ಕೇವಲ ೨೧ ಅಬ್ಜಾಧೀಶರಲ್ಲಿ ೭೦ ಕೋಟಿ ಭಾರತೀಯರಿಗಿಂತಲೂ ಹೆಚ್ಚು ಸಂಪತ್ತು ! – ‘ಆಕ್ಸ್‌ಫಮ’ ಸಂಸ್ಥೆಯ ವರದಿ

ನವದೆಹಲಿ – ‘ಆಕ್ಸ್‌ಫಮ’ ಈ ಅಂತರರಾಷ್ಟ್ರೀಯ ಸಂಸ್ಥೆಯು ಪ್ರಸ್ತುತಪಡಿಸಿದ ವರದಿಗನುಸಾರ ಭಾರತದಲ್ಲಿನ ೨೧ ಅಬ್ಜಾಧೀಶರಲ್ಲಿ ದೇಶದ ೭೦ ಕೋಟಿ ಭಾರತೀಯರಿಗಿಂತ ಹೆಚ್ಚು ಸಂಪತ್ತು ಇದೆ. ‘ಸರ್ವಾಯವಲ್ ಆಫ್ ದ ರಿಚೆಸ್ಟ್ : ದ ಇಂಡಿಯಾ ಸ್ಟೋರಿ’ ಎಂಬ ಹೆಸರಿನಲ್ಲಿ ‘ಆಕ್ಸ್‌ಫಮ’ನ ವರದಿ ಪ್ರಕಾಶಗೊಳಿಸಲಾದೆ. ಈ ವರದಿಗನುಸಾರ ಭಾರತದಲ್ಲಿ ೨೦೨೦ ರಲ್ಲಿ ಅಬ್ಜಾವಧೀಶರ ಸಂಖ್ಯೆ ೧೦೨ ರಷ್ಟಿತ್ತು, ಅದು ಹೆಚ್ಚಾಗಿ ೨೦೨೨ ರಲ್ಲಿ ೧೬೬ ರಷ್ಟಾಗಿದೆ. ಈ ವರದಿಯನ್ನು ಈಗ ಸ್ವಿಝರ್ಲೇಂಡ್‌ನಲ್ಲಿನ ದಾವೋಸ್ ನಗರದಲ್ಲಿ ನಡೆಯುವ ವಿಶ್ವ ಆರ್ಥಿಕ ಪರಿಷತ್ತಿನಲ್ಲಿ ಮಂಡಿಸಲಾಗುವುದು.

೧. ಈ ವರದಿಗನುಸಾರ, ೨೦೨೦ ರಲ್ಲಿ ಕೊರೋನಾ ಮಹಾಮಾರಿ ಆರಂಭವಾದನಂತರ ನವಂಬರ ೨೦೨೧ ರ ವರೆಗೆ ಅನೇಕ ಭಾರತೀಯರಿಗೆ ಉದ್ಯೋಗದ ಸಮಸ್ಯೆ ನಿರ್ಮಾಣವಾಯಿತು. ಕೆಲವರ ಕೆಲಸ ಹೋಯಿತು. ಅನೇಕರಿಗೆ ಅವರ ಉಳಿತಾಯವನ್ನು ಮುಗಿಸಬೇಕಾಯಿತು; ಆದರೆ ಇನ್ನೊಂದೆಡೆ ಭಂಡವಾಳದಾರರ ಸಂಪತ್ತು ಶೇ. ೧೨೧ ರಷ್ಟು ಹೆಚ್ಚಾಯಿತು. ಭಂಡವಾಳದಾರರ ಸಂಪತ್ತು ದಿನಕ್ಕೆ ೩ ಸಾವಿರದ ೬೦೮ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತಿತ್ತು.

೨. ವರದಿಯಲ್ಲಿ, ೨೦೨೧ ರಲ್ಲಿ ಭಾರತದ ಕೇವಲ ಶೇ. ೫ ರಷ್ಟು ಜನರಲ್ಲಿ ದೇಶದಲ್ಲಿನ ಒಟ್ಟು ಶೇ. ೬೨ ರಷ್ಟು ಜನರ ಸಂಪತ್ತು ಸಂಗ್ರಹವಾಗಿತ್ತು ಹಾಗೂ ಇನ್ನೊಂದೆಡೆ ಭಾರತದ ಶೇ. ೫೦ ರಷ್ಟು ಜನರಲ್ಲಿ ದೇಶದ ಕೇವಲ ಶೇ. ೩ ರಷ್ಟು ಸಂಪತ್ತು ಉಳಿದಿತ್ತು.