ಗುಂಡ್ಲುಪೇಟೆಯಲ್ಲಿ ಮಕರ ಸಂಕ್ರಾಂತಿಯ ದಿನವೂ (ಭಾನುವಾರ) ಕ್ರೈಸ್ತರ ಶಾಲೆಗೆ ರಜೆ ಇಲ್ಲ !

ಹಿಂದೂ ಸಂಘಟನೆಗಳಿಂದ ವಿರೋಧ !

ಶಾಲೆಯಲ್ಲಿ ರಾಷ್ಟ್ರ ನಾಯಕರ ಚಿತ್ರಗಳ ಬದಲು ಏಸುವಿನ ಚಿತ್ರಗಳನ್ನು ಮಾತ್ರ ಹಾಕಿದ್ದರಿಂದ ಕಾರ್ಯಕರ್ತರಿಂದ ಆಕ್ರೋಶ

ಚಾಮರಾಜನಗರ – ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕ್ರೈಸ್ಟ್ ಸಿ.ಎಂ.ಐ. ಪಬ್ಲಿಕ್ ಸ್ಕೂಲ್ ಮಕರ ಸಂಕ್ರಾಂತಿಯ ದಿನ ಅಂದರೆ ಭಾನುವಾರದಂದು ರಜೆ ಇದ್ದರೂ ತರಗತಿ ನಡೆಸುತ್ತಿರುವುದಕ್ಕೆ ಶಾಲೆಯ ಕಾರ್ಯಕಾರಿ ಮಂಡಳಿ ವಿರುದ್ಧ ಹಿಂದೂ ಜಾಗರಣ ವೇದಿಕೆ ಹಾಗೂ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹಿಂದೂ ಸಂಘಟನೆ ಕಾರ್ಯಕರ್ತರು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡರು, ಕಾರ್ಯಕರ್ತರು ‘ಶಾಲೆಯಲ್ಲಿ ಕೇವಲ ಕ್ರೈಸ್ತ ಧರ್ಮದ ಬೋಧನೆ ನಡೆಯುತ್ತದೆ. ಅಲ್ಲದೆ, ಶಾಲೆಯು ಮಕ್ಕಳ ತಲೆಯಲ್ಲಿ ಕ್ರೈಸ್ತ ಧರ್ಮದ ವಿಚಾರಗಳನ್ನು ಮಾತ್ರ ತುಂಬುತ್ತಿದೆ’ ಎಂದು ಆರೋಪಿಸಿದರು. ಶಾಲೆಯಲ್ಲಿ ರಾಷ್ಟ್ರ ನಾಯಕರ ಚಿತ್ರಗಳ ಬದಲು ಏಸುವಿನ ಚಿತ್ರಗಳನ್ನು ಮಾತ್ರ ಹಾಕಿರುವ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

(ಸೌಜನ್ಯ : Dighvijay 24X7 News)

ಸಂಪಾದಕೀಯ ನಿಲುವು

ಇಂತಹ ಶಾಲೆಗಳ ವಿರುದ್ಧ ಕರ್ನಾಟಕದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !