ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ಚೆಂಡಮಾರುತದಿಂದ ಉಂಟಾದ ಪ್ರವಾಹದಿಂದಾಗಿ ೧೯ ಜನರ ಸಾವು !

ವಾಷಿಂಗ್ಟನ್ (ಅಮೆರಿಕ) – ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಚೆಂಡಮಾರುತದಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ೧೯ ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಈ ರಾಜ್ಯದಲ್ಲಿ ತುರ್ತು ಸ್ಥಿತಿ ಘೋಷಿಸಿದ್ದಾರೆ. ಕಳೆದ ೨ ವಾರಗಳಿಂದ ಇಲ್ಲಿ ಚೆಂಡಮಾರುತ ಬೀಸುತ್ತಿದ್ದು ಮಳೆ ಕೂಡ ಬೀಳುತ್ತಿದೆ.

ಕ್ಯಾಲಿಫೋರ್ನಿಯಾದ ಗವರ್ನರ್ ಕಚೇರಿಯಲ್ಲಿನ ತುರ್ತು ಪರಿಸ್ಥಿತಿ ಸೇವಾ ಸಂಚಾಲಕರು, ಇದು ರಾಜ್ಯದ ಇತಿಹಾಸದಲ್ಲಿನ ಎಲ್ಲಕ್ಕಿಂತ ದೊಡ್ಡ ಚೆಂಡಮಾರುತ ಆಗಿದೆ. ಈ ಪ್ರವಾಹವು ಜನರಿಗೆ ೧೮೬೧ ರಲ್ಲಿನ ಪ್ರವಾಹದ ಪರಿಸ್ಥಿತಿಯನ್ನು ನೆನಪಿಸಿದೆ. ಆ ಸಮಯದಲ್ಲಿ ೪೩ ದಿನಗಳ ಕಾಲ ಪ್ರವಾಹ ಪರಿಸ್ಥಿತಿ ಉದ್ಭವಿಸಿತ್ತು ಎಂದು ಹೇಳಿದರು.