`ಮನುಸ್ಮೃತಿ ಮತ್ತು ರಾಮಚರಿತ ಮಾನಸ ದ್ವೇಷವನ್ನು ಹರಡುತ್ತಿರುವುದರಿಂದ ಅವುಗಳನ್ನು ಸುಟ್ಟು ಹಾಕಿ !’ (ಅಂತೆ)

ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಇವರ ಹಿಂದೂ ದ್ವೇಷಿ ಹೇಳಿಕೆ !

ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ

ಪಾಟಲಿಪುತ್ರ (ಬಿಹಾರ) – `ಮನುಸ್ಮೃತಿ’ , `ರಾಮಚರಿತ ಮಾನಸ’ ಮತ್ತು `ಬಂಚ್ ಆಫ್ ಥಾಟ್ಸ್’ (ಮಾಜಿ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿ ಬರೆದಿರುವ ಪುಸ್ತಕ) ಈ ರೀತಿಯ ಗ್ರಂಥಗಳನ್ನು ಸುಟ್ಟು ಹಾಕಬೇಕು. ಈ ಗ್ರಂಥಗಳಿಂದ ದ್ವೇಷ ಹಬ್ಬಿಸುವ ಕಾರ್ಯ ಮಾಡಲಾಗುತ್ತಿದೆ. ಜನರನ್ನು ಅನೇಕ ತಲೆಮಾರಿಗೆ ಹಿಂದೆ ತಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಇವರು ಹುರುಳಿಲ್ಲದ ಹೇಳಿಕೆ ನೀಡಿದರು. ಮತ್ತು ಈ ಹೇಳಿಕೆಯ ಬಗ್ಗೆ ಅವರು ದೃಢವಾಗಿದ್ದಾರೆ. ಅವರ ಈ ಹೇಳಿಕೆಯಿಂದ ಹಿಂದೂ ಸಂಘಟನೆಗಳು, ಸಂತರು, ಮಹಂತರು ಮುಂತಾದವರಿಂದ ವಿರೋಧ ವ್ಯಕ್ತವಾಗುತ್ತಿದೆ. ಅಯೋಧ್ಯೆಯಲ್ಲಿನ ಸಂತ ಜಗದ್ಗುರು ವರಮಹಂಸ ಆಚಾರ್ಯರು ಚಂದ್ರಶೇಖರ ಇವರ ನಾಲೆಗೆ ಕತ್ತರಿಸುವವರಿಗೆ ೧೦ ಕೋಟಿಯ ಬಹುಮಾನ ಘೋಷಿಸಿದ್ದಾರೆ .

`ಈ ಗ್ರಂಥದಿಂದಾಗಿ ಶೇ. ೮೫ ರಷ್ಟು ಜನ ಅನೇಕ ತಲೆಮಾರು ಹಿಂದೆ ಹೋಗಿದ್ದಾರೆ !’ (ಅಂತೆ)

ಜನವರಿ ೧೧ ರಂದು ಶಿಕ್ಷಣ ಸಚಿವ ಚಂದ್ರಶೇಖರ ಇವರು ನಾಲಂದ ಮುಕ್ತ ವಿದ್ಯಾಪೀಠದಲ್ಲಿ ೧೫ ನೇ ಪದವಿದಾನ ಸಮಾರಂಭದಲ್ಲಿ ಮಾತನಾಡುವಾಗ, ದೇಶದಲ್ಲಿನ ಜಾತಿಗಳಿಂದ ಸಮಾಜ ಜೋಡಿಸಲಾಗುವುದಿಲ್ಲ, ಆದರೆ ಮುರಿಯುವ ಪ್ರಯತ್ನ ಮಾಡುತ್ತದೆ. ಇದರಲ್ಲಿ ಪ್ರಮುಖವಾದದ್ದು ಮನುಸ್ಮೃತಿ, ಗೋಸ್ವಾಮಿ ತುಳಸಿದಾಸ ವಿರಚಿತ ರಾಮಚರಿತ ಮಾನಸ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಸರಸಂಘಚಾಲಕ ಮಾಧವ ಗೋಳವಲಕರ ಬರೆದಿರುವ `ಬಂಚ್ ಆಫ್ ಥಾಟ್ಸ್’ ಈ ಗ್ರಂಥದಿಂದ ಶೇ. ೮೫ ರಷ್ಟು ಜನರನ್ನು ಅನೇಕ ತಲೆಮಾರು ಹಿಂದೆ ಕೊಂಡೊಯ್ಯುವ ಕೆಲಸ ಮಾಡಿದೆ. ಈ ಗ್ರಂಥಗಳಿಂದ ದೇಶದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳನ್ನು ದೇವಸ್ಥಾನದ ಪ್ರವೇಶದಿಂದ ತಡೆಯಲಾಗಿದೆ.ಈ ಗ್ರಂಥ ದ್ವೇಷದ ಬಿತ್ತನೆ ಮಾಡುತ್ತದೆ. ಡಾ. ಬಾಬಾ ಸಾಹೇಬ ಅಂಬೇಡ್ಕರರು ಈ ಗ್ರಂಥವನ್ನು ವಿರೋಧಿಸಿದ್ದರು. ಅವರು ಮನುಸ್ಮೃತಿಯನ್ನು ಸುಡುವ ಪ್ರಯತ್ನ ಮಾಡಿದ್ದರು. ಹಾಗೂ ರಾಮಚರಿತ ಮಾನಸ ಈ ಗ್ರಂಥದ ಬಗ್ಗೆ ಕೂಡ ಡಾ. ಅಂಬೇಡ್ಕರರು ಟೀಕಿಸಿದ್ದರು. `ಶಿಕ್ಷಣದ ಅಧಿಕಾರ ದೊರೆತ ನಂತರ ಕೆಳ ಜಾತಿಯಲ್ಲಿನ ಜನರು ವಿಷವುಳ್ಳ’ವರಾಗುತ್ತಾರೆ ಎಂದು ಈ ಗ್ರಂಥದಲ್ಲಿ ಹೇಳಲಾಗಿದೆ. ಒಂದು ಯುಗದಲ್ಲಿ ಮನುಸ್ಮೃತಿ, ಎರಡನೆಯ ಯುಗದಲ್ಲಿ ರಾಮಚರಿತ ಮಾನಸ ಹಾಗೂ ಮೂರನೆಯ ಯುಗದಲ್ಲಿ `ಬಂಚ್ ಆಫ್ ಥಾಟ್ಸ್’ನಿಂದ ಸಮಾಜದಲ್ಲಿ ದ್ವೇಷವೇ ಹಬ್ಬಿಸಿದೆ. ಯಾವುದೇ ದೇಶ ದ್ವೇಷದಿಂದಲ್ಲ, ಪ್ರೇಮದಿಂದ ಶ್ರೇಷ್ಠ ಆಗಬಹುದು.

ಚಂದ್ರಶೇಖರ ಇವರ ನಾಲೆಗೆ ಕತ್ತರಿಸುವವರಿಗೆ ೧೦ ಕೋಟಿ ರೂಪಾಯ ಬಹುಮಾನ

ಜಗದ್ಗುರು ಪರಮಹಂಸ ಆಚಾರ್ಯ

ಚಂದ್ರಶೇಖರ ಇವರ ಹೇಳಿಕೆಯ ನಂತರ ಅಯೋಧ್ಯೆಯಲ್ಲಿನ ಸಂತ ಜಗದ್ಗುರು ಪರಮಹಂಸ ಆಚಾರ್ಯರು ಟೀಕಿಸುತ್ತಾ, ಚಂದ್ರಶೇಖರ ಇವರ ಹೇಳಿಕೆಯಿಂದ ಎಲ್ಲಾ ದೇಶದಲ್ಲಿನ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದು ಸನಾತನದ ಅಪಮಾನವಾಗಿದೆ. ಈ ಹೇಳಿಕೆಯ ಬಗ್ಗೆ ಕಾನೂನರೀತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಒಂದು ವಾರದ ಒಳಗೆ ಅವರು ಕ್ಷಮೆಯಾಚಿಸದಿದ್ದರೆ ನಾವು ಅವರ ನಾಲಿಗೆ ಕತ್ತರಿಸುವವನಿಗೆ ೧೦ ಕೋಟಿ ರೂಪಾಯ ಬಹುಮಾನ ನೀಡುವ ಘೋಷಣೆ ಮಾಡುವೆವು ಎಂದು ಕರೆ ನೀಡಿದರು.

ಭಾಜಪದಿಂದಲೂ ನಿಷೇಧ

ಭಾಜಪದ ರಾಷ್ಟ್ರೀಯ ವಕ್ತಾರರಾದ ಶಹಜಾದಾ ಪುನವಾಲ ಇವರು ಟ್ರೀಟ್ ಮಾಡಿ ಚಂದ್ರಶೇಖರ ಇವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು, ಬಿಹಾರದ ಶಿಕ್ಷಣ ಸಚಿವರು ರಾಮಚರಿತ ಮಾನಸ ಗ್ರಂಥಕ್ಕೆ ದ್ವೇಷಪಸರಿಸುವ ಗ್ರಂಥ ಎನ್ನುತ್ತಾರೆ. ಕೆಲವುದಿನಗಳ ಹಿಂದೆ ರಾಷ್ಟ್ರೀಯ ಜನತಾ ದಳದ ಜಗದಾನಂದ ಸಿಂಹ ಇವರು ಶ್ರೀರಾಮಜನ್ಮಭೂಮಿಯನ್ನು ದ್ವೇಷದ ಭೂಮಿ ಎಂದು ಹೇಳಿದ್ದರು. ಇದು ಯೋಗಾನುಯೋಗ ಅಲ್ಲವೇ ? ಎಲ್ಲ ಮತದಾರರನ್ನು ಆಕರ್ಷಿಸಲು ನಡೆಯುತ್ತಿದೆ. ಇಂತಹವರ ಮೇಲೆ ಯಾವಾಗ ಕ್ರಮಕೈಗೊಳ್ಳಲಾಗುವುದು ? ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ರಾಜ್ಯದ ಶಿಕ್ಷಣ ಸಚಿವರು ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದರೆ ರಾಜ್ಯದಲ್ಲಿನ ಶಿಕ್ಷಣ ಯಾವ ರೀತಿ ಇರಬಹುದು ? ಇದರ ಕಲ್ಪನೆ ಕೂಡ ಮಾಡಲಾಗದು !

ಯಾವುದಾದರೂಂದು ವಿಚಾರ ಸುಟ್ಟು ಹಾಕುವುದರಿಂದ ಅದು ಎಂದಿಗೂ ನಾಶವಾಗುವುದಿಲ್ಲ. ಯಾವುದಾದರೂಂದು ವಿಚಾರ ತಪ್ಪು ಎಂದು ಹೇಳುವ ಬದಲು ಯೋಗ್ಯವಾದ ವಿಚಾರ ಯಾವುದು ?’, ಎಂದು ಹೇಳುವುದು ಅವಶ್ಯಕವಾಗಿದೆ; ಆದರೆ `ಮನುಸ್ಮೃತಿ, ಮತ್ತು ರಾಮಚರಿತ ಮಾನಸ ಇದನ್ನು ತಪ್ಪು ಎಂದು ಹೇಳುವವರು’, ಅದರಲ್ಲಿ ಏನು ತಪ್ಪಿದೆ ಮತ್ತು ಯೋಗ್ಯ ವಿಚಾರ ಏನು ಇರಬೇಕಾಗಿತ್ತು’, ಇದನ್ನು ಮಂಡಿಸಲು ಹಿಂಜರಿಯುತ್ತಾರೆ !

ಈ ಎರಡೂ ಗ್ರಂಥಗಳಲ್ಲಿ ಕೋಟ್ಯಾಂತರ ಜನರ ಶ್ರದ್ಧೆ ಇದೆ. ಇದೇ ಶ್ರದ್ಧೆ ಚಂದ್ರಶೇಖರ ನಂತಹವರು ಹೇಗೆ ನಾಶ ಮಾಡಲು ಸಾಧ್ಯ ?