗ್ರಹಿಸಿರುವ ಆಧಾರದಲ್ಲಿ ಇರುತ್ತದೆ. ಆದ್ದರಿಂದ ಸತ್ಯ ಸತ್ಯತೆಯ ದೃಷ್ಟಿಯಿಂದ ಇಂತಹ ಆನ್ ಲೈನ್ ಮೂಲಗಳ ಮೇಲೆ ಅವಲಂಬಿಸಿರುವುದು ಯೋಗ್ಯವಲ್ಲ. ಈ ಮೂಲ ದಾರಿ ತಪ್ಪಿಸಬಹುದು. ನ್ಯಾಯವಾದಿಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಪ್ರಾಮಾಣಿಕ ಮೂಲಗಳ ಮೇಲೆ ಅವಲಂಬಿಸಬೇಕು, ಇದಕ್ಕಾಗಿ ನ್ಯಾಯಾಲಯ ಮತ್ತು ನ್ಯಾಯಾಂಗ ಅಧಿಕಾರಿ ಇವರು ಪ್ರಯತ್ನಿಸಬೇಕು.