ಅತ್ತಿಗೆಯು ಬಲತ್ಕಾರವನ್ನು ವಿರೋಧಿಸಲು ಪ್ರಯತ್ನಿಸಿದಾಗ ಅಲ್ತಾಫ ಅಹಮ್ಮದನಿಂದ ಕತ್ತು ಹಿಸುಕಿ ಹತ್ಯೆ !

ಶ್ರೀನಗರ – ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು. ಸಂತ್ರಸ್ತೆ ಮಹಿಳೆ ತೀವ್ರವಾಗಿ ವಿರೋಧಿಸಿದಾಗ ಅವನು ಅವಳ ಕತ್ತು ಹಿಸುಕಿ ಹತ್ಯೆ ಮಾಡಿದನು.

೧. ಸಂತ್ರಸ್ತೆ ಮಹಿಳೆಯ ಮಗಳು ಸಂಜೆ ೫ ಗಂಟೆಗೆ ಮನೆಗೆ ಹಿಂತಿರುಗಿದಾಗ ಅವಳು ಅರೆಪ್ರಜ್ಞಾವಸ್ಥೆಯಲ್ಲಿದ್ದ ತಾಯಿಯನ್ನು ನೋಡಿದಳು. ಅವಳು ನೆರೆಯವರಿಗೆ ಇದರ ಮಾಹಿತಿಯನ್ನು ನೀಡಿದಳು. ಅನಂತರ ಸಂತ್ರಸ್ತೆ ಮಹಿಳೆಯನ್ನು ಪಂಪೋರದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವಳು ಮೃತಳಾಗಿದ್ದಾಳೆಂದು ವೈದ್ಯರು ತಿಳಿಸಿದರು.

೨. ಪೊಲೀಸ್ ತನಿಖೆಯ ಸಮಯದಲ್ಲಿ ಮೃತ ಮಹಿಳೆಯ ಪತಿಸಹಿತ ಕುಟುಂಬದವರನ್ನು ವಿಚಾರಣೆಗೆ ಕರೆಯಲಾಯಿತು. ಕುಟುಂಬದವರು ಮೃತ ಮಹಿಳೆಯ ಮೈದುನನ ಮೇಲೆ ಸಂದೇಹ ವ್ಯಕ್ತಿಪಡಿಸಿದರು. ಪೊಲೀಸರು ಮೈದುನ ಅಲ್ತಾಫ ಅಹಮ್ಮದ ಗನಿಯನ್ನು ವಿಚಾರಣೆ ಮಾಡಿದಾಗ ಅವನು ಅಪರಾಧವನ್ನು ಒಪ್ಪಿಕೊಂಡನು. ಅನಂತರ ಆರೋಪಿಯನ್ನು ಪೊಲೀಸರು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಿರಿ !