ಸರಕಾರದ ವಿರುದ್ಧ ಪ್ರಸಾರ ಮಾಡಿದ್ದರಿಂದ ಸೌದಿ ಅರೇಬಿಯಾದಲ್ಲಿನ ಮೌಲ್ವಿಗೆ ಗಲ್ಲು ಶಿಕ್ಷೆ

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ಮುಖಂಡ)

ಆವಾದ್ ಅಲ್-ಕಾರ್ನಿ

ರಿಯಾದ್ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದಲ್ಲಿ ಸಾಮಾಜಿಕ ಜಾಲತಾಣದ ಉಪಯೋಗ ಮಾಡಿದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆವಾದ್ ಅಲ್-ಕಾರ್ನಿ ಎಂಬ ೬೫ ವರ್ಷದ ಮೌಲ್ವಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ, ಎಂದು ‘ದಿ ಗಾರ್ಡಿಯನ್’ ದೈನಿಕದಲ್ಲಿ ಮಾಹಿತಿ ನೀಡಿದೆ. ಕೆಲವು ಮಾಧ್ಯಮಗಳಿಂದ ಇಲ್ಲಿಯವರೆಗೆ ನ್ಯಾಯಾಲಯದಿಂದ ಶಿಕ್ಷೆ ಘೋಷಿಸುವುದು ಬಾಕಿ ಇದೆ, ಎಂದು ಕೂಡ ವೃತ್ತ ಪ್ರಸಿದ್ಧವಾಗಿದೆ. ಮೌಲ್ವಿಯ ಮೇಲೆ ಸಾಮಾಜಿಕ ಜಾಲತಾಣದಿಂದ ಸರಕಾರದ ವಿರುದ್ಧ ವಾರ್ತೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ ೯, ೨೦೧೭ ರಲ್ಲಿ ಆತನನ್ನು ಬಂಧಿಸಲಾಗಿತ್ತು. ಈ ಮೌಲ್ವಿಯ ಟ್ವಿಟರ್ ಖಾತೆಗೆ ೨೦ ಲಕ್ಷ ಫಾಲೊವರ್ಸ್ ಇದ್ದರು. ಸೌದಿ ಅರೇಬಿಯಾದಲ್ಲಿ ಸಾಮಾಜಿಕ ಜಾಲತಾಣದ ಉಪಯೋಗ ಮಾಡುವುದು ಅಪರಾಧವಾಗಿದೆ.