ಹತ್ಯೆ, ರಕ್ತ, ಶಾರೀರಿಕ ಆಕ್ರಮಣಗಳನ್ನು ತೋರಿಸುವುದನ್ನು ನಿಲ್ಲಿಸಿ !

ಚಾನೆಲ್ ಗಳಿಗೆ ಕೇಂದ್ರ ಸರಕಾರದಿಂದ ಮಾರ್ಗದರ್ಶಿಸೂಚಿ ಜಾರಿ !

ನವ ದೆಹಲಿ – ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಎಲ್ಲ ಚಾನೆಲ್ ಗಳಿಗೆ ಮಾರ್ಗದರ್ಶಿಸೂಚಿ ಜಾರಿ ಮಾಡಿದೆ. ಇದರಲ್ಲಿ ಈ ವಾಹಿನಗಳ ಕಾರ್ಯಕ್ರಮಗಳಿಂದ ಹತ್ಯೆ, ಶಾರೀರಿಕ ಆಕ್ರಮಣಗಳು, ಶವ ಮುಂತಾದ ತೊಂದರೆದಾಯಕ ವಿಷಯಗಳನ್ನು ತೋರಿಸುವುದನ್ನು ನಿಲ್ಲಿಸಬೇಕೆಂದು ಹೇಳಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜಾರಿಗೊಳಿಸಿರುವ ಮಾರ್ಗದರ್ಶಿಸೂಚಿಯಲ್ಲಿ,

1. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಹಿಂಸಾತ್ಮಕ ವಿಡಿಯೋಗಳನ್ನು ಯಾವುದೇ ರೀತಿಯಲ್ಲಿ ಸಂಕಲನಗೊಳಿಸದೇ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ.

2. ವ್ಯಕ್ತಿಯ ಶವ ಮತ್ತು ಎಲ್ಲೆಡೆ ರಕ್ತದ ಕಲೆ, ಹಿಂಸೆ, ಅಪಘಾತ ಮತ್ತು ಗಾಯಾಳುಗಳ ಚಿತ್ರಣ ಮತ್ತು ಛಾಯಾಚಿತ್ರಗಳನ್ನು ತೋರಿಸುವುದು ತೊಂದರೆ ನೀಡುವಂತಹದ್ದಾಗಿದೆ. ಇಂತಹ ಹಿಂಸಾತ್ಮಕ ಮತ್ತು ಅಸ್ಥಿರಗೊಳಿಸುವಂತಹ ವಾರ್ತೆಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

3. ಸಚಿವಾಲಯವು ಈ ಮಾರ್ಗದರ್ಶಿಸೂಚಿಯಲ್ಲಿ ಕೆಲವು ಘಟನೆಗಳ ಪ್ರಸಾರವನ್ನು ಉಲ್ಲೇಖಿಸಿದೆ. ಈ ಮೂಲಕ ಶವ, ರಕ್ತ, ಹಿಂಸೆ ನಡೆಯುತ್ತಿರುವಾಗಿನ ಚಿತ್ರಣವನ್ನು ತೋರಿಸಲಾಗಿತ್ತು. ಇದರಲ್ಲಿ ಕೆಲವು ವಾರ್ತೆಗಳು ಮುಂದಿನಂತಿದೆ.

ಅ. ಡಿಸೆಂಬರ 30, 2022 : ಅಪಘಾತದಲಿ ಗಾಯಗೊಂಡಿರುವ ಕ್ರಿಕೆಟ ಪಟುವಿನ ದುಃಖಕರ ವಿಡಿಯೋವನ್ನು ಸಂಕಲನ ಮಾಡದೇ ಮತ್ತು ಕೇವಲ ಮಸುಕಾಗಿ ತೋರಿಸಲಾಯಿತು.

ಆ. ಅಗಸ್ಟ 28, 2022 : ಒಬ್ಬ ವ್ಯಕ್ತಿಯ ಶವವನ್ನು ಎಳೆದುಕೊಂಡು ಹೋಗುತ್ತಿರುವುದು ತೋರಿಸಲಾಗಿದೆ. ಆ ಸಮಯದಲ್ಲಿ ಎಲ್ಲೆಡೆ ರಕ್ತದ ಕಲೆಗಳು ಬೀಳುತ್ತಿರುವುದು ಕಾಣಿಸುತ್ತಿತ್ತು.

ಇ. ಜುಲೈ 6, 2022 : ಪಾಟಲೀಪುತ್ರದಲ್ಲಿ ಒಂದು ಕಲಿಕೆಯ ತರಗತಿಯಲ್ಲಿ ಓರ್ವ ಶಿಕ್ಷಕನು 5 ವರ್ಷದ ವಿದ್ಯಾರ್ಥಿಗೆ ಅಮಾನವೀಯವಾಗಿ ಥಳಿಸುತ್ತಿರುವುದನ್ನು ತೋರಿಸಲಾಗಿತ್ತು. ಅದೇ ರೀತಿ ಈ ಘಟನೆಯ ವಿಡಿಯೋವನ್ನು ಧ್ವನಿಯನ್ನು ಕೇಳಿಸದೇ ತೋರಿಸಲಾಯಿತು. ಆ ಸಮಯದಲ್ಲಿ ಹುಡುಗ ಕರುಣೆ ತೋರಿಸುವಂತೆ ಅಂಗಲಾಚಿಸುತ್ತಾ ಕಿರಚಾಡುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋ 9 ನಿಮಿಷಗಳ ವರೆಗೆ ತೋರಿಸಲಾಗಿದೆ.

ಈ. ಮೇ 16, 2022 : ಕರ್ನಾನಕದ ಬಾಗಲಕೋಟ ಜಿಲ್ಲೆಯಲ್ಲಿ ಓರ್ವ ಮಹಿಳಾ ನ್ಯಾಯವಾದಿಗೆ ಪಕ್ಕದ ಮನೆಯವರು ಹಲ್ಲೆ ಮಾಡುತ್ತಿರುವುದು ತೋರಿಸಲಾಗಿದೆ.

ಉ. ಮೇ 4, 2022 : ತಮಿಳುನಾಡಿನ ರಾಜಾಪಲಾಯಮನಲ್ಲಿ ಓರ್ವ ವ್ಯಕ್ತಿಯು ತನ್ನ ಸಹೋದರಿಯ ಹತ್ಯೆ ಮಾಡಿದನು. ಹತ್ಯೆ ಮಾಡುತ್ತಿರುವ ವಿಡಿಯೋವನ್ನು ತೋರಿಸಲಾಗಿದೆ.

ಸಂಪಾದಕೀಯ ನಿಲುವು

ಸರಕಾರಕ್ಕೆ ಇದು ಏಕೆ ಹೇಳಬೇಕಾಗುತ್ತಿದೆ ? ಚಾನೆಲ್ ಗಳಿಗೆ ತಿಳಿಯುವುದಿಲ್ಲವೇ ? ಸಮಾಜಕ್ಕೆ ವಿಕೃತ ಮತ್ತು ಕೆಟ್ಟ ವಿಷಯಗಳನ್ನು ತೋರಿಸಿ ಸಮಾಜದ ನೈತಿಕತೆ ಮತ್ತು ಮನಸ್ಸನ್ನು ಕೆಡಿಸುವಂತಹ ಚಾನೆಲ್ ಗಳಿಗೆ ಶಿಕ್ಷಿಸುವುದು ಆವಶ್ಯಕ !