ತಮಿಳುನಾಡಿನ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದಲ್ಲಿನ ಕೆಲವು ವಿಷಯಗಳ ಸೋರಿಕೆ ಆಗಿದ್ದರಿಂದ ಕೋಲಾಹಲ

ರಾಜ್ಯಪಾಲರಿಂದ ಸಭಾಧ್ಯಾಗ !

ಚೆನ್ನೈ (ತಮಿಳುನಾಡು) – ಜನವರಿ ೯ ರಂದು ತಮಿಳುನಾಡು ವಿಧಾನಸಭೆಯ ಅಧಿವೇಶನದ ಮೊದಲು ದಿನ ರಾಜ್ಯಪಾಲ ರವಿ ಇವರು ಅವರ ಭಾಷಣದಲ್ಲಿನ ಕೆಲವು ವಿಷಯಗಳ ಸೋರಿಕೆ ಮಾಡಿದ್ದರಿಂದ ಮತ್ತು ಕೆಲವು ಹೊಸ ಸೂತ್ರಗಳನ್ನು ಮಂಡಿಸಿರುವುದರಿಂದ ದೊಡ್ಡ ಕೋಲಾಹಲವೆದ್ದಿತು. ಆದ್ದರಿಂದ ಸಭಾಗೃಹದ ಕಾರ್ಯಕಲಾಪದಲ್ಲಿ ಕೇವಲ ಮೂಲ ಭೂಷಣ ಮಾಡುವ ಪ್ರಸ್ತಾವ ಮುಖ್ಯಮಂತ್ರಿ ಸ್ಟ್ಯಾಲಿನ್ ಇವರು ಮಂಡಿಸಿದರು. ಅದರ ನಂತರ ರಾಜ್ಯಪಾಲರು ಸಭಾತ್ಯಾಗ ಮಾಡಿದರು.

೧. ರಾಜ್ಯಪಾಲ ರವಿ ಇವರು ಕೆಲವು ದಿನಗಳ ಹಿಂದೆ ತಮಿಳುನಾಡಿನ ಉಲ್ಲೇಖ `ತಮಿಳಗಂ’ ಎಂದು ಮಾಡಿದ್ದರು. ಈ ಹೆಸರಿಗಾಗಿ ಅವರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಭಾಷಣದ ಸಮಯದಲ್ಲಿ ದ್ರಾವಿಡ ಮುನ್ನೆತ್ರಿ ಕಳಘಂ (ದ್ರಾವಿಡ ಪ್ರಗತಿಪರ ಸಂಘ) ಮತ್ತು ಅವರ ಸಹಕಾರಿ ಪಕ್ಷದವರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಅವರ ಭಾಷಣದಲ್ಲಿ ಅಡೆತಡೆ ನಿರ್ಮಿಸುವ ಪ್ರಯತ್ನ ಮಾಡಿದರು; ಆದರೆ ರಾಜ್ಯಪಾಲರು ಭಾಷಣ ಮುಂದುವರೆಸಿದರು. ಅದರ ಜೊತೆಗೆ ಅವರು ಭಾಷಣದಲ್ಲಿ ಸಮಯೋಚಿತ ತಮ್ಮ ಕೆಲವು ವಿಷಯ ಪ್ರಸ್ತಾಪಿಸಿದರು.

೨. ರಾಜ್ಯಪಾಲರ ಈ ಕೃತಿಯಿಂದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಖೇದ ವ್ಯಕ್ತಪಡಿಸಿದರು ಮತ್ತು ಮೂಲ ಭಾಷಣದ ವಿಷಯ ಸಮಾವೇಶಗೊಳಿಸುವ ಬಗ್ಗೆ ಪ್ರಸ್ತಾಪ ಮಂಡಿಸಿದರು. ಆ ಪ್ರಸ್ತಾಪ ಅನುಮೋದಿಸಲಾಯಿತು. ರಾಜ್ಯಪಾಲರ ಉಪಸ್ಥಿತಿಯಲ್ಲಿ ಈ ಘಟನೆಗಳು ನಡೆದವು. ಇದರ ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕಲಾಪದ ಸಮಾರೋಪ ಆಗುವ ಮೊದಲೇ ರಾಜ್ಯಪಾಲರು ಸಭಾತ್ಯಾಗ ಮಾಡಿದರು. ರಾಜ್ಯಪಾಲರು ಈ ರೀತಿ ಸಭಾ ತ್ಯಾಗ ಮಾಡಿರುವುದು ಇದೇ ಮೊದಲ ಘಟನೆ ಎಂದು ಹೇಳಲಾಗುತ್ತಿದೆ.