ಭಾರತ ಮತ್ತು ಚೀನಾ ಇವರ ಸಂಬಂಧದಲ್ಲಿ ‘ನಾಟೋ’ ಒತ್ತಡ ಹೆಚ್ಚಿಸುತ್ತಿದೆ !

ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ ಇವರ ಆರೋಪ !

(‘ನಾಟೊ’ ಎಂದರೆ ‘ನಾರ್ಥ ಅಟಲಾಂಟಿಕ ಟ್ರೀಟಿ ಆರ್ಗನೈಜೇಷನ್’ ಹೆಸರಿನ ಜಗತ್ತಿನ ೨೯ ದೇಶಗಳ ಸಹಭಾಗಿತ್ವ ಇರುವ ಒಂದು ಸೈನಿಕ ಸಂಘಟನೆ)

ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ

ಮಾಸ್ಕೊ (ರಷ್ಯಾ) – ಭಾರತ ಮತ್ತು ಚೀನಾ ಇದರಲ್ಲಿನ ಸಂಬಂಧದಲ್ಲಿ ಒತ್ತಡ ಹೆಚ್ಚಿಸುವುದರ ಹಿಂದೆ ‘ನಾಟೋ’ ಇದೆ, ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ ಇವರು ಆರೋಪಿಸಿದ್ದಾರೆ. ಡಿಸೆಂಬರ್ ೨೦೨೨ ರಲ್ಲಿ ಕೂಡ ಲಾವರೋವ ಇದೇ ರೀತಿ ಆರೋಪಿಸಿದ್ದರು.

ಲಾವರೊವ ಇವರು, ನಾಟೋ ಕೇವಲ ಯುರೋಪಿಯನ್ ದೇಶಕ್ಕಾಗಿ ಸೀಮಿತವಾಗಿಲ್ಲ. ಜೂನ್ ೨೦೨೨ ರ ಮಾದ್ರಿದನ ಸಮ್ಮೇಳನದಲ್ಲಿ ಸೈನ್ಯ ನಿಷೇಧದ ಹಿನ್ನೆಲೆಯಲ್ಲಿ ಘೋಷಣೆ ಮಾಡಲಾಗಿತ್ತು. ಈ ಘೋಷಣೆ ವಿಶೇಷವಾಗಿ ಏಷ್ಯಾ-ಪ್ರಶಾಂತ ಕ್ಷೇತ್ರದ ಕುರಿತು ಆಗಿತ್ತು. ಇದರಿಂದ, ಭಾರತ ಮತ್ತು ಚೀನಾ ಇವರಲ್ಲಿನ ಸಂಬಂಧದಲ್ಲಿ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಹಾಗೆ ನೋಡಿದರೆ ನಾಟೋಗೂ ಈ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದರ ಸಂಬಂಧ ಕೇವಲ ಯುರೋಪ್ ಮತ್ತು ಅಮೆರಿಕ ಈ ಕ್ಷೇತ್ರದೊಂದಿಗಿದೆ ಎಂದು ಹೇಳಿದರು.