ಮಾಸ್ಕೊ-ಗೋವಾ ವಿಮಾನದಲ್ಲಿ ಬಾಂಬ್ ನ ವದಂತಿ !

ಪಣಜಿ – ಜನವರಿ ೯.೨೦೨೩ ರಂದು ರಾತ್ರಿ ರಷ್ಯಾಯಾದ ರಾಜಧಾನಿ ಮಾಡಿಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ `ರಷ್ಯನ್ ಏರ್ಲೈನ್ಸ್’ ನ ವಿಮಾನದಲ್ಲಿ ಬಾಂಬ್ ಇಟ್ಟಿರುವ ಮಾಹಿತಿ ದೊರೆಯಿತು. ಈ ಮಾಹಿತಿ ದೊರೆಯುತ್ತಲೇ ವಿಮಾನ ತುರ್ತಾಗಿ ಗುಜರಾತನ ಜಾಮನಗರದಲ್ಲಿ ಇಳಿಸಲಾಯಿತು. ಅದರ ನಂತರ ಬಾಂಬ್ ನಿಷ್ಕ್ರಿಯ ದಳ, ಗುಜರಾತ್ ಪೋಲಿಸ ಮತ್ತು ಅಗ್ನಿಶಾಮಕ ದಳ ವಿಮಾನ ನಿಲ್ದಾಣಕ್ಕೆ ತಲುಪಿತು. ಈ ವಿಮಾನದಲ್ಲಿನ ೨೪೪ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಗಳನ್ನು ಇಳಿಸಲಾಯಿತು. ನಂತರ ರಾಷ್ಟ್ರೀಯ ಭದ್ರತಾ ಪಡೆಯ ಸೈನಿಕರು ವಿಮಾನದ ಪರೀಕ್ಷಣೆ ಮಾಡಿದರು; ಆದರೆ ಪರೀಕ್ಷಣೆಯಲ್ಲಿ ಬಾಂಬ್ ಅಥವಾ ಯಾವುದೇ ಅನುಮಾನಸ್ಪದ ವಸ್ತು ದೊರೆಯಲಿಲ್ಲ. ಬಾಂಬ್ ಇಟ್ಟಿರುವುದು ವದಂತಿಯಾಗಿತ್ತು.

೧. ಜನವರಿ ೯, ೨೦೨೩ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಮಾಸ್ಕೋದಿಂದ ಗೋವಾಕ್ಕೆ ವಿಮಾನ ಉಡಾವಣೆ ಮಾಡಿತು. ರಾತ್ರಿ ೯.೩೦ ಗಂಟೆಯ ಸುಮಾರಿಗೆ ವಿಮಾನದಲ್ಲಿ ಬಾಂಬ್ ಇರುವ ವಿಷಯ ತಿಳಿಯಿತು. ಅಲ್ಲಿಯವರೆಗೆ ವಿಮಾನವು ಭಾರತೀಯ ವಾಯು ಪ್ರದೇಶದಲ್ಲಿ ಪ್ರವೇಶ ಮಾಡಿತ್ತು. ಈ ಮಾಹಿತಿ ದೋರೆಯುತ್ತಲೇ ಸುರಕ್ಷಾ ವ್ಯವಸ್ಥೆ ಚುರುಕಾಯಿತು. ನಂತರ ಹತ್ತಿರದ ಜಾಮನಗರ ವಿಮಾನ ನಿಲ್ದಾಣದಲ್ಲಿ ರಾತ್ರಿ ೯.೫೦ ಕ್ಕೆ ವಿಮಾನ ಕೆಳಗಿಳಿಸಲಾಯಿತು.

೨. `ಗೋವಾ ಏರ್ ಟ್ರಾಫಿಕ್ ಕಂಟ್ರೋಲ್’ ಗೆ `ಇ ಮೇಲ್’ ಮೂಲಕ ವಿಮಾನದಲ್ಲಿ ಬಾಂಬ್ ಇರುವ ಮಾಹಿತಿ ನೀಡಲಾಗಿತ್ತು; ಆದರೆ ಈ `ಇ-ಮೇಲ್’ ಯಾರು ಮತ್ತು ಯಾಕೆ ಕಳುಹಿಸಿದರು ? ಇದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

೩. ಅಧಿಕಾರಿಗಳು, ಸಂಪೂರ್ಣ ವಿಮಾನ ಹಾಗೂ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗಳನ್ನು ಅನೇಕ ಸಲ ಪರಿಶೀಲನೆ ಮಾಡಲಾಯಿತು; ಆದರೆ ಎಲ್ಲೂ ಯಾವುದೇ ಸಂಶಯಸ್ಪದ ವಸ್ತು ಕಂಡು ಬರಲಿಲ್ಲ. ಅದರ ನಂತರ ಸ್ವಲ್ಪ ಸಮಯದಲ್ಲಿ ವಿಮಾನ ಮತ್ತೆ ಗೋವಾದ ದಿಕ್ಕಿಗೆ ಪ್ರಯಾಣ ಬೆಳೆಸಿತು.