ಸಾಮಾಜಿಕ ಜಾಲತಾಣದಲ್ಲಿ ಅಲ್ಲಾನನ್ನು ‘ಕ್ರೂರಿ’ ಎಂದು ಹೇಳಿದ್ದರಿಂದ ಹಿಂದೂ ಹುಡುಗನ ಬಂಧನ !

ಕರಾಚಿ (ಪಾಕಿಸ್ತಾನ)- ಸಾಮಾಜಿಕ ಮಾಧ್ಯಮದಿಂದ ಅಲ್ಲಾನ ಕಾಲ್ಪನಿಕ ಅಪಮಾನ ಮಾಡಿರುವ ಪ್ರಕರಣದಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ಲವಕುಮಾರ ಎಂಬ ಹಿಂದೂ ಹುಡುಗನನ್ನು ಬಂಧಿಸಲಾಗಿದೆ. ಅವನು ಹಿಂದೂ ಹುಡುಗಿಯರನ್ನು ಅಪಹರಿಸಿ ಅವರನ್ನು ಬಲವಂತದಿಂದ ಮತಾಂತರಗೊಳಿಸುವುದನ್ನು ಟೀಕಿಸಿದ್ದನು.

ಲವಕುಮಾರ ಉರ್ದೂ ಭಾಷೆಯಲ್ಲಿ ಪ್ರಸಾರ ಮಾಡಿದ ವಿಷಯದಲ್ಲಿ, ‘ಓ ಮೌಲಾ (ಅಲ್ಲಾ), ತೀರ್ಪು ನೀಡುವಾಗ ನೀನು ಇಷ್ಟು ಕ್ರೂರಿಯಾಗಲು ಹೇಗೆ ಸಾಧ್ಯ ?’ ಎಂದು ಹೇಳಿದ್ದನು. ಇದರ ಆಧಾರದಲ್ಲಿ ಸ್ಥಳೀಯ ಪೊಲೀಸರು ಈ ಹುಡುಗನನ್ನು ಅವನ ಕುಟುಂಬದವರಿಗೆ ತಿಳಿಸದೇ ಬಂಧಿಸಿದ್ದಾರೆ. ನವೆಂಬರ ೨೨ ರಂದು ಅವನು ಕಾಣೆಯಾಗಿದ್ಧನು. ಅನಂತರ ಡಿಸೆಂಬರ ೨೭ ರಂದು ಅವನು ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಬಗ್ಗೆ ತಿಳಿದಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರಿಂದ ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣ, ದೇವತೆಗಳ ಮೂರ್ತಿಗಳನ್ನು ಭಗ್ನಗೊಳಿಸುವುದು, ದೇವತೆಗಳ ಅಪಮಾನ, ಕಳ್ಳತನದಂತಹ ಕೃತ್ಯಗಳು ನಡೆಯುತ್ತಿರುವಾಗ ಅವರ ವಿರುದ್ಧ ತಕ್ಷಣ ಕಠೋರ ಕಾರ್ಯಾಚರಣೆ ಆಗುವುದಿಲ್ಲ; ಆದರೆ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !