`ಅಣುಬಾಂಬ್ ನ ಸಮಯ ಬಂದರೆ ಹುಲ್ಲು ತಿನ್ನುತ್ತೇವೆ’, ಎಂದು ಹೇಳುವ ಪಾಕಿಸ್ತಾನಕ್ಕೆ ಹುಲ್ಲು ತಿನ್ನುವ ಸಮಯ ಬಂತು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಣದುಬ್ಬರ ಮುಗಿಲು ಮುಟ್ಟಿದೆ. ಅಲ್ಲಿ ಜನರ ಬಳಿ ಹಣವಿದ್ದರೂ, ಗೋಧಿ ಹಿಟ್ಟು ಸಿಗುವುದು ಕಠಿಣವಾಗಿದೆ. ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಝುಲ್ಫಿಕರ ಭುಟ್ಟೋ ಇವರು ನೀಡಿದ್ದ ಹೇಳಿಕೆ ಈಗ ಪಾಕಿಸ್ತಾನಿ ನಾಗರಿಕರು ಮತ್ತು ಜಗತ್ತಿನಾದ್ಯಂತ ಜನರಿಗೆ ನೆನಪಾಗುತ್ತಿದೆ. ಭುಟ್ಟೋರವರು 1970 ರಲ್ಲಿ `ಸಂದರ್ಭ ಬಂದರೆ ಪಾಕಿಸ್ತಾನಿಯರು ಹುಲ್ಲು ತಿನ್ನುತ್ತಾರೆ, ಉಪವಾಸವಿರುತ್ತಾರೆ; ಆದರೆ ಅಣುಬಾಂಬ ಖಂಡಿತವಾಗಿಯೂ ಪಡೆಯುತ್ತಾರೆ’, ಎಂದು ಹೇಳಿದ್ದರು. ಭುಟ್ಟೋರವರ ಈ ಹೇಳಿಕೆ ಈಗ ನಿಜವಾಗುತ್ತಿರುವುದು ಕಾಣಿಸುತ್ತಿದೆ. ಪಾಕಿಸ್ತಾನವು ಅಣುಬಾಂಬ ತಯಾರಿಸಿದ್ದರೂ, ಇಂದು ಅಲ್ಲಿಯ ಪ್ರಜೆಗಳಿಗೆ ಹುಲ್ಲು ತಿನ್ನುವ ಪರಿಸ್ಥಿತಿ ಬಂದಿದೆ. ದೇಶದಲ್ಲಿ ಅಣ್ವಸ್ತ್ರಗಳಿವೆ; ಆದರೆ ಗೋಧಿ ಹಿಟ್ಟಿಗಾಗಿ ಮನೆಮನೆ ಅಲೆದಾಡಬೇಕಾಗುತ್ತಿದೆ. ಪಾಕಿಸ್ತಾನದ ಬಳಿ ಕೇವಲ 3 ವಾರಗಳ ವಿದೇಶಿ ವಿನಿಮಯ ಹಣ ಬಾಕಿ ಇದೆ ಮತ್ತು ಈ ದೇಶ ಈಗ ಆರ್ಥಿಕವಾಗಿ ದಿವಾಳಿಯತ್ತ ಸಾಗಿದೆ.

5 ರೂಪಾಯಿಯ `ಪಾರ್ಲೆ ಜಿ’ 50 ರೂಪಾಯಿಗೆ ಮಾರಾಟ !

ಪಾಕಿಸ್ತಾನದಲ್ಲಿ ಹಣದುಬ್ಬರ ಎಷ್ಟು ಹೆಚ್ಚಾಗಿದೆಯೆಂದರೆ, ಭಾರತದಲ್ಲಿ 5 ರೂಪಾಯಿಗೆ ಸಿಗುವ `ಪಾರ್ಲೆ ಜಿ’ ಬಿಸ್ಕೀಟು ಪಾಕಿಸ್ತಾನದಲ್ಲಿ 50 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ 50 ರೂಪಾಯಿಗಳಿಗೆ ಮಾರಾಟ ಮಾಡುವ ಬ್ರೆಡ ಪಾಕಿಸ್ತಾನದಲ್ಲಿ 150 ರಿಂದ 200 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಿಟ್ಟಿನ ಚೀಲಗಳ ಸುರಕ್ಷತೆಗಾಗಿ ಎ.ಕೆ.-47 ರೈಫಲ್ ಹೊಂದಿರುವ ಸೈನಿಕರನ್ನು ನಿಯುಕ್ತಿಗೊಳಿಸಲಾಗಿದೆ. ಪಾಕಿಸ್ತಾನಿ ಜನರ ಕೆಲವು ವಿಡಿಯೋ ಪ್ರಸಾರವಾಗುತ್ತಿದೆ. ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ವಾಹನದ ಕೆಳಗೆ ಮಲಗಿದ್ದಾನೆ ಮತ್ತು `ಒಂದು ವೇಳೆ ನಿಮಗೆ ಹಿಟ್ಟು ಕೊಡಲು ಸಾಧ್ಯವಾಗದಿದ್ದರೆ, ವಾಹನವನ್ನು ನಮ್ಮ ಮೇಲೆ ಹತ್ತಿಸಿರಿ ನಮ್ಮನ್ನು ಮುಗಿಸಿರಿ’ ಎಂದು ಹೇಳುತ್ತಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಜನರು ಹಿಟ್ಟಿಗಾಗಿ ಹೊಡೆದಾಡುವುದು ಕಾಣಿಸುತ್ತಿದೆ. `ಈ ಗಲಭೆ ಪಾಕಿಸ್ತಾನದಲ್ಲಿ ಹಿಟ್ಟಿಗಾಗಿ ಆಗುತ್ತಿದೆ’ ಎಂದು ಅದರ ಕೆಳಗೆ ಬರೆಯಲಾಗಿದೆ. ಇನ್ನೊಂದು ವಿಡಿಯೋದಲ್ಲಿ ನೂರಾರು ಮಹಿಳೆಯರು ಟ್ರಕ್ಕನ ಹಿಂದೆ ಓಡುತ್ತಿದ್ದಾರೆ. ಈ ಟ್ರಕ್ಕನಲ್ಲಿ ಹಿಟ್ಟಿನ ಚೀಲ ತುಂಬಿರುವುದು ಕಾಣಿಸುತ್ತಿದೆ.