‘ಹಿಂದೂ ವಿವಾಹ ಕಾಯ್ದೆ’ಯ ಅಡಿಯಲ್ಲಿ ಅಂತರ್ಜಾತಿಯ ವಿವಾಹಗಳು ಕಾನೂನುಬಾಹಿರ ! – ಸರ್ವೋಚ್ಚ ನ್ಯಾಯಾಲಯ

ಕಾನೂನಿನ ಪ್ರಕಾರ, ಮದುವೆಯಾಗಲು ಇಬ್ಬರೂ ಹಿಂದೂಗಳಾಗಿರಬೇಕು !

ನವದೆಹಲಿ : `ಹಿಂದೂ ವಿವಾಹ ಕಾನೂನಿಗನುಸಾರ’ ಅಂತರ್ಜಾತಿಯ ದಂಪತಿಗಳ ವಿವಾಹವನ್ನು ಸಮ್ಮತಿಸುವುದಿಲ್ಲ. ಈ ಕಾಯ್ದೆಯನುಸಾರ ಹಿಂದೂಗಳು ಮಾತ್ರ ಮದುವೆಯಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ೨೦೧೭ ರಲ್ಲಿ ತೆಲಂಗಾಣದಲ್ಲಿ ಹಿಂದೂ ಮಹಿಳೆ ತನ್ನ ಗಂಡನ ವಿರುದ್ಧ ನೀಡಿದ ದೂರಿನ ನಂತರ ಭಾ.ದಂ.ವಿ.ನ ಸೆಕ್ಷನ್ ೪೯೪ ರ ಅಡಿಯಲ್ಲಿ ಗಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದಕ್ಕನುಸಾರ ಮೊದಲನೇ ಗಂಡ ಇರುವಾಗ ಎರಡನೇ ಮದುವೆ ಮಾಡಿಕೊಂಡರೇ 7 ವರ್ಷಗಳವರೆಗೆ ಜೈಲು ಶಿಕ್ಷೆ ನೀಡುವ ವ್ಯವಸ್ಥೆ ಇದೆ. ಈ ಪ್ರಕರಣದಲ್ಲಿ ಮಹಿಳೆ ಹಿಂದೂ ಮತ್ತು ಆರೋಪಿ ಗಂಡ ಭಾರತೀಯ-ಅಮೆರಿಕನ್ ಕ್ರೈಸ್ತರಾಗಿದ್ದಾರೆ. ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ಆ ವ್ಯಕ್ತಿ ಖುಲಾಸೆಗಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು; ಆದರೆ, ಅದನ್ನು ತಿರಸ್ಕರಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಫೆಬ್ರವರಿಯಲ್ಲಿ ಈ ವಿಷಯದ ಬಗ್ಗೆ ಅಂತಿಮ ವಿಚಾರಣೆ ನಡೆಸಲಿದೆ.