ಬಕ್ಸರ (ಬಿಹಾರ) ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧಿಸುವ ಗ್ರಾಮಸ್ಥರಿಗೆ ಪೊಲೀಸರಿಂದ ಥಳಿತ !

ಆಕ್ರೋಶಗೊಂಡ ಗ್ರಾಮಸ್ಥರಿಂದ ಪೊಲೀಸರ ಮೇಲೆ ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ದಾಳಿ

ಬಕ್ಸರ (ಬಿಹಾರ) – ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿರುವ ಗ್ರಾಮಸ್ಥರು ಪೊಲೀಸ್ ಮತ್ತು ಇಲ್ಲಿಯ ವಿದ್ಯುತ್ ಕೇಂದ್ರದ ಮೇಲೆ ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದರು. ಗ್ರಾಮಸ್ಥರು ಪೊಲೀಸರ ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಈ ಸಮಯದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದರಿಸಲು ಪ್ರಯತ್ನಿಸಿದರು. ಈ ಹಿಂಸಾಚಾರದಲ್ಲಿ ೪ ಪೊಲೀಸರು ಗಾಯಗೊಂಡರು. ಪ್ರಸ್ತುತ ಅಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತು ಮಾಡಲಾಗಿದೆ.

ಕಳೆದ ೮೫ ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಜನವರಿ ೧೦ ರಂದು ಗ್ರಾಮಸ್ಥರು ಈ ಸ್ಥಾವರದ ಮುಖ್ಯ ಪ್ರವೇಶ ದ್ವಾರಕ್ಕೆ ಬಿಗ ಹಾಕಿ ಧರಣಿ ನಡೆಸಿದರು. ಆ ಸಮಯದಲ್ಲಿ ಪೊಲೀಸರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ; ಆದರೆ ರಾತ್ರಿ ಪೊಲೀಸರು ಗ್ರಾಮಸ್ಥರ ಮನೆಗೆ ನುಗ್ಗಿ ಅವರನ್ನು ಥಳಿಸಿದ್ದಾರೆ. ಹಾಗೂ ೪ ಜನರನ್ನು ಬಂಧಿಸಿದ್ದಾರೆ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮರುದಿನ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

ಸಂಪಾದಕೀಯ ನಿಲುವು

ಪ್ರಜಾಪ್ರಭುತ್ವದ ಮಾರ್ಗದಿಂದ ವಿರೋಧ ವ್ಯಕ್ತಪಡಿಸುವ ಜನರಿಗೆ ಥಳಿಸಿದರೆ ಜನರು ಉದ್ವಿಗ್ನವಾದರೆ, ಅದನ್ನು ತಪ್ಪು ಎಂದು ಹೇಗೆ ಹೇಳಬಹುದು ? ಜನರನ್ನು ಥಳಿಸಿರುವ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !